»   » 'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

Posted By:
Subscribe to Filmibeat Kannada

ಕನ್ನಡದಲ್ಲಿ ಈಗ ಸಾಕಷ್ಟು ಕುತೂಹಲವನ್ನು ಹುಟ್ಟಿಸಿರುವ ಸಿನಿಮಾ ಅಂದರೆ ಅದು 'ಕುರುಕ್ಷೇತ್ರ'. ಈ ಚಿತ್ರದ ಬಗ್ಗೆ ಎಲ್ಲರಿಗೂ ಅನೇಕ ಪ್ರಶ್ನೆಗಳಿತ್ತು. ಅದರಲ್ಲಿಯೂ ಚಿತ್ರದಲ್ಲಿ ಬರುವ ಪಾತ್ರಗಳ ಬಗ್ಗೆ ಜನರಿಗೆ ದೊಡ್ಡ ನಿರೀಕ್ಷೆ ಇತ್ತು.

'ಕುರುಕ್ಷೇತ್ರ'ಕ್ಕೆ ಅದ್ಧೂರಿ ಚಾಲನೆ: ಎಲ್ಲ ಊಹಾಪೋಹಗಳಿಗೆ ಸಿಕ್ತು ಉತ್ತರ

ಸಿನಿಮಾದಲ್ಲಿ ಬರುವ ಪಾತ್ರದಲ್ಲಿ ಕನ್ನಡದ ಯಾವ ಯಾವ ನಟರು ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ಮಾಪಕ ಮುನಿರತ್ನ ಪಾತ್ರಗಳ ಕುರಿತ ಗುಟ್ಟನ್ನು ರಟ್ಟು ಮಾಡಿದರು.

ಒಟ್ಟು ಕಲಾವಿದರು

'ಕುರುಕ್ಷೇತ್ರ' ಚಿತ್ರಕ್ಕೆ ಸದ್ಯ ಬಹುಪಾಲು ಎಲ್ಲ ಪಾತ್ರಗಳಿಗೆ ಕಲಾವಿದರ ಆಯ್ಕೆ ಆಗಿದೆ. ಚಿತ್ರದಲ್ಲಿ ನಟ ಅಂಬರೀಶ್, ದರ್ಶನ್, ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ಸಾಯಿ ಕುಮಾರ್, ಶಶಿಕುಮಾರ್, ಶ್ರೀನಾಥ್, ನಿಖಿಲ್ ಕುಮಾರ್, ಬಾಲಿವುಡ್ ನಟ 'ಡ್ಯಾನಿಶ್', ಹರಿಪ್ರಿಯಾ, ನಟಿ ಲಕ್ಷ್ಮಿ ಹಾಗೂ ನಟಿ ಸ್ನೇಹ ನಟಿಸಲಿದ್ದಾರೆ

'ದುರ್ಯೋಧನಾಗಿ ದರ್ಶನ್'

ನಟ ದರ್ಶನ್ ಸಿನಿಮಾದಲ್ಲಿ ದುರ್ಯೋಧನನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಈಗಾಗಲೇ ಚಿತ್ರದಲ್ಲಿ ದರ್ಶನ್ ಅವರ ಲುಕ್ ಹೊರಬಿದ್ದಿದೆ.

ಎಕ್ಸ್ ಕ್ಲೂಸಿವ್: 'ದುರ್ಯೋಧನ'ನಾಗಿ ದರ್ಶನ್ ದರ್ಶನ

ಭೀಷ್ಮ ಅಂಬರೀಶ್'

ನಟ ಅಂಬರೀಶ್ ಚಿತ್ರದಲ್ಲಿ ಭೀಷ್ಮನ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರಂತೆ.

'ಕೃಷ್ಣನಾಗಿ ರವಿಚಂದ್ರನ್'

'ಕುರುಕ್ಷೇತ್ರ' ಚಿತ್ರದಲ್ಲಿ ನಟ ರವಿಚಂದ್ರನ್ ಕೃಷ್ಣನ ಅವತಾರ ತಾಳಲಿದ್ದಾರೆ.

'ಭೀಮ'ನನ್ನ ಆಯ್ಕೆ ಮಾಡಿದ್ದು ದರ್ಶನ್! ದಚ್ಚು ಬಗ್ಗೆ 'ಡ್ಯಾನಿಶ್' ಹೇಳಿದ್ದೇನು?

'ಕರ್ಣನಾಗಿ ಅರ್ಜುನ್ ಸರ್ಜಾ'

ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕರ್ಣನ ಪಾತ್ರದಲ್ಲಿ ನಟಿಸಲಿದ್ದಾರೆ.

'ಅಭಿಮನ್ಯುವಾಗಿ ನಿಖಿಲ್ ಕುಮಾರ್'

ಅಭಿಮನ್ಯು ಪಾತ್ರದಲ್ಲಿ ನಟ ನಿಖಿಲ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದಲ್ಲಿ ಅವರ ಲುಕ್ ಸಹ ರಿವೀಲ್ ಆಗಿದೆ.

ದರ್ಶನ್ 'ಕೌರವ'ನಾಗಲು ಸಿದ್ದವಾಗಿದ್ದು ಯಾಕೆ?

'ಭೀಮನಾಗಿ ಡ್ಯಾನಿಶ್'

ಬಾಲಿವುಡ್ ನಟ ಡ್ಯಾನಿಶ್ ಅಖ್ತರ್ ಚಿತ್ರದಲ್ಲಿ ಭೀಮನಾಗಿ ಮಿಂಚಲಿದ್ದಾರೆ.

ದ್ರೌಪದಿ ಮತ್ತು ಕುಂತಿ

ಕುರುಕ್ಷೇತ್ರ ಚಿತ್ರದ ಪ್ರಮುಖ ಪಾತ್ರಗಳಾದ ದ್ರೌಪದಿ ಪಾತ್ರದಲ್ಲಿ ನಟಿ ಸ್ನೇಹ ನಟಿಸುತ್ತಿದ್ದು, ಕುಂತಿಯಾಗಿ ನಟಿ ಲಕ್ಷ್ಮಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದ ಪಾತ್ರಗಳು

ಚಿತ್ರದಲ್ಲಿ ಶಕುನಿಯಾಗಿ ರವಿಶಂಕರ್, ಧರ್ಮರಾಯನಾಗಿ ಶಶಿಕುಮಾರ್, ಧೃತರಾಷ್ಟ್ರನಾಗಿ ಶ್ರೀನಾಥ್, ದುಶ್ಯಾಸನನಾಗಿ ರವಿಚೇತನ್, ದ್ರೋಣಾಚಾರ್ಯರಾಗಿ ಶ್ರೀನಿವಾಸ್ ಮೂರ್ತಿ ಹಾಗೂ ನಟಿ ಹರಿಪ್ರಿಯಾ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

English summary
Here is the List of star cast in Kannada Movie 'Kurukshetra'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada