For Quick Alerts
  ALLOW NOTIFICATIONS  
  For Daily Alerts

  ಲವ್‌ ಮಾಕ್ಟೇಲ್‌ನಿಂದ ಬಂತು ಸಿಹಿ ಸುದ್ದಿ- ನಾಳೆ ಕ್ರೇಜಿ ಪುತ್ರನ ಸೂಪರ್ ಸಪ್ರೈಸ್!

  |

  ಡಾರ್ಲಿಂಗ್ ಕೃಷ್ಣ ಅಭಿನಯದ ಬಹುನಿರೀಕ್ಷಿತ ಕನ್ನಡ ಚಿತ್ರ ಲವ್‌ ಮಾಕ್ಟೇಲ್‌ 2 ಹೊಸ ಸುದ್ದಿಯನ್ನು ಕೊಟ್ಟಿದೆ. ಲವ್ ಮಾಕ್ಟೇಲ್ 2 ಸೆನ್ಸಾರ್ ಪಾಸ್ ಮಾಡಿದೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು ಪ್ರಮಾಣ ಪತ್ರ ನೀಡಿದೆ. ಈ ವಿಚಾರವನ್ನು ನಟ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಲವ್ ಮಾಕ್ಟೇಲ್ ಚಿತ್ರದ ಟೈಟಲ್‌ನಲ್ಲೇ ಒಂದು ಕ್ರೇಜ್ ಇದೆ. ಯಾಕೆಂದರೆ ಲವ್ ಮಾಕ್ಟೇಲ್ ಭಾಗ-1 ಹಿಟ್ ಲಿಸ್ಟ್ ಸೇರಿರುವ ಸಿನಿಮಾ. ಸಿಂಪಲ್ ಕಥೆಯೊಂದಿಗೆ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಂತಹ ಚಿತ್ರ ಲವ್‌ಮಾಕ್ಟೇಲ್. ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ರಿಲೀಸ್ ಆಗಿದ್ದ ಲವ್ ಮಾಕ್ಟೇಲ್ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಯನ್ನು ಗಳಿಸಿತ್ತು.

  ಮೊದಲ ಭಾಗದ ಯಶಸ್ಸು ಲವ್ ಮಾಕ್ಟೇಲ್ 2 ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಈಗಾಗಲೇ ಲವ್ ಮಾಕ್ಟೇಲ್ 2 ಚಿತ್ರದ ಪೋಸ್ಟರ್ ಮತ್ತು ಹಾಡುಗಳು ಗಮನ ಸೆಳೆದಿವೆ. ಈ ಚಿತ್ರವು ಪ್ರೀತಿ-ಪ್ರೇಮದ ಭಾವನಾತ್ಮಕ ಮಜಲುಗಳನ್ನು ತೆರೆದಿಡಲಿದೆ. ಸಿನಿಮಾದ ಬಗ್ಗೆ ಹೆಚ್ಚಿನದಾಗಿ ಚಿತ್ರತಂಡ ಏನೇನು ಬಿಟ್ಟು ಕೊಟ್ಟಿಲ್ಲ. ಈ ಚಿತ್ರಕ್ಕೆ ರಾಚೆಲ್ ನಾಯಕಿ ಆಗಿ ಆಗಿದ್ದಾರೆ. ಆದ್ರೆ ಈ ಸಿನಿಮಾದಲ್ಲಿ ನಟಿ ಮಿಲನಾ ಇರ್ತಾರಾ..? ಇದು ಭಾಗ ಒಂದರ ಮುಂದುವರೆದ ಭಾಗನಾ ಅನ್ನೋ ಪ್ರಶ್ನೆಗಳಿಗೆ ಚಿತ್ರತಂಡ ಇನ್ನು ಉತ್ತರಿಸ ಬೇಕಾಗಿದೆ.

  ಕ್ರೇಜಿ ಪುತ್ರನಿಂದ ನಾಳೆ ಸರ್ಪ್ರೈಸ್ ಪಕ್ಕಾ!

  ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್ ಸಿನಿಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಲು ಸಜ್ಜಾಗಿದ್ದಾರೆ. ಅದು ಅಂತಿಂಥಾ ಸರ್ಪ್ರೈಸ್ ಅಲ್ಲ ಕ್ರೇಜಿಸ್ಟಾರ್ ಪುತ್ರನ ಮುತ್ತಿನ ಕಥೆ ರಿವೀಲ್ ಮಾಡಲಿರೋ ಅಚ್ಚರಿ. ಹೌದು ನಟ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್‌ಪೇಟೆ ಸಿನಿಮಾ ತಂಡ ಪ್ರೇಕ್ಷಕರಿಗೆ ಸರ್ಪ್ರೈಸ್ ಕೊಡಲಿದೆ. ಈ ವಿಚಾರವನ್ನು ಸಣ್ಣದೊಂದು ಟೀಸರ್ ಮೂಲಕ ಚಿತ್ರತಂಡ ಅನಾವರಣ ಮಾಡಿದೆ. ರಂಗಾಯಣ ರಘು ಧ್ವನಿಯಲ್ಲಿ ಟೀಸರ್ ಮೂಡಿ ಬಂದಿದೆ. ಟೀಸರ್‌ನಲ್ಲಿರೋ ಸಾಲುಗಳು ಕ್ರೇಜಿಸ್ಟಾರ್ ಮುತ್ತಿನ ಕಥೆಯನ್ನು ಹೇಳುವಂತಿವೆ.

  ಕ್ರೇಜಿ ಸ್ಟಾರ್ ಹೇಳಿಕೊಟ್ಟ ಪ್ರೇಮ ಲೋಕದ ಪಾಠವನ್ನಧಾರಿಸಿ ಮುಗಿಲ್‌ಪೇಟೆ ಚಿತ್ರದಲ್ಲಿ ಮುತ್ತಿನ ಕೈ ಕಟ್ಟಿ ಕೊಡಲಾಗಿದೆ. ಪ್ರೇಮಲೋಕದಿಂದ ಹಿಡಿದು ಈಗಿನ ಪ್ರೇಮಿಗಳಿಗೂ ಕ್ರೇಜಿಸ್ಟಾರ್ ಸ್ಪೂರ್ತಿ ಅಂತಿದೆ ಈ ಟೀಸರ್. ಆದ್ರೆ ಇದು ಯಾವ ರೀತಿಯ ಮುತ್ತಿನ ಕಥೆ . ಕ್ರೇಜಿಸ್ಟಾರ್ ಮುತ್ತಿನ ಕಥೆಗೂ ಮುಗಿಲ್‌ಪೇಟೆ ಮುತ್ತಿನ ಕಥೆಗೂ ಏನು ಸಂಬಂಧ ಅನ್ನೋದು ನಾಳೆ ಗೊತ್ತಾಗಲಿದೆ. ಮುಗಿಲ್‌ಪೇಟ್ ಸಣ್ಣಸಣ್ಣ ವಿಚಾರಗಳಿಂದಲೇ ಗಮನಸೆಳೆಯುತ್ತಿದೆ. ಚಿತ್ರ ತಂಡ ಟೀಸರ್ ಮೂಲಕ ಹಾಡಿನ ಮೂಲಕ ಗಮನ ಸೆಳೆದಿದೆ. ಇದೀಗ ಸಿನಿಪ್ರೇಕ್ಷಕರಿಗೆ ಸರ್ಪ್ರೈಸ್ ಮಾಡ್ತೀವಿ ಅಂತಿರೋ ಚಿತ್ರತಂಡ, ಹಾಡು, ಟೀಸರ್, ಟ್ರೇಲರ್ ಯಾವ ರೂಪದಲ್ಲಿ ಬರಲಿದೆ ಅನ್ನೋ ಕುತೂಹಲ ಮೂಡಿಸಿದೆ.

  English summary
  love mocktail-2 movie got u censor certificate- mugilpete movie ready give surprise tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X