For Quick Alerts
  ALLOW NOTIFICATIONS  
  For Daily Alerts

  ಅಧಿಕೃತವಾಗಿ 'ಹೆಡ್‌ಬುಷ್' ಚಿತ್ರತಂಡ ಸೇರಿದ ಲೂಸ್ ಮಾದ

  |

  ಡಾಲಿ ಧನಂಜಯ್ ನಟಿಸುತ್ತಿರುವ 'ಹೆಡ್‌ಬುಷ್' ಸಿನಿಮಾ ಪ್ರತಿಯೊಂದು ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಲೇ ಸಾಗಿದೆ. ಬೆಂಗಳೂರಿನ ಮಾಜಿ ಡಾನ್ ಎಂಪಿ ಜಯರಾಜ್ ಜೀವನ ಆಧರಿಸಿ ತಯಾರಾಗಿತ್ತಿರುವ ಈ ಸಿನಿಮಾದಲ್ಲಿ ಡಾಲಿ, ಜಯರಾಜ್ ಆಗಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ತಯಾರಾಗುತ್ತಿರುವ ಈ ಚಿತ್ರ ಹೆಚ್ಚು ಸದ್ದು ಮಾಡ್ತಿದೆ.

  ಇದೀಗ, ಹೆಡ್‌ಬುಷ್ ಚಿತ್ರಕ್ಕೆ ಲೂಸ್ ಮಾದ ಯೋಗಿ ಕೈ ಜೋಡಿಸಿದ್ದಾರೆ. ಹೆಡ್‌ಬುಷ್ ಸಿನಿಮಾದಲ್ಲಿ ಯೋಗಿ ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಚಾರ ಅಧಿಕೃತವಾಗಿದೆ. ಆದರೆ ಪಾತ್ರ ಯಾವುದು, ಅಂಡರ್‌ವರ್ಲ್ಡ್‌ ಚಿತ್ರದಲ್ಲಿ ಯೋಗಿಯ ಗೆಟಪ್ ಹೇಗಿರಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

  ಧನಂಜಯ್ 'ಹೆಡ್‌ಬುಷ್' ಚಿತ್ರಕ್ಕೆ ಎಂಟ್ರಿಯಾದ ಕನ್ನಡದ ಸ್ಟಾರ್ ನಟಧನಂಜಯ್ 'ಹೆಡ್‌ಬುಷ್' ಚಿತ್ರಕ್ಕೆ ಎಂಟ್ರಿಯಾದ ಕನ್ನಡದ ಸ್ಟಾರ್ ನಟ

  ಇತ್ತೀಚಿಗಷ್ಟೆ 'ಲಂಕೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಧನಂಜಯ್, ಹೆಡ್‌ಬಷ್ ಸಿನಿಮಾದಲ್ಲಿ ಯೋಗಿ ನಟಿಸುವುದನ್ನು ಖಚಿತಪಡಿಸಿದ್ದರು. ಈಗ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಮಾಡುವ ಮೂಲಕ ಚಿತ್ರತಂಡ ಸ್ವಾಗತ ಕೋರಿದ್ದಾರೆ.

  ''ಕನ್ನಡ ಚಿತ್ರರಂಗದಲ್ಲಿ ಯೋಗಿ ಬಹಳ ವಿಶೇಷ ಮತ್ತು ವಿಭಿನ್ನ ಕಲಾವಿದ. ನೈಜ ಅಭಿನಯ ಮಾಡುವಂತಹ ಕೆಲವೇ ಕಲಾವಿದರ ಪೈಕಿ ಯೋಗಿ ಸಹ ಒಬ್ಬರು. ಯಾವುದೇ ಪಾತ್ರವನ್ನು ಸೂಕ್ತವಾಗಿ ನಿಭಾಯಿಸಬಲ್ಲ ನಟ. ಬಹಳ ಕಡಿಮೆ ಅವಧಿಯಲ್ಲಿ ದೊಡ್ಡ ಯಶಸ್ಸು ನೋಡಿ, ಸೂಪರ್ ಸ್ಟಾರ್ ಸ್ಥಾನ ನೋಡಿರುವ ಕಲಾವಿದ. ನಮ್ಮ ಚಿತ್ರದಲ್ಲಿ ಒಳ್ಳೆಯ ಪಾತ್ರದಲ್ಲಿ ಅವರನ್ನು ನೋಡಬಹುದು'' ಎಂದು ಧನಂಜಯ್ ಹೇಳಿದ್ದರು.

  ಹಿಂದೆ ಸರಿದ 'ಭಜರಂಗಿ': ಧೈರ್ಯ ತೋರಿದ ಯೋಗಿಯ 'ಲಂಕೆ'ಹಿಂದೆ ಸರಿದ 'ಭಜರಂಗಿ': ಧೈರ್ಯ ತೋರಿದ ಯೋಗಿಯ 'ಲಂಕೆ'

  'ಹೆಡ್‌ಬುಷ್' ಸಿನಿಮಾದ ನಾಯಕಿ ಪಾತ್ರಕ್ಕೆ ತೆಲುಗಿನ ಖ್ಯಾತ ನಟಿ ಪಾಯಲ್ ರಜಪೂತ್ ಆಯ್ಕೆಯಾಗಿದ್ದಾರೆ. 2018ರಲ್ಲಿ ತೆಲುಗಿನಲ್ಲಿ ಬಂದ 'ಆರ್‌ಎಕ್ಸ್‌100' ಚಿತ್ರದ ಮೂಲಕ ಹೆಚ್ಚು ಸದ್ದು ಮಾಡಿದ ನಟಿ ಈಗ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದಿದ್ದಾರೆ. ಇದುವರೆಗೂ ಎನ್‌ಟಿಆರ್ ಕಥಾನಾಯಕಡು, ಸಿತಾ, ಆರ್‌ಡಿಎಕ್ಸ್ ಲವ್, ವೆಂಕಿಮಾಮ, ಡಿಸ್ಕೋ ರಾಜ ಅಂತಹ ಸಿನಿಮಾಗಳಲ್ಲಿ ಪಾಯಲ್ ನಟಿಸಿದ್ದಾರೆ.

  Loose Maada Yogi to act in Dhananjaya Starrer Head Bush Movie

  ಇನ್ನು 'ಹೆಡ್‌ಬುಷ್' ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದಿದ್ದು, ಚೊಚ್ಚಲ ನಿರ್ದೇಶಕ ಶೂನ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಿಸುತ್ತಿದ್ದು, ಎರಡು ಭಾಗದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಇನ್ನು ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.

  ರಾಮ್ ಪ್ರಸಾದ್ ನಿರ್ದೇಶನದಲ್ಲಿ ತಯಾರಾಗಿರುವ 'ಲಂಕೆ' ಸಿನಿಮಾ ಸೆಪ್ಟೆಂಬರ್ 10ಕ್ಕೆ ಬಿಡುಗಡೆಯಾಗುತ್ತಿದೆ. ಲೂಸ್ ಮಾದ ನಾಯಕನಾಗಿ ನಟಿಸಿರುವ 'ಲಂಕೆ' ಚಿತ್ರದಲ್ಲಿ ಕೃಷಿ ತಾಪಂಡ, ಕಾವ್ಯ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ದಿವಂಗತ ನಟ ಸಂಚಾರಿ ವಿಜಯ್ ಸಹ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದು, ರಮೇಶ್ ಬಾಬು ಛಾಯಾಗ್ರಹಣವಿದೆ.

  English summary
  Kannada Actor Loose Maada Yogi to act in Dhananjaya Starrer Head Bush Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X