'ಲೂಸ್ ಮಾದ' ಯೋಗಿಗೆ ಸಿಲ್ವರ್ ಜ್ಯೂಬಿಲಿ ಸಂಭ್ರಮ
ಮೊನ್ನೆ ತಾನೇ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬವನ್ನು 'ಬುಗುರಿ' ಚಿತ್ರತಂಡದೊಂದಿಗೆ ಆಚರಿಸಿಕೊಂಡರು ಅಂತ ಕನ್ನಡ ಫಿಲ್ಮಿ ಬೀಟಲ್ಲಿ ನಾವೇ ನಿಮಗೆ ಹೇಳಿದ್ವಿ ತಾನೇ.
ಇದೀಗ ಮತ್ತೆ ಇಂದು ಸ್ಯಾಂಡಲ್ ವುಡ್ ಸ್ಟಾರ್ ಒಬ್ಬರಿಗೆ ಹುಟ್ಟುಹಬ್ಬದ ಸಂಭ್ರಮ. ಗಾಂಧಿನಗರದಲ್ಲಿ 'ಲೂಸ್ ಮಾದ' ಅಂತಾನೇ ಫೇಮಸ್ ಆಗಿರುವ ಯೋಗೆಶ್ ತಮ್ಮ ಮನೆಯಲ್ಲಿ ಇಂದು ಗ್ರ್ಯಾಂಡ್ ಆಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.[ಆಸ್ಪತ್ರೆಗೆ ದಾಖಲಾಗಿರುವ ಯೋಗಿ ಆರೋಗ್ಯಕ್ಕೆ ಏನಾಗಿದೆ?]

25ನೇ ಜನುಮದಿನದ ಸಂಭ್ರಮದಲ್ಲಿರುವ 'ಲೂಸ್ ಮಾದ' ಅಲಿಯಾಸ್ ಯೋಗಿ ತಮ್ಮ ಮುಂದಿನ ಚಿತ್ರ 'ಬಜಾರ್' ಗೆ ಅಣಿಯಾಗುತ್ತಿದ್ದಾರೆ. ತುಂಬಾ ದಿನಗಳ ನಂತರ ಇಂಡಸ್ಟ್ರಿ ಕಡೆಗೆ ಮುಖ ಮಾಡಿರುವ ಯೋಗಿ ಹುಟ್ಟುಹಬ್ಬದ ದಿನದಂದು ತಮ್ಮ ಹೊಸ ಚಿತ್ರ 'ಬಜಾರ್' ನ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ಮಾಡಿದ್ದಾರೆ.[ತಮಿಳು ಚಿತ್ರರಂಗದಿಂದ ಲೂಸ್ ಮಾದನಿಗೆ ರತ್ನಗಂಬಳಿ]

'ಬಜಾರ್' ಚಿತ್ರದ ಮೋಷನ್ ಪೋಸ್ಟರ್ ಇಲ್ಲಿದೆ ನೋಡಿ....
ಕಿರುತೆರೆಯ 'ಲೈಫ್ ಸೂಪರ್ ಗುರು' 'ಬಿಗ್ ಬಾಸ್ ಸೀಸನ್-2' 'ತಕಧಿಮಿತ ಡಾನ್ಸಿಂಗ್ ಸ್ಟಾರ್' ಮುಂತಾದ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಫುಲ್ ಬ್ಯುಸಿಯಾಗಿದ್ದ ಯೋಗಿ ಇದೀಗ ಮತ್ತೆ ಗಾಂಧಿನಗರದತ್ತ ವಾಪಸ್ಸಾಗಿದ್ದಾರೆ. ಸದ್ಯಕ್ಕೆ ಯೋಗಿ ನಟನೆಯ 'ಸ್ನೇಕ್ ನಾಗ', 'ಶನಿವಾರ್', 'ಕಾಲಭೈರವ', 'ಕೆಟ್ಟವನು' ಮುಂತಾದ ಚಿತ್ರಗಳು ಇನ್ನೂ ತೆರೆ ಕಾಣಬೇಕಿದೆ.


Click it and Unblock the Notifications












