For Quick Alerts
  ALLOW NOTIFICATIONS  
  For Daily Alerts

  ಸೈಕಲ್ಲಿನಲ್ಲಿ ಓಡಾಡುತ್ತಿರುವ ಲವ್ಲಿ ಸ್ಟಾರ್ ಪ್ರೇಮ್ !

  |

  ಲವ್ಲಿ ಸ್ಟಾರ್ ಪ್ರೇಮ್ 'ಕಾಲೇಜು' ಓದುತ್ತಿದ್ದಾರೆ. ಕೈಯಲ್ಲಿ ಬುಕ್ಸ್, ಹೋಗುವಾಗ ಬರುವಾಗ ಸೈಕಲ್ ಇವು ಸದ್ಯಕ್ಕೆ ಪ್ರೇಮ್ ಸಂಗಾತಿಗಳು. ಅರೇ ಪ್ರೇಮ್ ಅಷ್ಟೊಂದು ಚಿಕ್ಕವರಾಗಿಬಿಟ್ಟರಾ ಎಂದು ತಲೆ ಕೆಡಿಸಿಕೊಳ್ಳಬೇಡಿ. ಪ್ರೇಮ್ ಇವೆಲ್ಲಾ ಗೆಟಪ್ ಗಳು ಇದೀಗ ಶೂಟಿಂಗ್ ಹಂತದಲ್ಲಿರುವ ನಿರ್ದೇಶಕ ಎರ್ ಚಂದ್ರು ನಿರ್ದೇಶನದ 'ಚಾರ್ ಮಿನಾರ್' ಚಿತ್ರಕ್ಕಾಗಿ ಅಷ್ಟೇ! "ಈ ಚಿತ್ರದಲ್ಲಿ ನಟ ಲವ್ಲಿ ಸ್ಟಾರ್ ಪ್ರೇಮ್ ಮೂರು ವಿಭಿನ್ನ ಗೆಟಪ್ ಗಳಲ್ಲಿ ಮಿಂಚಲಿದ್ದಾರೆ" ಎಂದಿದ್ದಾರೆ ಚಂದ್ರು.

  ಈಗಾಗಲೇ ಪ್ರೇಮ್ ಅವರು ಎರಡು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು. ಈಗ ಮೂರನೆಯ ಗೆಟಪ್ ಬಗ್ಗೆ ಕೂಡ ಸುದ್ದಿಯಾದಂತಾಗಿದೆ. ಓಡಾಡಲು ಸೈಕಲ್, ಕೈನಲ್ಲೊಂದಿಷ್ಟು ಬುಕ್ಸ್ ಹಾಗೂ ಹುಡುಗಿಯರನ್ನು ಆಕರ್ಷಿಸಲು ಸೈಕಲ್ಲಿಗೊಂದು ಕೈನಲ್ಲೊಂದು ಗುಲಾಬಿ ಇವೆಲ್ಲಾ ಈಗ ಪ್ರೇಮ್ ಅವರಿಗೆ ಜೊತೆಯಾಗಿವೆ. ಪ್ರೇಮ್ ಈಗ ಪಕ್ಕಾ ಪಿಯುಸಿ ಸ್ಟೂಡೆಂಟ್. ಪ್ರೇಮ್ ಅವರ ಈ ಅವತಾರವನ್ನು ನೋಡಿದರೆ ಚಿತ್ರದಲ್ಲಿ ಖಂಡಿತ ನವಿರಾದ ಪ್ರೇಮಕಥೆಯಂತೂ ಇದ್ದೇ ಇದೆ ಎನ್ನಬಹುದು.

  ಇತ್ತೀಚಿಗಷ್ಟೇ ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರದ ತಮ್ಮ ಭಾಗದ ಶೂಟಿಂಗ್ ಮುಗಿಸಿರುವ ಪ್ರೇಮ್, ಈಗ 'ಚಾರ್ ಮಿನಾರ್' ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಎರಡೂ ಚಿತ್ರಗಳ ಚಿತ್ರೀಕರಣಕ್ಕೆ ಮೊದಲು ಪ್ರೇಮ್, ಸಿಕ್ಸ್ ಪ್ಯಾಕ್ ಮಾಡಿಕೊಂಡು ಕಟ್ಟುಮಸ್ತಾದ ದೇಹದೊಂದಿಗೆ ಪೊಲೀಸ್ ಪಾತ್ರದ ಮೂಲಕ 'ಶತ್ರು' ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈಗಂತೂ ಕಾಲೇಜ್ ಬಾಯ್ ಆಗಿರುವ ಪ್ರೇಮ್ ಮುಖ ಇನ್ನಷ್ಟು ಫ್ರೆಶ್ ಆಗಿ ಕಾಣುತ್ತಿದೆ.

  'ನೆನಪಿರಲಿ' ಚಿತ್ರದ ನಂತರ ಸ್ವಲ್ಪ ಕಾಲ ಸರಿಯಾದ ಅವಕಾಶ ಸಿಗದೇ ವೃತ್ತಿಜೀವನದಲ್ಲಿ ಡಲ್ಲಾಗಿದ್ದ ಪ್ರೇಮ್ ಈಗ ಸಖತ್ ಮಿಂಚುತ್ತಿದ್ದಾರೆ. ಇದನ್ನು ಅವರ ಎರಡನೇ ಇನ್ನಿಂಗ್ಸ್ ಎನ್ನಬಹುದೇನೋ! ತಮ್ಮ ಪ್ರೇಮಕಥೆ ಮೂಲಕ 'ತಾಜ್ ಮಹಲ್' ಚಿತ್ರದಲ್ಲಿ ಗೆದ್ದು 'ಪ್ರೇಮ್ ಕಹಾನಿ'ಯಲ್ಲಿ ಸೋತಿದ್ದ ನಿರ್ದೇಶಕ ಆರ್ ಚಂದ್ರು, ಈ 'ಚಾರ್ ಮಿನಾರ್' ಚಿತ್ರದಲ್ಲಿ ಯಾವ ರೀತಿ ವಿಭಿನ್ನ ಪ್ರೇಮಕಥೆ ಹೆಣೆದಿರಬಹುದು ಎಂಬ ಕುತೂಹಲ ಪ್ರೇಕ್ಷಕರಿಗಷ್ಟೇ ಅಲ್ಲದೇ ಗಾಂಧಿನಗರದಕ್ಕೂ ಇದೆ. ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Lovely Star Prem is acting with in 'College Student' getup at director R Chandru upcoming movie 'Char Minor'. He is performing in three different getup in this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X