»   » ಅಂಧನ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ ಕನ್ನಡದ ಅಂದದ ನಟರು

ಅಂಧನ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ ಕನ್ನಡದ ಅಂದದ ನಟರು

Posted By:
Subscribe to Filmibeat Kannada

ಒಬ್ಬ ನಟ, ಒಬ್ಬ ಒಳ್ಳೆಯ ಕಲಾವಿದ ಆಗುವುದು ವಿಭಿನ್ನ ಪಾತ್ರಗಳನ್ನು ಮಾಡುವುದರಿಂದ. ಒಬ್ಬ ಹೀರೋ ಅದೇ ಹಾಡು, ಡ್ಯಾನ್ಸ್, ಫೈಟು ಮಾಡುತ್ತಿದ್ದರೆ ನೋಡುವ ಪ್ರೇಕ್ಷಕರಿಗೂ ಒಂದು ಕ್ಷಣ ಬೋರ್ ಆಗಿ ಬಿಡುತ್ತದೆ. ನಟ ಅಂದ ಮೇಲೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು.

ಸದ್ಯ ಕನ್ನಡದ ನಟರು ಪ್ರಾಯೋಗಿಕ ಪಾತ್ರಗಳನ್ನು ಮಾಡುವುದು ಹೆಚ್ಚಾಗಿದೆ. ಅದರಲ್ಲಿಯೂ ಅಂಧನ ಪಾತ್ರದಲ್ಲಿ ಸ್ಯಾಂಡಲ್ ವುಡ್ ನಟರು ನಟಿಸುತ್ತಿದ್ದಾರೆ. ನಟ ಶಿವರಾಜ್ ಕುಮಾರ್, ದೇವರಾಜ್, ಸಂಚಾರಿ ವಿಜಯ್, ಚಿರಂಜೀವಿ ಸರ್ಜಾ ಎಲ್ಲರೂ ಈಗ ಕುರುಡರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಈ ನಟರು ಅಂಧನ ಪಾತ್ರ ಮಾಡುತ್ತಿದ್ದಾರೆ. ಕಮರ್ಶಿಯಲ್ ಸಿನಿಮಾ ಲೆಕ್ಕಾಚಾರ ದಿಂದ ಹೊರ ಬಂದಿರುವ ಈ ನಟರು ಈಗ ಕುರುಡರ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಮುಂದೆ ಓದಿ...

ಶಿವರಾಜ್ ಕುಮಾರ್

ನಟ ಶಿವರಾಜ್ ಕುಮಾರ್ 'ಕವಚ' ಸಿನಿಮಾದಲ್ಲಿ ಅಂಧನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕವಚ' ಮಲೆಯಾಳಂ ಭಾಷೆಯ 'ಒಪ್ಪಂ' ಚಿತ್ರದ ರಿಮೇಕ್ ಆಗಿದೆ. 15 ವರ್ಷಗಳ ನಂತರ ಈ ಪಾತ್ರಕ್ಕಾಗಿ ಶಿವಣ್ಣ ರಿಮೇಕ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಈ ಚಿತ್ರ ಮುಹೂರ್ತ ಕಾರ್ಯಕ್ರಮ ನಡೆದಿದೆ.

ಸಂಚಾರಿ ವಿಜಯ್

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ತಾನು ಎಂತಹ ಅದ್ಬುತ ನಟ ಅಂತ ಈಗಾಗಲೇ ಸಾಬೀತು ಮಾಡಿದ್ದಾರೆ. ಇದೀಗ 'ಕೃಷ್ಣ ತುಳಸಿ' ಚಿತ್ರದಲ್ಲಿ ಅವರು ಕುರುಡನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಮೇ ತಿಂಗಳಲ್ಲಿ 'ಕೃಷ್ಣ ತುಳಸಿ' ಸಿನಿಮಾ ತೆರೆಗೆ ಬರಲಿದೆ.

ದೇವರಾಜ್

ಪೊಲೀಸ್ ಪಾತ್ರಗಳಲ್ಲಿ ಹೆಚ್ಚು ಅಬ್ಬರಿಸುತ್ತಿದ್ದ ದೇವರಾಜ್ '3 ಗಂಟೆ 30 ದಿನ 30 ಸೆಕೆಂಡ್‌' ಚಿತ್ರದಲ್ಲಿ ಅಂಧರಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಕಥೆ ದೇವರಾಜ್ ಅವರಿಗೆ ತುಂಬ ಇಷ್ಟ ಆಗಿದ್ದು, ಅಂಧನ ಪಾತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರಂತೆ.

ಚಿರಂಜೀವಿ ಸರ್ಜಾ

ನಟ ಚಿರಂಜೀವಿ ಸರ್ಜಾ ತಮ್ಮ ಮುಂದಿನ ಸಿನಿಮಾ 'ಸಂಹಾರ' ಚಿತ್ರದಲ್ಲಿ ಕುರುಡನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ಚಿರುಗೆ ಜೋಡಿ ಆಗಿದ್ದಾರೆ.

ದರ್ಶನ್ ತೆಗೆದುಕೊಂಡಿದ್ದ 'ಚಾಲೆಂಜ್' ಈಗ ಚಿರಂಜೀವಿ ಸರ್ಜಾ ಮುಂದಿದೆ!

'ರಾಗ' ಸಿನಿಮಾ

ಈ ವರ್ಷ ತೆರೆಗೆ ಬಂದಿದ್ದ 'ರಾಗ' ಸಿನಿಮಾ ಕೂಡ ಅಂಧರ ಜೀವನದ ಕುರಿತು ಇತ್ತು. ಚಿತ್ರದಲ್ಲಿ ಇಬ್ಬರು ಅಂಧ ಪ್ರೇಮಿಗಳ ಪ್ರೇಮ ಕಥೆಯನ್ನು ನಿರ್ದೇಶಕ ಪಿ.ಶೇಖರ್ ಸೊಗಸಾಗಿ ತೋರಿಸಿದ್ದರು. ಇಲ್ಲಿ ನಟ ಮಿತ್ರ ಮತ್ತು ನಟಿ ಭಾಮಾ ಕುರುಡು ಪ್ರೇಮಿಗಳಾಗಿದ್ದರು.

ಹ್ಯಾಟ್ರಿಕ್ ಹೀರೋ ಅಭಿನಯದ ರೀಮೇಕ್ ಸಿನಿಮಾ 'ಕವಚ'ಗೆ ಸಿಕ್ತು ಚಾಲನೆ.!

ನಮ್ಮ ಪ್ರೀತಿಯ ರಾಮು

ಈ ಹಿಂದೆ ಕನ್ನಡದಲ್ಲಿ ದರ್ಶನ್ ಇದೇ ರೀತಿಯ ಚಾಲೆಂಜ್ ತೆಗೆದುಕೊಂಡಿದ್ದರು. 'ನಮ್ಮ ಪ್ರೀತಿಯ ರಾಮು' ಚಿತ್ರದಲ್ಲಿ ದರ್ಶನ್ ಕುರುಡನ ಪಾತ್ರವನ್ನು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
List of upcoming kannada movies which have Blind characters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada