Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ಅತಿಹೆಚ್ಚು ಸಿನಿಮಾ ಟಿಕೆಟ್ ಮಾರಾಟವಾಗಿದ್ದು ಯಾವ ನಗರದಲ್ಲಿ? ಇಲ್ಲಿದೆ ಟಾಪ್ 10 ಪಟ್ಟಿ
ಭಾರತದಲ್ಲಿ ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಆಗಿರುವ 2022 ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಈ ವರ್ಷದಲ್ಲಿ ಬಿಡುಗಡೆಗೊಂಡ ಚಿತ್ರಗಳ ಪೈಕಿ ಬಹುತೇಕ ಚಿತ್ರಗಳು ಯಶಸ್ಸು ಗಳಿಸಿ ನಿರ್ಮಾಪಕರಿಗೆ, ವಿತರಕರಿಗೆ, ಪ್ರದರ್ಶಕರಿಗೆ ಹಾಗೂ ಇತರೆ ಸಿನಿಮಾ ಸಂಬಂಧಿತ ವ್ಯಾಪಾರಸ್ಥರಿಗೆ ಲಾಭ ತಂದುಕೊಟ್ಟಿವೆ. ಈ ಮೂಲಕ ಕಳೆದೆರಡು ವರ್ಷಗಳಲ್ಲಿ ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ನಷ್ಟ ಅನುಭವಿಸಿದ್ದ ಹಾಗೂ ಕೆಲಸ ಇಲ್ಲದೇ ಮಂಕಾಗಿದ್ದವರಲ್ಲಿ ಸಂತಸ ಮೂಡಿದೆ.
ಹೀಗೆ ಮತ್ತೆ ಫೀನಿಕ್ಸ್‌ನಂತೆ ಈ ವರ್ಷದಲ್ಲಿ ಸಿನಿಮಾ ಕ್ಷೇತ್ರ ಎದ್ದು ನಿಂತಿದ್ದು, ದೇಶದ ಬರೋಬ್ಬರಿ ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ. ಅದರಲ್ಲಿಯೂ ಕೆಜಿಎಫ್ ಚಾಪ್ಟರ್ 2 ಹಾಗೂ ಆರ್ ಆರ್ ಆರ್ ಚಿತ್ರಗಳು ಸಾವಿರ ಕೋಟಿ ಗಳಿಕೆ ಮಾಡಿದರೆ, ಕಾಂತಾರ, ವಿಕ್ರಮ್, ಕಾಶ್ಮೀರ್ ಫೈಲ್ಸ್ ರೀತಿಯ ಚಿತ್ರಗಳು ಬೃಹತ್ ಗಳಿಕೆಯನ್ನು ಮಾಡಿದವು.
2022:
ಈ
ವರ್ಷ
ಅತಿ
ಹೆಚ್ಚು
ಫ್ಲಾಪ್
ಸಿನಿಮಾ
ನೀಡಿದ
ಸ್ಟಾರ್
ನಟ
ಯಾರು?
ಹೀಗೆ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡಲು ಕಾರಣ ಚಿತ್ರಗಳ ಕಂಟೆಂಟ್ ಹಾಗೂ ಆ ಚಿತ್ರಗಳನ್ನು ಚಿತ್ರಮಂದಿರದಲ್ಲಿ ಆನಂದಿಸಬೇಕು ಎಂದು ಚಿತ್ರಮಂದಿರಗಳಿಗೆ ಬಂದ ಸಿನಿ ರಸಿಕರು. ಈ ಮೂಲಕ ದೇಶದ ವಿವಿಧೆಡೆ ದೊಡ್ಡ ಸಂಖ್ಯೆಯಲ್ಲಿ ಟಿಕೆಟ್‌ಗಳು ಮಾರಾಟವಾಗಿವೆ. ಹಾಗಿದ್ದರೆ ದೇಶದ ಯಾವ ನಗರಗಳಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾಗಿದೆ ಎಂಬ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..

ಟಾಪ್ 10 ಪಟ್ಟಿ
ಈ ವರ್ಷ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಹತ್ತು ನಗರಗಳ ಪಟ್ಟಿ ಇಲ್ಲಿದೆ.
1. ಹೈದರಾಬಾದ್
2. ಬೆಂಗಳೂರು
3. ಮುಂಬೈ
4. ದೆಹಲಿ
5. ಚೆನ್ನೈ
6. ಪುಣೆ
7. ಕೊಚ್ಚಿ
8. ಕೋಲ್ಕತ್ತಾ
9. ಕೊಯಮತ್ತೂರು
10. ವಿಶಾಖಪಟ್ಟಣಂ

ಹೈದರಾಬಾದ್ ನಂ 1
ಸಿನಿಮಾ ಎಂದರೆ ತೆಲುಗು ಜನತೆ ಅಪಾರ ಪ್ರೀತಿ ತೋರಿಸುತ್ತಾರೆ ಎಂಬುದು ತಿಳಿದಿರುವ ಸಂಗತಿ. ಈ ವರ್ಷವೂ ಸಹ ಅದು ಸಾಬೀತಾಗಿದ್ದು, ಬುಕ್ ಮೈ ಶೋನಲ್ಲಿ ಈ ವರ್ಷ ಅತಿಹೆಚ್ಚು ಟಿಕೆಟ್‌ಗಳು ಮಾರಾಟವಾಗಿರುವುದು ಹೈದರಾಬಾದ್ ನಗರದಲ್ಲಿ ಎಂಬುದು ಬಹಿರಂಗವಾಗಿದೆ. ಇನ್ನು ತೆಲುಗು ರಾಜ್ಯಗಳ ಮತ್ತೊಂದು ನಗರವಾದ ವಿಶಾಖಪಟ್ಟಣಂ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ದಕ್ಷಿಣ ಭಾರತದ ದರ್ಬಾರ್
ಇನ್ನು ಬುಕ್ ಮೈ ಶೋನಲ್ಲಿ ಈ ವರ್ಷ ಅತಿಹೆಚ್ಚು ಟಿಕೆಟ್ ಮಾರಾಟವಾಗಿರುವ ನಗರಗಳ ಪಟ್ಟಿಯಲ್ಲಿ ಆರು ನಗರಗಳು ದಕ್ಷಿಣ ಭಾರತದ ನಗರಗಳೇ ಆಗಿವೆ. ಅದರಲ್ಲಿಯೂ ಅಗ್ರ ಎರಡು ಸ್ಥಾನಗಳನ್ನು ಹೈದರಾಬಾದ್ ಹಾಗೂ ಬೆಂಗಳೂರು ಅಲಂಕರಿಸಿವೆ. ಈ ಮೂಲಕ ಈ ವರ್ಷ ಸಿನಿಮಾ ವಿಷಯದಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ದರ್ಬಾರ್ ಜೋರಾಗಿದೆ.