Don't Miss!
- News
Peshawar Mosque Blast: ಪೇಶಾವರ ಮಸೀದಿಯಲ್ಲಿ ಆತ್ಮಾಹುತಿ ಬಾಂಬರ್ನ ತುಂಡಾದ ತಲೆ ಪತ್ತೆ!
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೆಜಿಎಫ್ ಬಗ್ಗೆ Rap ಸಾಂಗ್ ಮಾಡಿದ ಲಂಡನ್ ವ್ಯಕ್ತಿ: ಪ್ರಶಾಂತ್ ನೀಲ್ ಮೆಚ್ಚುಗೆ
ಕೆಜಿಎಫ್ ಚಾಪ್ಟರ್ 2 ಕ್ರೇಜ್ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಇದೆ. ಚಾಪ್ಟರ್ 1 ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಧೂರಿ ಬಿಡುಗಡೆ ಕಂಡಿತ್ತು. ದಾಖಲೆಗಳ ಪ್ರಕಾರ ಸುಮಾರು 50ಕ್ಕೂ ಹೆಚ್ಚು ದೇಶಗಳಲ್ಲಿ 1000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮೊದಲ ಭಾಗ ತೆರೆಕಂಡಿತ್ತು. ಹಾಗಾಗಿ ಚಾಪ್ಟರ್ 2 ಚಿತ್ರಕ್ಕಾಗಿ ಎಲ್ಲೆಡೆ ಕಾಯುತ್ತಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಪೂರ್ಣಗೊಂಡಿದೆ ಎಂಬ ಮಾಹಿತಿ ಇದೆ. ಹಾಗ್ನೋಡಿದ್ರೆ ರಿಲೀಸ್ ದಿನಾಂಕ ಘೋಷಿಸಿ ಪ್ರಚಾರ ಆರಂಭಿಸಬೇಕಿದೆ. ಆದರೆ ಕೋವಿಡ್ ಕಾರಣದಿಂದ ಇದು ಸಾಧ್ಯವಾಗುತ್ತಿಲ್ಲ.
ಕೋವಿಡ್ ಮೂರನೇ ಅಲೆಯ ಭೀತಿ ಚಿತ್ರರಂಗಕ್ಕೆ ರಿಲೀಫ್ ಕೊಡ್ತಿಲ್ಲ. ಚಿತ್ರಮಂದಿರಗಳಿಗೆ ಅನುಮತಿ ಕೊಟ್ಟಿದ್ದರೂ 100 ಪರ್ಸೆಂಟ್ ಅವಕಾಶ ಇಲ್ಲ. ಸಿನಿಮಾ ರಿಲೀಸ್ ಮಾಡಿದರೂ ಮತ್ತೆ ಲಾಕ್‌ಡೌನ್ ಆಗಲ್ಲ ಎಂದು ನಂಬುವಂತಿಲ್ಲ. ಈ ಎಲ್ಲಾ ಗೊಂದಲಗಳಿಂದ ಕೆಜಿಎಫ್ ಸೇರಿದಂತೆ ಅನೇಕ ಚಿತ್ರಗಳು ಬಿಡುಗಡೆ ದಿನಾಂಕ ಘೋಷಿಸದ ಚಿಂತೆಗೀಡಾಗಿದೆ.
'ಕೆಜಿಎಫ್
2'ಗೆ
ನೂರಾರು
ಕೋಟಿ
ಆಫರ್
ನೀಡಿದ
ಒಟಿಟಿ
ಇದೆಲ್ಲದರ ನಡುವೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕ್ರೇಜ್ ಸ್ವಲ್ಪವೂ ಕಮ್ಮಿಯಾಗಿಲ್ಲ. ಇದೀಗ, ಲಂಡನ್ ಮೂಲದ ವ್ಯಕ್ತಿಯೊಬ್ಬ ಕೆಜಿಎಫ್ ಚಾಪ್ಟರ್ 1 ಸಿನಿಮಾ ನೋಡಿ, ಅದಕ್ಕಾಗಿ ವಿಶೇಷವಾದ ಸಾಂಗ್ ಮಾಡಿದ್ದಾನೆ. ಈ Rap ಹಾಡಿಗೆ ನಿರ್ದೇಶಕ ಪ್ರಶಾಂತ್ ನೀಲ್ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ....

