For Quick Alerts
  ALLOW NOTIFICATIONS  
  For Daily Alerts

  ಅಯ್ಯೋ...ಲೂಸ್ ಮಾದ ಯೋಗೀಶ್ ಗೆ ಈ ರೀತಿ ಆಗಬಾರದಾಗಿತ್ತು!

  By Naveen
  |

  ಸಿನಿಮಾರಂಗ ಎನ್ನುವುದು ಒಂದು ಮಾಯಾಲೋಕ. ಇಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಒಬ್ಬ ದೊಡ್ಡ ಸ್ಟಾರ್ ನಟ ಆದರೂ ಕೂಡ ಟೈಂ ಸರಿ ಇಲ್ಲ ಅಂದ್ರೆ, ಏನು ಮಾಡುವುದಕ್ಕೂ ಆಗಲ್ಲ. ಸದ್ಯ ಲೂಸ್ ಮಾದ ಯೋಗಿ ಪರಿಸ್ಥಿತಿಯೂ ಹಾಗೆ ಆಗಿದೆ.

  ನಟ ಯೋಗಿ ಅಭಿನಯದ ಸಾಲು ಸಾಲು ಸಿನಿಮಾಗಳು ಸೋಲುತ್ತಿದೆ. ಇದರ ಜೊತೆಗೆ ಈಗ ಯೋಗಿ ನಟನೆಯ ಮೂರು ಹೊಸ ಸಿನಿಮಾಗಳು ಅರ್ಧಕ್ಕೆ ನಿಂತಿದೆ. ಯೋಗಿ ಒಂದು ದೊಡ್ಡ ಯಶಸ್ಸು ನೋಡಿ ಬಹಳ ದಿನಗಳೇ ಆಗಿತ್ತು. ಕೊನೆಯದಾಗಿ ಯೋಗಿ ಸಿನಿಮಾ ಗೆದ್ದಿದ್ದು ಅಂದರೆ ಅದು 'ಅಲೆಮಾರಿ'.

  ಸದ್ಯ ಯೋಗಿಗೆ ಅದೃಷ್ಟ ಕೈ ಕೊಟ್ಟಿದ್ದು, ಅವರ ಮೂರು ಸಿನಿಮಾಗಳು ಈಗ ನಿಂತು ಹೋಗಿದೆ. ಈ ಬಗ್ಗೆ ಸ್ವತಃ ಯೋಗಿ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ....

  ಮೂರು ಸಿನಿಮಾ ನಿಂತಿದೆ

  ಮೂರು ಸಿನಿಮಾ ನಿಂತಿದೆ

  'ಕೋಲಾರ' ಸಿನಿಮಾದ ರಿಲೀಸ್ ನಂತರ ಯೋಗಿ ನಟನೆಯ 'ದುನಿಯಾ 2', 'ಸ್ನೇಕ್ ನಾಗ' ಮತ್ತು 'ಜಂಡಾ' ಮೂರು ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಆದರೆ ಸದ್ಯ ಈ ಮೂರು ಸಿನಿಮಾಗಳು ನಿಂತಿದೆ. ಜೊತೆಗೆ ಈ ಸಿನಿಮಾಗಳು ನಿಂತಿರುವ ಬಗ್ಗೆ ಯೋಗಿ ಕಾರಣ ನೀಡಿದ್ದಾರೆ.

  'ದುನಿಯಾ 2' ಚಿತ್ರ

  'ದುನಿಯಾ 2' ಚಿತ್ರ

  ಅಂದುಕೊಂಡಂತೆ ಆಗಿದ್ದರೆ 'ದುನಿಯಾ 2' ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಟೈಟಲ್ ತೊಂದರೆಯಿಂದ ಸದ್ಯ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲವಂತೆ.

  ಏನಿದು ಸಮಸ್ಯೆ

  ಏನಿದು ಸಮಸ್ಯೆ

  ಫಿಲ್ಮ್ ಛೇಂಬರ್ ನಲ್ಲಿ 'ದುನಿಯಾ 2' ಟೈಟಲ್ ಅನ್ನು ಇಬ್ಬರಿಗೆ ನೀಡಿದ್ದಾರೆ. ಈ ಹಿಂದೆಯೇ ಒಬ್ಬರಿಗೆ ನೀಡಿದ್ದ ಆ ಶೀರ್ಷಿಕೆಯನ್ನು ಆ ಬಳಿಕ ಯೋಗಿ ಅವರ ತಂಡಕ್ಕೆ ಕೂಡ ನೀಡಿದ್ದಾರೆ. ಇದರಿಂದ ಸದ್ಯ ಈ ಕೇಸ್ ಕೋರ್ಟ್ ನಲ್ಲಿ ಇದ್ದು, ಚಿತ್ರದ ಬಿಡುಗಡೆಗೆ ತೊಂದರೆ ಆಗಿದೆಯಂತೆ.

  'ಲೂಸ್ ಮಾದ' ಯೋಗೀಶ್-ಸಾಹಿತ್ಯ ಎಂಗೇಜ್ಮೆಂಟ್ ಚಿತ್ರಗಳು

  'ಸ್ನೇಕ್ ನಾಗ' ಚಿತ್ರ

  'ಸ್ನೇಕ್ ನಾಗ' ಚಿತ್ರ

  'ಸ್ನೇಕ್ ನಾಗ' ಸಿನಿಮಾ ಸಿದ್ಧವಾಗಿ ವರ್ಷಗಳೇ ಕಳೆದರು ಇನ್ನೂ ಅದಕ್ಕೆ ರಿಲೀಸ್ ಭಾಗ್ಯವೇ ಸಿಕ್ಕಿಲ್ಲ. ಈ ಚಿತ್ರದ ನಿರ್ಮಾಪಕರ ತಂದೆಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಈ ಕಾರಣದಿಂದ ಚಿತ್ರ ಅರ್ಧಕ್ಕೆ ನಿಂತಿದೆ ಎಂದು ಯೋಗಿ ಹೇಳಿದ್ದಾರೆ.

  ಕೊಟ್ಟ ಮಾತು ಉಳಿಸಿಕೊಳ್ಳದೇ ಅಮ್ಮನಿಂದ ಕಪಾಳಕ್ಕೆ ಏಟುತಿಂದಿದ್ರು ಯೋಗಿ! ಏಕೆ?

  'ಜಂಡಾ' ಚಿತ್ರ

  'ಜಂಡಾ' ಚಿತ್ರ

  ಕೆಲ ತಿಂಗಳ ಹಿಂದೆ ಶುರು ಆಗಿದ್ದ 'ಜಂಡಾ' ಸಿನಿಮಾದ ಚಿತ್ರೀಕರಣ ಕೂಡ ಸದ್ಯ ನಿಂತು ಹೋಗಿದ್ದು, ಈ ಚಿತ್ರದ ನಿರ್ಮಾಪಕರ ಅನಾರೋಗ್ಯದ ಹಿನ್ನಲೆಯಲ್ಲಿ ಚಿತ್ರ ಮುಂದುವರೆಯಲು ಕಷ್ಟವಾಗಿದೆಯಂತೆ.

  ಯೋಗಿ ಯಾವ ನಟರಿಗೆ ಏನು ಅಡ್ವೈಸ್ ನೀಡಲು ಬಯಸುತ್ತಾರೆ?

  ಸರಿಯಾಗಿ ಪ್ರತಿಕ್ರಿಯೆ ಸಿಗುತ್ತಿಲ್ಲ

  ಸರಿಯಾಗಿ ಪ್ರತಿಕ್ರಿಯೆ ಸಿಗುತ್ತಿಲ್ಲ

  'ಸ್ನೇಕ್ ನಾಗ' ಮತ್ತು 'ಜಂಡಾ' ಚಿತ್ರದ ನಿರ್ಮಾಪಕರನ್ನು ಯೋಗಿ ಸಂಪರ್ಕ ಮಾಡಿದ್ದರೂ ಸಹ ಚಿತ್ರದ ಬಗ್ಗೆ ಅವರಿಂದ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲವಂತೆ.

  ಲೂಸ್ ಮಾದ ಯೋಗಿಗೆ ಇಂಡಸ್ಟ್ರಿಯಲ್ಲಿ ಬೆಸ್ಟ್ ಫ್ರೆಂಡ್ ಯಾರು?

  ಅವರ ಬ್ಯಾನರ್ ನಲ್ಲಿ ಸಿನಿಮಾ

  ಅವರ ಬ್ಯಾನರ್ ನಲ್ಲಿ ಸಿನಿಮಾ

  ಸದ್ಯ ಯೋಗಿ ತಮ್ಮ ಇಮೇಜ್ ಬದಲಿಸಿಕೊಳ್ಳಲಿದ್ದಾಂತೆ. ಮುಂದೆ ತಮ್ಮದೇ ಬ್ಯಾನರ್ ನಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುವುದಕ್ಕೆ ಅವರು ನಿರ್ಧಾರ ಮಾಡಿದ್ದಾರಂತೆ.

  English summary
  Kannada Actor 'Loose Mada Yogesh's 3 new movies have shelved

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X