»   » ರಾಜಕೀಯ ಅಖಾಡದಲ್ಲಿ ಪೈಪೋಟಿಗೆ ನಿಂತ ಸ್ಯಾಂಡಲ್ ವುಡ್ ನಟಿಯರು

ರಾಜಕೀಯ ಅಖಾಡದಲ್ಲಿ ಪೈಪೋಟಿಗೆ ನಿಂತ ಸ್ಯಾಂಡಲ್ ವುಡ್ ನಟಿಯರು

Posted By:
Subscribe to Filmibeat Kannada
ರಾಜಕೀಯದ ಅಖಾಡದಲ್ಲಿ ಇಳಿದ ಸ್ಯಾಂಡಲ್ ವುಡ್ ನಟಿಯರು | Filmibeat Kannada

ಕರ್ನಾಟಕದಲ್ಲಿ ಈಗ ಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಚುನಾವಣೆ ಹತ್ತಿರಕ್ಕೆ ಬರುತ್ತಿದ್ದ ಹಾಗೆ ಹೊಸ ಹೊಸ ಪಕ್ಷಗಳು ತಲೆ ಎತ್ತಿ ನಿಲ್ಲುತ್ತಿದೆ. ಅದರ ಜೊತೆಗೆ ಕನ್ನಡ ಚಿತ್ರರಂಗಕ್ಕೂ ಚುನಾವಣೆಯ ಬಿಸಿ ತಟ್ಟಿದೆ.

ಇತ್ತ ನಟ ಉಪೇಂದ್ರ ತಮ್ಮ ಪ್ರಜಾಕೀಯ ಎಂಬ ಆಲೋಚನೆಯಿಂದ ಹೊಸ ಪಕ್ಷ ಸೃಷ್ಟಿ ಮಾಡಿದ್ದಾರೆ. ನಟಿ ಅಮೂಲ್ಯ ಕೂಡ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರೊಂದಿಗೆ ಸ್ಯಾಂಡಲ್ ವುಡ್ ನ ಅನೇಕರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ.

ಈ ಹಿನ್ನಲೆಯಲ್ಲಿ ಈಗಾಗಲೇ ರಾಜಕೀಯ ರಂಗ ಪ್ರವೇಶಿಸಿದ ಕನ್ನಡದ ನಟಿಮಣಿಯರು ಪಟ್ಟಿ ಇಲ್ಲಿದೆ, ನೋಡಿ...

ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದ ನಟಿ ರಮ್ಯಾ ಸದ್ಯ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿದ್ದಾರೆ. ಸಿನಿಮಾ ಬಿಟ್ಟು 2012 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ರಮ್ಯಾ ಮಂಡ್ಯ ಕ್ಷೇತ್ರದಿಂದ ಎಂ.ಪಿ ಕೂಡ ಆಗಿದ್ದರು.

ರಮ್ಯಾಗೂ ಗಣೇಶ್ ಪತ್ನಿ ಶಿಲ್ಪಾಗೂ ಆಗ್ಬರಲ್ಲ: ಯಾಕೆ.? ಕಾರಣ ಬಹಿರಂಗ.!

ತಾರಾ ಅನುರಾಧ

ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ನಟಿ ತಾರಾ ಈಗ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ. 2009 ರಲ್ಲಿ ಭಾರತೀಯ ಜನತಾ ಪಾರ್ಟಿ ಸೇರಿದ ತಾರಾ ವಿಧಾನ ಪರಿಷತ್ ಸದಸ್ಯ ಆಗಿದ್ದಾರೆ.

ಪೂಜಾ ಗಾಂಧಿ

ಮಳೆ ಹುಡುಗಿ ಪೂಜಾ ಗಾಂಧಿ ಕೂಡ ರಾಜಕೀಯ ಅಖಾಡಕ್ಕೆ ಇಳಿದಿದ್ದರು. ಮೊದಲು ಜಾತ್ಯಾತೀತ ಜನತಾದಳ, ನಂತರ ಕೆ.ಜೆ.ಪಿ ಕೊನೆಗೆ ಬಿ.ಎಸ್.ಆರ್ ಅಂತ ಪಕ್ಷದಿಂದ ಪಕ್ಷಕ್ಕೆ ಹಾರಿದ ಪೂಜಾ ಸದ್ಯ ರಾಜಕೀಯ ಮತ್ತು ಸಿನಿಮಾ ಎರಡನ್ನೂ ನಿಭಾಯಿಸುತ್ತಿದ್ದಾರೆ.

