Don't Miss!
- News
ಕೊರೊನಾ ಏರಿಕೆ; ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲು ಬ್ರಿಟನ್ ನಿರ್ಧಾರ
- Finance
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಏಪ್ರಿಲ್ 19ರ ಮಾರುಕಟ್ಟೆ ದರ ಇಲ್ಲಿದೆ
- Sports
ಐಪಿಎಲ್ 2021: ಮತ್ತೊಂದು ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ ಚೇತನ್ ಸಕಾರಿಯಾ
- Education
GIC Of India Officer Scale I Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಇಕ್ಕಟ್'ನಲ್ಲಿ ಸಿಲುಕಿದವರ ಬೆಂಬಲಕ್ಕೆ ನಿಂತ ಲೂಸಿಯ ಪವನ್ ಕುಮಾರ್
ಲೂಸಿಯ ಖ್ಯಾತಿಯ ಪವನ್ ಕುಮಾರ್ ಈಗ ಇಕ್ಕಟ್‌ನಲ್ಲಿ ಸಿಲುಕಿದವರ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟಕ್ಕು ಇಕ್ಕಟ್ ನಲ್ಲಿ ಸಿಲುಕಿದ್ದು ಯಾರು? ಏನಿದು ಅಂತ ಯೋಚಿಸುತ್ತಿದ್ದೀರಾ. ಚಂದನವನದಲ್ಲಿ ಇಕ್ಕಟ್ ಎನ್ನುವ ಹೊಸ ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಹೊಸಬರ ಹೊಸ ಸಿನಿಮಾಗೆ ಲೂಸಿಯ ಪವನ್ ಕುಮಾರ್ ಸಾಥ್ ನೀಡಿದ್ದಾರೆ.
ಇಕ್ಕಟ್ ಸಿನಿಮಾ ನೋಡಿ ಇಂಪ್ರೆಸ್ ಆದ ಪವನ್ ಕುಮಾರ್ ತನ್ನ ಪವನ್ ಸ್ಟುಡಿಯೋಸ್‌ನಿಂದ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಅಂದಹಾಗೆ ಇಕ್ಕಟ್ ಇಶಮ್ ಮತ್ತು ಹಸೀನ್ ಖಾನ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ.
'ಲೂಸಿಯಾ' ಪವನ್ ಕುಮಾರ್ ವೆಬ್ ಸರಣಿಯಲ್ಲಿ ಅಮಲಾ ಪೌಲ್
ರಾಜ್ ಬಿ ಶೆಟ್ಟಿ ಅವರ ಒಂದು ಮೊಟ್ಟೆಯ ಕಥೆ ಸಿನಿಮಾ ಬಳಿಕ ಪವನ್ ಇಕ್ಕಟ್ ಸಿನಿಮಾವನ್ನು ರಿಲೀಸ್ ಮಾಡಲು ಮುಂದಾಗಿದ್ದಾರೆ. ಇಕ್ಕಟ್ ಪೋಸ್ಟರ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದೆ. ಲೈಟ್ ಹಾರ್ಟ್ ಕಾಮಿಡಿ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ವಿಶೇಷ ಎಂದರೆ ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭೂಮಿ ಶೆಟ್ಟಿ ನಟನೆಯ ಮೊದಲನೆ ಸಿನಿಮಾ ಇದಾಗಿದೆ.
ಈ ಬಗ್ಗೆ ನಿರ್ದೇಶಕ ಪವನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇಕ್ಕಟ್ ಸಿನಿಮಾವನ್ನು ಬಿಡುಗಡೆ ಮಾಡುತ್ತಿರುವುದು ಸಂತೋಷವಾಗುತ್ತಿದೆ. ಇದು ನಿಜವಾದ ನಗುವಿನ ಸಿನಿಮಾ. ಶೀಘ್ರದಲ್ಲೇ ಸಿನಿಮಾ ಟ್ರೈಲರ್ ಬಿಡುಗಡೆ ಮಾಡುತ್ತೇವೆ. ನೀವೆಲ್ಲರೂ ಈ ಚಿತ್ರಕ್ಕೆ ಪ್ರೀತಿ ಮತ್ತು ಗಮನ ನೀಡುತ್ತೀರಿ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
ಇಕ್ಕಟ್ ಈಗ ಸೆನ್ಸಾರ್ ಅಂಗಳಕ್ಕೆ ಹೋಗಲು ಸಜ್ಜಾಗಿದೆ. ಸೆನ್ಸಾರ್ ಬಳಿಕ ಸಿನಿಮಾ ಬಿಡುಗಡೆ ದಿನಾಂಕ ಫೈನಲ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಸದ್ಯ ಸಿನಿಮಾತಂಡ ಅಂದುಕೊಂಡ ಪ್ರಕಾರ ಮೇ ತಿಂಗಳಲ್ಲಿ ಚಿತ್ರಮಂದಿರಕ್ಕೆ ಕರೆತರುವ ಪ್ಲಾನ್ ಮಾಡಿದೆ. ಪವನ್ ಸಾಥ್ ನೀಡಿರುವ ಹೊಸಬರ ಇಕ್ಕಟ್ ಹೇಗಿದೆ ಎಂದು ನೋಡಲು ಇನ್ನು ಸ್ವಲ್ಪ ಸಮಯ ಕಾಯಬೇಕು.