Rap ಸಾಂಗ್ ಮಾಡಿದ ವಿದೇಶಿ ಪ್ರಜೆ
2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಿತ್ರವನ್ನು ಈಗಷ್ಟೇ ನೋಡಿದ ಲಂಡನ್ ಪ್ರಜೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ನಾನು ಮೊದಲ ಸಲ ಭಾರತದ ಸಿನಿಮಾ ನೋಡಿದೆ. ಅದು ಕೆಜಿಎಫ್. ಈ ಸಿನಿಮಾ ನೋಡಿದ್ಮೇಲೆ ಹಾಡೊಂದನ್ನು ಮಾಡಿದ್ದೇನೆ. ನೀವೆಲ್ಲರೂ ಎಂಜಾಯ್ ಮಾಡ್ತೀರಾ ಅಂತ ನನಗೆ ಭರವಸೆ ಇದೆ'' ಎಂದಿದ್ದಾರೆ. ಈ ಹಾಡು ನೋಡಿದ ಪ್ರಶಾಂತ್ ನೀಲ್ ''ಚೆನ್ನಾಗಿದೆ, ಧನ್ಯವಾದ: ನಿಮ್ಮನ್ನು ರಂಜಿಸಿದ್ದಕ್ಕೆ ಸಂತೋಷವಾಗಿದೆ'' ಎಂದು ಹೇಳಿದ್ದಾರೆ.
ಈ
ಹಾಡು
ನೋಡಲು
ಈ
ಲಿಂಕ್
ಕ್ಲಿಕ್
ಮಾಡಿ

ಟಿವಿ ಹಕ್ಕು ಸೇಲ್
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸ್ಯಾಟ್‌ಲೈಟ್ ಹಕ್ಕನ್ನು ಜೀ ಗ್ರೂಪ್ ಖರೀದಿಸಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಟಿವಿ ಹಕ್ಕನ್ನು ಜೀ ಸಂಸ್ಥೆ ಪಡೆದುಕೊಂಡಿದ್ದು, ಇತ್ತೀಚಿಗಷ್ಟೆ ಈ ವಿಷಯ ತಿಳಿದು ಬಂದಿದೆ. ಚಾಪ್ಟರ್ 1 ಸಿನಿಮಾದ ಸ್ಯಾಟ್‌ಲೈಟ್ ಹಕ್ಕು ಸಹ ಜೀ ವಾಹಿನಿಯೇ ಖರೀದಿ ಮಾಡಿತ್ತು.
ಕೆಜಿಎಫ್
ಚಾಪ್ಟರ್
2
ಸ್ಯಾಟ್‌ಲೈಟ್
ಹಕ್ಕು
ಖರೀದಿಸಿದ
ಜೀ
ಸಂಸ್ಥೆ

ಒಟಿಟಿಯಿಂದ ಭರ್ಜರಿ ಆಫರ್
ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಎಕ್ಸ್‌ಕ್ಲೂಸಿವ್ ಆಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲು ಕೆಲವು ಆನ್‌ಲೈನ್ ಸಂಸ್ಥೆಗಳು ಆಸಕ್ತಿ ತೋರಿದೆ. ಅದರಲ್ಲೂ ಅಮೇಜಾನ್ ಪ್ರೈಮ್ ಮತ್ತು ಜೀ 5 ಸಂಸ್ಥೆ ಹೆಚ್ಚು ಬೆಲೆಗೆ ಆಫರ್ ಮಾಡಿದೆ ಎನ್ನಲಾಗಿದೆ. ಸುಮಾರು 225 ಕೋಟಿಯ ಡೀಲ್‌ಗೆ ಕೆಜಿಎಫ್‌ಗೆ ಸಿಕ್ಕಿದೆ ಎಂದು ವರದಿಯಾಗಿದೆ. ಆದರೆ, ಒಟಿಟಿಯಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ಆಸಕ್ತಿ ತೋರಿಸಿಲ್ಲ.

ಕ್ರಿಸ್‌ಮಸ್ ಎಂದು ಹೇಳಲಾಗಿದೆ
ಸದ್ಯದ ಮಾಹಿತಿ ಪ್ರಕಾರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ ಕೊನೆಯ ವಾರದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಆದರೆ ಇದುವರೆಗೂ ದಿನಾಂಕ ಪ್ರಕಟಿಸಿಲ್ಲ. ಅದೇ ದಿನ ತೆಲುಗಿನ ನಿರೀಕ್ಷೆ ಸಿನಿಮಾ ಪುಷ್ಪ ಭಾಗ 1 ತೆರೆಗೆ ಬರಲಿದೆ ಎಂದು ದಿನಾಂಕ ಘೋಷಿಸಿದೆ. ಬಾಲಿವುಡ್‌ನಲ್ಲಿ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರವೂ ಕ್ರಿಸ್‌ಮಸ್‌ಗೆ ಬರುತ್ತಿದೆ. ಈ ಹಿನ್ನೆಲೆ ಕೆಜಿಎಫ್ ಆ ದಿನಕ್ಕೆ ಬರುವುದು ಅನುಮಾನವಾಗಿದೆ. ದಸರಾ, ದೀಪಾವಳಿ, ಕ್ರಿಸ್‌ಮಸ್, ಸಂಕ್ರಾಂತಿ ಹಬ್ಬಗಳಿಗೆ ಭಾರತದ ಹಲವು ಸ್ಟಾರ್ ನಟರ ಚಿತ್ರಗಳು ಡೇಟ್ ಲಾಕ್ ಮಾಡಿದೆ. ಆದರೆ, ಕೆಜಿಎಫ್ ಮಾತ್ರ ಇನ್ನು ಕಾದು ಕುಳಿತಿದೆ.