ಉಮಾಶ್ರೀ

ಕನ್ನಡದಲ್ಲಿ 400ಕ್ಕೂ ಹೆಚ್ಚು ಸಿನಿಮಾ ಮಾಡಿರುವ ನಟಿ ಉಮಾಶ್ರೀ ಈಗ ರಾಜ್ಯ ಸರ್ಕಾರದ ಸಚಿವೆ ಆಗಿದ್ದಾರೆ. 2013 ರಲ್ಲಿ ರಾಜಕೀಯ ಪ್ರವೇಶಿಸಿದ ಉಮಾಶ್ರೀ ಈಗ ಸಿದ್ಧರಾಮಯ್ಯ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿದ್ದಾರೆ.

ರಕ್ಷಿತಾ ಪ್ರೇಮ್

ಕ್ರೇಜಿ ಕ್ವೀನ್ ರಕ್ಷಿತಾ ಬಿ.ಎಸ್.ಆರ್ ಪಕ್ಷದ ಮೂಲಕ 2012ರಲ್ಲಿ ತಮ್ಮ ರಾಜಕೀಯ ಜೀವನ ಶುರು ಮಾಡಿದರು. ಬಳಿಕ ಜಾತ್ಯಾತೀತ ಜನತಾದಳಕ್ಕೆ ಬಂದ ರಕ್ಷಿತಾ ಸದ್ಯ ಬಿ.ಜೆ.ಪಿ ಪಕ್ಷದ ಮೂಲಕ ಗುರುತಿಸಿಕೊಂಡಿದ್ದಾರೆ.

ಶೃತಿ

ನಟಿ ಶೃತಿ ಸದ್ಯ ಭಾರತೀಯ ಜನತಾ ಪಾರ್ಟಿಯ ಮಹಿಳಾ ವಿಭಾಗದ ಮುಖ್ಯ ಕಾರ್ಯದರ್ಶಿ ಆಗಿದ್ದಾರೆ. ಮೊದಲು ಬಿ.ಜಿ.ಪಿ ಪಕ್ಷದಲ್ಲಿ ಇದ್ದ ಶೃತಿ ಬಳಿಕ ಯಡಿಯೂರಪ್ಪ ಅವರ ಕೆ.ಜೆ.ಪಿ ಪಕ್ಷ ಸೇರಿಕೊಂಡರು. ಆದರೆ ಆ ನಂತರ ಕೆ.ಜೆ.ಪಿ ಪಕ್ಷ ಕೂಡ ಬಿ.ಜೆ.ಪಿ ಪಕ್ಷದಲ್ಲಿ ವಿಲೀನವಾಯಿತು.

ಶಿಲ್ಪಾ ಗಣೇಶ್

ನಟ ಗಣೇಶ್ ಪತ್ನಿ ನಿರ್ಮಾಪಕಿ ಶಿಲ್ಪಾ ಗಣೇಶ್ ಸದ್ಯ ಬಿಜೆಪಿ ಪಕ್ಷದ ಮೂಲಕ ಗುರುತಿಸಿಕೊಂಡಿದ್ದಾರೆ. ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಶಿಲ್ಪಾ ಗಣೇಶ್ ಬಿಜೆಪಿ ಪಕ್ಷ ಸೇರಿದರು.

ಲೇವಡಿ ಮಾಡಿದ ರಮ್ಯಾ ವಿರುದ್ಧ ಉರಿದುಬಿದ್ದ ಶಿಲ್ಪಾ ಗಣೇಶ್.!

ಮಾಳವಿಕಾ ಅವಿನಾಶ್

1999ರಲ್ಲಿ ಸುಷ್ಮಾ ಸ್ವರಾಜ್ ಅವರ ಪರವಾಗಿ ಬಳ್ಳಾರಿಯಲ್ಲಿ ರಾಜಕೀಯ ಪ್ರಚಾರದಲ್ಲಿ ಭಾಗಿಯಾಗಿದ್ದ ನಟಿ ಮಾಳವಿಕಾ ಬಳಿಕ ಬಿ.ಜೆ.ಪಿ ಪಕ್ಷದ ಮೂಲಕವೇ ತಮ್ಮ ಪೊಲಿಟಿಕಲ್ ಜರ್ನಿ ಶುರು ಮಾಡಿದರು.

ಗೀತಾ ಶಿವರಾಜ್ ಕುಮಾರ್

ದೊಡ್ಮನೆಯ ಹಿರಿಯ ಸೊಸೆ ಗೀತಾ ಶಿವರಾಜ್ ಕುಮಾರ್ ಕಳೆದ ಬಾರಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದರು. ಅತ್ತ ತಂದೆ ಬಂಗಾರಪ್ಪ ನವರ ಪ್ರಭಾವ, ಇತ್ತ ರಾಜ್ ಕುಮಾರ್ ಹೆಸರು ಇದ್ದರೂ ಗೀತಾ ಶಿವರಾಜ್ ಕುಮಾರ್ ಅವರಿಗೆ ಗೆಲ್ಲುವು ದಕ್ಕಲಿಲ್ಲ.

ಜಯಪ್ರದ

ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿದ್ದ ನಟಿ ಜಯಪ್ರದ ಸದ್ಯ ರಾಜಕೀಯದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. 1994ರಲ್ಲಿ ತೆಲುಗು ದೇಶಂ ಪಕ್ಷದ ಮೂಲಕ ನಟಿ ಜಯಪ್ರದ ತಮ್ಮ ರಾಜಕೀಯ ಕೆರಿಯರ್ ಪ್ರಾರಂಭ ಮಾಡಿದ್ದರು.

ಜಯಮಾಲಾ

ಕನ್ನಡದ ಜನಪ್ರಿಯ ನಟಿ ಜಯಮಾಲ ಈಗ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯೆ ಆಗಿದ್ದಾರೆ.

ನಟಿ ಜಯಮಾಲಾ ಮಗಳು ಸೌಂದರ್ಯ ಬಗ್ಗೆ ಕೇಳಿ ಬಂದ ಹೊಸ ಗಾಸಿಪ್ ಇದು!

ಖುಷ್ಬು

ಡಿ.ಎಂ.ಕೆ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ನಟಿ ಖುಷ್ಬು ಸದ್ಯ ಕಾಂಗ್ರೆಸ್ ರಾಷ್ಟ್ರೀಯ ವಾಕ್ತಾರೆ ಆಗಿದ್ದಾರೆ.

ಭಾವನಾ

2013ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ಭಾಗಿಯಾಗಿದ್ದ ನಟಿ ಭಾವನಾ ಅದೇ ಪಕ್ಷದಲ್ಲಿ ಮುಂದುವರೆದ ಭಾವನಾ ಬಾಲ ಭವನದ ಮಾಜಿ ಅಧ್ಯಕ್ಷೆ.

ವಿಜಯಲಕ್ಷ್ಮಿ ಸಿಂಗ್

ಕನ್ನಡದ ಮಹಿಳಾ ನಿರ್ದೇಶಕಿ ಆದ ವಿಜಯಲಕ್ಷ್ಮಿ ಸಿಂಗ್ ಕಳೆದ ಬಾರಿ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.

ರಾಜಕೀಯಕ್ಕೆ ಮತ್ತೋರ್ವ ಸ್ಯಾಂಡಲ್ ವುಡ್ ನಟಿ ಎಂಟ್ರಿ.?!

ನಟಿ ಅಮೂಲ್ಯ

ನಟಿ ಅಮೂಲ್ಯ ಸದ್ಯ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಗುಸು ಗುಸು ಹೆಚ್ಚಾಗಿದೆ. ಅಮೂಲ್ಯ ಪತಿ ಜಗದೀಶ್ ರಾಜಕೀಯ ಹಿನ್ನಲೆಯವರಾಗಿದ್ದು, ಅಮೂಲ್ಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿ ಮಾಡುತ್ತಾರೆ ಎನ್ನುವ ಮಾತು ಕೇಳಿಬಂದಿದೆ.

English summary
List of Sandalwood's famous actresses who entered politics. ರಾಜಕೀಯ ರಂಗ ಪ್ರವೇಶಿಸಿದ ಕನ್ನಡದ ನಟಿಮಣಿಯರ ಪಟ್ಟಿ ಇಲ್ಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada