For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಶುಕ್ರವಾರ, 10 ಹೊಸ ಸಿನಿಮಾ; 'ಕಾಂತಾರ'ಕ್ಕೆ ಶುರು ಟಫ್ ಕಾಂಪಿಟಿಷನ್!

  |

  ಕಾಂತಾರ ಬಿಡುಗಡೆಯಾಗಿ ಇಪ್ಪತ್ತು ದಿನಗಳನ್ನು ಪೂರೈಸಿದರೂ ಸಹ ಚಿತ್ರದ ಅಬ್ಬರ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ವಾರಾಂತ್ಯದ ದಿನಗಳಲ್ಲಿ ಮಾತ್ರವಲ್ಲದೆ ವಾರದ ರಜಾರಹಿತ ದಿನಗಳಲ್ಲಿಯೂ ಸಹ ಚಿತ್ರ ತುಂಬು ಪ್ರದರ್ಶನವನ್ನು ಕಾಣುತ್ತಿದೆ.

  ಇನ್ನು ಕಾಂತಾರ ಚಿತ್ರ ಬಿಡುಗಡೆಯಾದಾಗ ಆ ವಾರದ ಹಿಂದೆ ಚಿತ್ರಮಂದಿರದ ಅಂಗಳಕ್ಕೆ ಬಂದಿದ್ದ ಚಿತ್ರಗಳು, ಕಾಂತಾರ ಜತೆ ಬಿಡುಗಡೆಯಾದ ಚಿತ್ರಗಳು ಹಾಗೂ ನಂತರದ ವಾರಗಳಲ್ಲಿ ಬಿಡುಗಡೆಯಾದ ಚಿತ್ರಗಳು ಕಾಂತಾರದ ಎದುರು ಮಕಾಡೆ ಮಲಗಿದ್ದವು. ಅದರಲ್ಲಿಯೂ ಹಿಟ್ ಟಾಕ್ ಪಡೆದುಕೊಂಡಂತಹ ಗುರು ಶಿಷ್ಯರು, ಗಾಡ್ ಫಾದರ್ ರೀತಿಯ ಸಿನಿಮಾಗಳೇ ಕಾಂತಾರ ಬಿಡುಗಡೆಗೊಂಡ ನಂತರ ಚಿತ್ರಮಂದಿರಗಳನ್ನು ಕಳೆದುಕೊಂಡು ಮಂಕಾದದ್ದನ್ನು ಸ್ವತಃ ಜನರೇ ಕಂಡಿದ್ದಾರೆ.

  ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರ ಭಾರತದಲ್ಲಿಯೂ ಕಾಂತಾರ ಮುಂದೆ ಹಲವಾರು ಬಾಲಿವುಡ್ ಚಿತ್ರಗಳು ತಲೆಬಾಗಿವೆ. ರಶ್ಮಿಕಾ ಮಂದಣ್ಣ ಅಭಿನಯದ ಚೊಚ್ಚಲ ಬಾಲಿವುಡ್ ಚಿತ್ರ ಗುಡ್ ಬೈ ತನ್ನ ತಾರಾಗಣದಲ್ಲಿ ಅಮಿತಾಭ್ ಬಚ್ಚನ್ ರೀತಿಯ ಮೆಗಾ ಹೀರೋ ಇದ್ದರೂ ಸಹ ಚಿತ್ರ ಕಾಂತಾರ ಎದುರು ಮಣ್ಣು ಮುಕ್ಕಿತ್ತು. ಹೀಗೆ ದೇಶದಾದ್ಯಂತ ಅಬ್ಬರಿಸುತ್ತಿರುವ ಕಾಂತಾರ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಚಿತ್ರಕ್ಕೆ ಹೊಸದಾಗಿ ಹಲವಾರು ಸ್ಪರ್ಧಿಗಳು ಎದುರಾಗಿವೆ. ಹೀಗೆ ಈ ವಾರ ರೇಸ್‌ಗೆ ಇಳಿದಿರುವಂತಹ ಚಿತ್ರಗಳು ಕಾಂತಾರ ಚಿತ್ರಕ್ಕೆ ಹಿನ್ನಡೆ ಮಾಡುವಂತಹ ಸಾಮರ್ಥ್ಯ ಹೊಂದಿವೆಯಾ ಎಂಬ ಪ್ರಶ್ನೆ ಇದೀಗ ಮೂಡಿದೆ.

  ತೆರೆಗೆ ಬರುತ್ತಿರುವ ಸಿನಿಮಾಗಳ ಪಟ್ಟಿ

  ತೆರೆಗೆ ಬರುತ್ತಿರುವ ಸಿನಿಮಾಗಳ ಪಟ್ಟಿ

  ಅಕ್ಟೋಬರ್ 21ರ ಶುಕ್ರವಾರ ತೆರೆಕಾಣುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

  ಕನ್ನಡ: ಹೆಡ್ ಬುಷ್, ಕಥಾಲೇಖನ ಹಾಗೂ ಭೂ ನಾಟಕ ಮಂಡಳಿ

  ತೆಲುಗು: ಜಿನ್ನಾ, ಓರಿ ದೇವುಡಾ ಮತ್ತು ಸ್ಪಾರ್ಕ್ 1.0

  ತಮಿಳು: ಪ್ರಿನ್ಸ್, ಸರ್ದಾರ್

  ಮಲಯಾಳಂ: ಪಡವೆಟ್ಟು ಹಾಗೂ ಮಾನ್ಸ್ಟರ್

  ಕಾಂತಾರಕ್ಕೆ ಟಕ್ಕರ್ ಕೊಡ್ತಾರಾ ಡಾಲಿ? ಬುಕಿಂಗ್ ಮೂಡಿಸಿತು ಅನುಮಾನ

  ಕಾಂತಾರಕ್ಕೆ ಟಕ್ಕರ್ ಕೊಡ್ತಾರಾ ಡಾಲಿ? ಬುಕಿಂಗ್ ಮೂಡಿಸಿತು ಅನುಮಾನ

  ಇನ್ನು ಈ ಚಿತ್ರಗಳ ಪೈಕಿ ಅತಿ ಹೆಚ್ಚಿನ ವಿಶ್ವಾಸ ಹಾಗೂ ನಿರೀಕ್ಷೆ ಮೂಡಿಸಿರುವುದು ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರ. ಭೂಗತ ಲೋಕದ ಡಾನ್ ಜಯರಾಜ್ ಕತೆಯನ್ನು ಹೆಡ್ ಬುಷ್ ಚಿತ್ರದ ಮೂಲಕ ತೆರೆಮೇಲೆ ತೋರಿಸಲಾಗುತ್ತಿದ್ದು ಚಿತ್ರ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಆದರೆ ಹೆಡ್ ಬುಶ್ ಚಿತ್ರದ ಬುಕಿಂಗ್ ಮಾತ್ರ ಡಲ್ ಹೊಡೆಯುತ್ತಿದೆ. ಇಷ್ಟು ದಿನ ಕಳೆದರೂ ಕಾಂತಾರ ಚಿತ್ರಕ್ಕೆ ಇಂದು ಆಗುತ್ತಿರುವ ಬುಕಿಂಗ್ ರೀತಿ ಇಂದು ಬಿಡುಗಡೆಯಾಗಿರುವ ಹೆಡ್ ಬುಷ್ ಚಿತ್ರದ ಬುಕ್ಕಿಂಗ್ ಕೂಡ ಇಲ್ಲ.

  ತಮಿಳಿನಲ್ಲಿ ದೊಡ್ಡ ಸಿನಿಮಾಗಳು ತೆರೆಗೆ

  ತಮಿಳಿನಲ್ಲಿ ದೊಡ್ಡ ಸಿನಿಮಾಗಳು ತೆರೆಗೆ

  ಅತ್ತ ಕಾಲಿವುಡ್ ಅಂಗಳದಲ್ಲಿ ಕಾರ್ತಿ ಅಭಿನಯದ ಸರ್ದಾರ್ ಹಾಗೂ ಶಿವಕಾರ್ತಿಕೇಯನ್ ಅಭಿನಯದ ಪ್ರಿನ್ಸ್ ಚಿತ್ರಗಳು ತೆರೆಗೆ ಬಂದಿವೆ. ಈ ಎರಡೂ ಚಿತ್ರಗಳು ಸಹ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದ್ದು ತಮಿಳುನಾಡು ನೆಲದಲ್ಲಿ ಕಾಂತಾರ ಚಿತ್ರಕ್ಕೆ ಪೈಪೋಟಿ ನೀಡುವುದು ಖಚಿತ. ಎರಡೂ ಚಿತ್ರಗಳು ಸಹ ದೊಡ್ಡ ಮಟ್ಟದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರಗಳು ಒಳ್ಳೆಯ ವಿಮರ್ಶೆ ಪಡೆದುಕೊಂಡರೆ ತಮಿಳುನಾಡಿನಲ್ಲಿ ಕಾಂತಾರ ಚಿತ್ರಕ್ಕೆ ಎಫೆಕ್ಟ್ ಆಗಲಿದೆ.

  ಮಲಯಾಳಂನಲ್ಲೂ ದೊಡ್ಡ ಚಿತ್ರಗಳು

  ಮಲಯಾಳಂನಲ್ಲೂ ದೊಡ್ಡ ಚಿತ್ರಗಳು

  ತಮಿಳಿಗಿಂತ ಮಲಯಾಳಂನಲ್ಲಿ ಕಾಂತಾರ ಚಿತ್ರಕ್ಕೆ ಬೃಹತ್ ಸ್ಪರ್ಧಿಗಳು ಎದುರಾಗಿದ್ದಾರೆ. ಮೋಹನ್ ಲಾಲ್ ಅಭಿನಯದ ಮಾನ್ಸ್ಟರ್ ಹಾಗೂ ನಿವಿನ್ ಪೌಲಿ ಅಭಿನಯದ ಪಡವೆಟ್ಟು ಚಿತ್ರಗಳು ಇಂದು ಬಿಡುಗಡೆಯಾಗುತ್ತಿದ್ದು, ಕಾಂತಾರ ಕಲೆಕ್ಷನ್ ಮೇಲೆ ಖಚಿತವಾಗಿ ಹೊಡೆತ ಬೀಳಲಿದೆ. ಸದಾ ಕಂಟೆಂಟ್ ಇರುವ ಚಿತ್ರಗಳಿಗೆ ಬೆಂಬಲವನ್ನು ನೀಡುವ ಮಲಯಾಳಂ ಸಿನಿಪ್ರೇಕ್ಷಕರು ಕಂಟೆಂಟ್ ಇರುವ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಲಿದ್ದಾರೆ. ಈ ಎರಡೂ ಚಿತ್ರಗಳು ಸಾಮಾನ್ಯ ಚಿತ್ರಕತೆಯನ್ನು ಹೊಂದಿದ್ದರೆ ಕೇರಳದಲ್ಲಿ ಕಾಂತಾರ ಜಯಭೇರಿ ಬಾರಿಸಲಿದೆ. ಕೇರಳ ನೆಲದಲ್ಲಿ ಕಾಂತಾರ ನಿನ್ನೆಯಷ್ಟೆ ( ಅಕ್ಟೋಬರ್ 20 ) ಬಿಡುಗಡೆಗೊಂಡಿದೆ.

  English summary
  List of movies releasing on October 21st Friday; New competitors for Rishab Shetty's Kantara
  Friday, October 21, 2022, 9:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X