For Quick Alerts
  ALLOW NOTIFICATIONS  
  For Daily Alerts

  ಮತದಾನ ಮಾಡಿದ ರಾಜಮೌಳಿ ಅಂಡ್ ಟೀಮ್

  |

  17 ನೇ ಲೋಕಸಭಾ ಚುನಾವಣೆ ಇಂದಿನಿಂದ (ಏಪ್ರಿಲ್ 11) ಶುರುವಾಗಿದೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

  ಲೋಕಸಭೆ ಚುನಾವಣೆ LIVE:ಇವಿಎಂ ಅನ್ನೇ ಎಸೆದು, ಬಂಧನಕ್ಕೊಳಗಾದ ಅಭ್ಯರ್ಥಿ

  'ಬಾಹುಬಲಿ' ಸಿನಿಮಾ ಖ್ಯಾತಿಯ ನಿರ್ದೇಶಕ ರಾಜಮೌಳಿ ಮತದಾನ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಮತದಾನ ಮಾಡಿರುವ ಫೋಟೋ ಹಾಕಿರುವ ಅವರು ವೋಟ್ ಮಾಡುವ ಅಗತ್ಯವನ್ನು ತಿಳಿಸಿದ್ದಾರೆ. ಎಲ್ಲರೂ ವೋಟ್ ಮಾಡಬೇಕು ಎಂದು ತಮ್ಮ ಚಿತ್ರತಂಡದ ಎಲ್ಲರಿಗೂ ರಜೆ ನೀಡಿ ಮತದಾನ ಮಾಡಲು ಕಳುಹಿಸಿದ್ದಾರೆ.

  ಈ ಬಗ್ಗೆ ಇನ್ಸ್ಟಾಗ್ರಾಮ್ ಬರೆದುಕೊಂಡಿರುವ ರಾಜಮೌಳಿ ''ನಮ್ಮ ಅರ್ಧದಷ್ಟು ಚಿತ್ರತಂಡ ವೋಟ್ ಮಾಡಲು ತಮ್ಮ ತಮ್ಮ ಹಳ್ಳಿಗಳಿಗೆ ತೆರಳಿದ್ದಾರೆ. ನೀವು ವೋಟ್ ಮಾಡಿ. ನಿಮಗೆ ಯಾವ ಪಕ್ಷ ಅಥವಾ ಅಭ್ಯರ್ಥಿ ಇಷ್ಟ ಆಗದೆ ಇದ್ದರೆ, ನೋಟದ ಉಪಯೋಗ ಮಾಡಿಕೊಳ್ಳಿ. ವೋಟ್ ಫಾರ್ ಇಂಡಿಯಾ.'' ಎಂದು ಹೇಳಿದ್ದಾರೆ.

  ಇಂದಿನಿಂದ ಚುನಾವಣೆ ಪ್ರಾರಂಭವಾಗಿದ್ದು, ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಉತ್ತರಾಖಂಡ್, ಮೇಘಾಲಯ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಮಣಿಪುರ, ಒಡಿಶಾ, ತ್ರಿಪುರ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಅಂದರೆ 20 ರಾಜ್ಯಗಳಲ್ಲಿ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ.

  20 ರಾಜ್ಯಗಳ 1279 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯನ್ನು ಸೇರಲಿದೆ.

  English summary
  Lok Sabha Elections 2019 : Telugu director Rajamouli and team voted.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X