For Quick Alerts
  ALLOW NOTIFICATIONS  
  For Daily Alerts

  ಧನಂಜಯ್ 'ಹೆಡ್‌ಬುಷ್' ಚಿತ್ರಕ್ಕೆ ಎಂಟ್ರಿಯಾದ ಕನ್ನಡದ ಸ್ಟಾರ್ ನಟ

  |

  'ನಟರಾಕ್ಷಸ' ಧನಂಜಯ್ ನಟಿಸುತ್ತಿರುವ ಸಿನಿಮಾಗಳ ಪೈಕಿ 'ಹೆಡ್‌ ಬುಷ್' ಬಹಳ ವಿಶೇಷ. ಒಂದು ಕಾಲದಲ್ಲಿ ಇಡೀ ಬೆಂಗಳೂರು ಅಂಡರ್‌ವರ್ಲ್ಡ್‌ ನಿಯಂತ್ರಣ ಮಾಡಿ ಮೆರೆದಾಡಿದ್ದ ಎಂಪಿ ಜಯರಾಜ್ ಜೀವನ ಆಧರಿಸಿ ತಯಾರಾಗುತ್ತಿರುವ ಸಿನಿಮಾ. ಬೆಂಗಳೂರು ಅಂಡರ್‌ವರ್ಲ್ಡ್‌ ಪುಟಗಳನ್ನು ತೆರೆದಾಗ ಜಯರಾಜ್ ಹೆಸರು ಬಹಳ ದೊಡ್ಡದಾಗಿ ಸದ್ದು ಮಾಡುತ್ತದೆ. ಭೂಗತ ಲೋಕದಲ್ಲಿ ಜಯರಾಜ್ ಜೀವನವನ್ನು ಬಹಳ ಹತ್ತಿರದಿಂದ ಕಂಡ ಅಗ್ನಿ ಶ್ರೀಧರ್ ಕಥೆ ಮಾಡಿರುವುದು ಈ ಚಿತ್ರದ ಆಸಕ್ತಿಕರ ವಿಷಯ. ಹೀಗೆ, ಅನೇಕ ವಿಶೇಷಗಳಿಂದ ತಯಾರಾಗುತ್ತಿರುವ ಸಿನಿಮಾದಲ್ಲಿ ಧನಂಜಯ್, ಡಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಯೋಗಿ ಕರೆದಾಗ ಬರಲ್ಲ ಅನ್ನೋಕೆ ಆಗಲ್ಲ

  ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ 'ಹೆಡ್‌ಬುಷ್‌' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಜಯರಾಜ್ ಪಾತ್ರಧಾರಿ ಧನಂಜಯ್ ಫಸ್ಟ್ ಲುಕ್ ಅನಾವರಣಗೊಂಡಿದೆ. ಇದರ ಬೆನ್ನಲ್ಲೆ ಮತ್ತೊಂದು ಥ್ರಿಲ್ಲಿಂಗ್ ಸಮಾಚಾರ ಹೊರಬಿದ್ದಿದೆ. ಡಾಲಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಕನ್ನಡದ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿಯಾಗಿದೆ. ಈ ವಿಚಾರವನ್ನು ಖುದ್ದು ಧನಂಜಯ್ ಬಹಿರಂಗಪಡಿಸಿದ್ದು, ಈ ಕಾಂಬಿನೇಷನ್ ಹೆಚ್ಚು ಕುತೂಹಲ ಮೂಡಿಸಿದೆ. ಮುಂದೆ ಓದಿ...

  ಜಯರಾಜ್ ಜೊತೆ ಲೂಸ್ ಮಾದ

  ಜಯರಾಜ್ ಜೊತೆ ಲೂಸ್ ಮಾದ

  ಜಯರಾಜ್ ಪಾತ್ರದಲ್ಲಿ ಧನಂಜಯ್ ಬಣ್ಣ ಹಚ್ಚಿದ್ದಾರೆ. ಇದೀಗ, ಧನಂಜಯ್ ಚಿತ್ರಕ್ಕೆ ಲೂಸ್ ಮಾದ ಯೋಗಿ ಕೈ ಜೋಡಿಸಿದ್ದಾರೆ. ಹೆಡ್‌ಬುಷ್ ಸಿನಿಮಾದಲ್ಲಿ ಯೋಗಿ ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಚಾರ ಈಗಷ್ಟೇ ಬಹಿರಂಗವಾಗಿದೆ. ಆದರೆ ಪಾತ್ರ ಯಾವುದು, ಅಂಡರ್‌ವರ್ಲ್ಡ್‌ ಚಿತ್ರದಲ್ಲಿ ಯೋಗಿಯ ಗೆಟಪ್ ಹೇಗಿರಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

  ಕನ್ನಡಕ್ಕೆ ಬಂದ ತೆಲುಗು ನಟಿ: ಧನಂಜಯ್ ಹೊಸ ಚಿತ್ರಕ್ಕೆ ನಾಯಕಿಕನ್ನಡಕ್ಕೆ ಬಂದ ತೆಲುಗು ನಟಿ: ಧನಂಜಯ್ ಹೊಸ ಚಿತ್ರಕ್ಕೆ ನಾಯಕಿ

  ನ್ಯಾಚುರಲ್ ನಟ ಯೋಗಿ

  ನ್ಯಾಚುರಲ್ ನಟ ಯೋಗಿ

  ಈ ಬಗ್ಗೆ 'ಲಂಕೆ' ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧನಂಜಯ್, ''ಯೋಗಿ ನಮ್ಮ ಹೆಡ್‌ಬಷ್ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಎಂಟ್ರಿಯನ್ನು ಬಹಳ ದೊಡ್ಡ ಮಟ್ಟದಲ್ಲಿ ಅನಾವರಣ ಮಾಡಬೇಕು ಎನ್ನುವ ಯೋಜನೆ ಇತ್ತು. ಆದರೆ, ಆ ವಿಷ್ಯ ಬಹಿರಂಗವಾಗಿರುವ ಹಿನ್ನೆಲೆ ನಾನು ವೆಲ್‌ಕಮ್ ಮಾಡ್ತಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಯೋಗೇಶ್ ಬಹಳ ವಿಶಷ ಮತ್ತು ವಿಭಿನ್ನ ಕಲಾವಿದ. ನೈಜ ಅಭಿನಯ ಮಾಡುವಂತಹ ಕೆಲವೇ ಕಲಾವಿದರ ಪೈಕಿ ಯೋಗಿ ಸಹ ಒಬ್ಬರು. ಯಾವುದೇ ಪಾತ್ರವನ್ನು ಸೂಕ್ತವಾಗಿ ನಿಭಾಯಿಸಬಲ್ಲ ನಟ. ಬಹಳ ಕಡಿಮೆ ಅವಧಿಯಲ್ಲಿ ದೊಡ್ಡ ಯಶಸ್ಸು ನೋಡಿ, ಸೂಪರ್ ಸ್ಟಾರ್ ಸ್ಥಾನ ನೋಡಿರುವ ಕಲಾವಿದ. ನಮ್ಮ ಚಿತ್ರದಲ್ಲಿ ಒಳ್ಳೆಯ ಪಾತ್ರದಲ್ಲಿ ಅವರನ್ನು ನೋಡಬಹುದು'' ಎಂದು ಹೇಳಿದರು.

  ಪಾಯಲ್ ರಜಪೂತ್ ನಾಯಕಿ

  ಪಾಯಲ್ ರಜಪೂತ್ ನಾಯಕಿ

  'ಹೆಡ್‌ಬುಷ್' ಸಿನಿಮಾದ ನಾಯಕಿ ಪಾತ್ರಕ್ಕೆ ತೆಲುಗಿನ ಖ್ಯಾತ ನಟಿ ಪಾಯಲ್ ರಜಪೂತ್ ಆಯ್ಕೆಯಾಗಿದ್ದಾರೆ. ಪಾಯಲ್ ಪ್ರವೇಶದ ಬಗ್ಗೆ ಧನಂಜಯ್ ಅಧಿಕೃತವಾಗಿ ಮಾಹಿತಿ ನೀಡಿದ್ದರು. ಮೂಲತಃ ಪಂಜಾಬಿ ಕುಟುಂಬದ ಪಾಯಲ್ ರಜಪೂತ್ ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ತೆಲುಗಿನಲ್ಲಿ ಬಂದ 'ಆರ್‌ಎಕ್ಸ್‌100' ಚಿತ್ರ ಪಾಯಲ್‌ಗೆ ದೊಡ್ಡ ಬ್ರೇಕ್ ಕೊಡ್ತು. ಅದಾದ ಬಳಿಕ ಎನ್‌ಟಿಆರ್ ಕಥಾನಾಯಕಡು, ಸಿತಾ, ಆರ್‌ಡಿಎಕ್ಸ್ ಲವ್, ವೆಂಕಿಮಾಮ, ಡಿಸ್ಕೋ ರಾಜ ಅಂತಹ ಸಿನಿಮಾಗಳಲ್ಲಿ ಪಾಯಲ್ ನಟಿಸಿದ್ದಾರೆ. ಈಗ ಹೆಡ್‌ಬುಷ್ ಚಿತ್ರದೊಂದಿಗೆ ಕನ್ನಡಕ್ಕೂ ಎಂಟ್ರಿಯಾಗಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ಧನಂಜಯ್: ಡಾನ್ ಜಯರಾಜ್ ಆಗಿ ಎಂಟ್ರಿ ಕೊಟ್ಟ ಡಾಲಿಹುಟ್ಟುಹಬ್ಬದ ಸಂಭ್ರಮದಲ್ಲಿ ಧನಂಜಯ್: ಡಾನ್ ಜಯರಾಜ್ ಆಗಿ ಎಂಟ್ರಿ ಕೊಟ್ಟ ಡಾಲಿ

  ಶೂನ್ಯ ನಿರ್ದೇಶನದ ಚಿತ್ರ

  ಶೂನ್ಯ ನಿರ್ದೇಶನದ ಚಿತ್ರ

  'ಹೆಡ್‌ಬುಷ್' ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದಿದ್ದು, ಚೊಚ್ಚಲ ನಿರ್ದೇಶಕ ಶೂನ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಿಸುತ್ತಿದ್ದು, ಎರಡು ಭಾಗದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಇನ್ನು ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.

  English summary
  Kannada actor Loose Mada Yogi joins hands With Dhananjaya for 'Head Bush' Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X