»   » ಲವ್ಲಿಸ್ಟಾರ್ ಪ್ರೇಮ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಲವ್ಲಿಸ್ಟಾರ್ ಪ್ರೇಮ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ

Posted By:
Subscribe to Filmibeat Kannada

ನೆನಪಿರಲಿ' ಪ್ರೇಮ್ ಮತ್ತು ಜ್ಯೋತಿ ದಂಪತಿಗಿಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಆಗಸ್ಟ್ 1 ನೇ ತಾರೀಖಿಗೆ ನಟ ಪ್ರೇಮ್ ಮತ್ತು ಜ್ಯೋತಿ ಅವರು ಮದುವೆ ಆಗಿ 17 ವರ್ಷಗಳು ಕಳೆದಿವೆ.

ಇವರಿಬ್ಬರ ಪ್ರೀತಿಯ ದಾಂಪತ್ಯ ಸುಖಕರವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರೇಮ್ ಅವರು ನಾಯಕನಟರಾಗಿ ಅಭಿನಯಿಸುವುದಕ್ಕು ಮುಂಚೆಯೇ ಜ್ಯೋತಿ ಅವರನ್ನ ವಿವಾಹವಾಗಿದ್ದರು. ಹೀಗಾಗಿ, ಪ್ರೇಮ್ ಅವರ ಕಷ್ಟ-ಸುಖದಲ್ಲಿ ಸಮಪಾಲು ಎಂಬಂತೆ ಸದಾ ಜೊತೆಯಲ್ಲಿದ್ದು ಪ್ರೋತ್ಸಾಹಿಸಿದ್ದಾರೆ.

Lovely Star Prem and Jyothi Wedding Anniversary

2004 ರಲ್ಲಿ ತೆರೆಕಂಡ 'ಪ್ರಾಣ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಪ್ರೇಮ್, 'ನೆನಪಿರಲಿ' ಚಿತ್ರದ ಮೂಲಕ ಯಶಸ್ಸು ಕಂಡರು. ನಂತರ 'ಜೊತೆ ಜೊತೆಯಲಿ', 'ಪಲ್ಲಕ್ಕಿ', 'ಚಾರ್ ಮಿನರ್', 'ಚಂದ್ರ', 'ಫೇರ್ ಅಂಡ್ ಲವ್ಲಿ', 'ಮಳೆ', 'ಚೌಕ' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

Lovely Star Prem and Jyothi Wedding Anniversary
Lovely Star Prem talks about his Journey from 1986 - 2016 in Chowka | Filmibeat kannada

ಸದ್ಯ, ಪ್ರೇಮ್ ಅವರು 'ದಳಪತಿ' ಚಿತ್ರದಲ್ಲಿ ನಟಿಸುತ್ತಿದ್ದು, ದಿನಕರ್ ತೂಗುದೀಪ್ ನಿರ್ದೇಶನ ಮಾಡಲಿರುವ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. 17 ವರ್ಷಗಳ ಕಾಲ ಸಂತೋಷದಿಂದ ಮಾದರಿಯಾಗಿ ಜೀವನ ನಡೆಸಿರುವ ಪ್ರೇಮ್ ದಂಪತಿಗೆ ನಮ್ಮ ಫಿಲ್ಮಿಬೀಟ್ ಕಡೆಯಿಂದಲೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

English summary
Lovely Star Prem and Jyothi's 17th Wedding Anniversary. Kannada Actor Prem Married on august 1st, 2000

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada