»   » ಶಿವಣ್ಣನ ಹೊಸ ಚಿತ್ರದ ಮುಹೂರ್ತಕ್ಕೆ 'ದೊಡ್ಮನೆ' ಅತಿಥಿಗಳು.! ಯಾರದು?

ಶಿವಣ್ಣನ ಹೊಸ ಚಿತ್ರದ ಮುಹೂರ್ತಕ್ಕೆ 'ದೊಡ್ಮನೆ' ಅತಿಥಿಗಳು.! ಯಾರದು?

Posted By:
Subscribe to Filmibeat Kannada
ಶಿವರಾಜ್ ಕುಮಾರ್ ಮುಂದಿನ ಸಿನಿಮಾಗೆ ನವೆಂಬರ್ ನಲ್ಲಿ ಮುಹೂರ್ತ | Filmibeat Kannada

ಡಾ.ರಾಜ್ ಕುಮಾರ್ ಅವರ ಕುಟುಂಬದ ಸದಸ್ಯರಲ್ಲೊಬ್ಬರಾದ ಲಕ್ಕಿ ಗೋಪಾಲ್ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿಯನ್ನ ಫಿಲ್ಮಿಬೀಟ್ ಈ ಹಿಂದೆ ವರದಿ ಮಾಡಿತ್ತು.

ಈ ಚಿತ್ರದ ಮುಹೂರ್ತ ಸಮಾರಂಭ ಈಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1 ರಂದು ನಡೆಯಲಿದೆ. ತುಂಬ ಅದ್ಧೂರಿಯಾಗಿ ಜರಗಲಿರುವ ಈ ಕಾರ್ಯಕ್ರಮಕ್ಕೆ ಅತಿಥಿ ಯಾರಾಗಬಹುದು ಎಂಬ ಕುತೂಹಲ ಕಾಡಿತ್ತು.

'ದೊಡ್ಮನೆ'ಯ ದೊಡ್ಡ ಸುದ್ದಿ: ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದ ರಾಜ್ ಕುಟುಂಬದ ಕುಡಿ!

ಇದೀಗ, ಶಿವಣ್ಣ ಅವರ ಹೊಸ ಚಿತ್ರದ ಮುಹೂರ್ತ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸಿಕ್ಕಿದ್ದು, ಯಾರೆಲ್ಲಾ ಗಣ್ಯರು ಆಗಮಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.....

'ದೊಡ್ಮನೆ ಸೊಸೆ'ಯರಿಂದ ಜ್ಯೋತಿ

ದೊಡ್ಮನೆ ಸೊಸೆಯರಾದ ಗೀತಾ ಶಿವರಾಜ್ ಕುಮಾರ್, ಮಂಗಳಾ ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿ ಜ್ಯೋತಿ ಬೆಳಗಿಸುವುದರ ಮೂಲಕ ಶಿವಣ್ಣನ ಹೊಸ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

'ದಿ ವಿಲನ್' ಚಿತ್ರೀಕರಣದಲ್ಲಿ ಶಿವಣ್ಣನ ಆಕ್ಷನ್ ನೋಡಿ.!

ಟೈಟಲ್ ಲಾಂಚ್ ಮಾಡೋದು ಯಾರು?

ಲಕ್ಕಿ ಗೋಪಾಲ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ಚಿತ್ರದ ಟೈಟಲ್ ಏನು ಎಂಬುದು ಕುತೂಹಲ ಮೂಡಿಸಿದೆ. ಚಿತ್ರದ ಮುಹೂರ್ತ ದಿನವೇ ಟೈಟಲ್ ಘೋಷಣೆಯಾಗಲಿದ್ದು, ನಟ ರಾಘವೇಂದ್ರ ರಾಜ್ ಕುಮಾರ್ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ.

ಉಪೇಂದ್ರ 'ಡಾನ್' ಜಯರಾಜ್ ಆಗಲ್ಲ: 'ಸ್ಟಾರ್' ನಟನಿಗೆ ಹೋಯ್ತು ಈ ಆಫರ್?

ಮೋಷನ್ ಪೋಸ್ಟರ್ ರಿಲೀಸ್.!

ಇನ್ನು ಅದೇ ದಿನ ಸೆಂಚುರಿ ಸ್ಟಾರ್ ಅಭಿನಯಿಸಲಿರುವ ಈ ಚಿತ್ರದ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಲಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.

ವಿಶೇಷ ಆಹ್ವಾನಿತರು

ದೊಡ್ಮನೆಯ ಈ ದೊಡ್ಡ ಸಂಭ್ರಮಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ವಿನಯ್ ರಾಜ್ ಕುಮಾರ್, ಗುರು ರಾಜ್ ಕುಮಾರ್, ನಿವೇದಿತಾ ಶಿವರಾಜ್ ಕುಮಾರ್ ಮತ್ತು ನಟಿ ರಚಿತಾ ರಾಮ್ ವಿಶೇಷ ಆಹ್ವಾನಿತರಾಗಿದ್ದಾರೆ.

'ದಿ ವಿಲನ್' ಮುಗಿಯುವ ಮೊದಲೇ ಶಿವಣ್ಣ - ಪ್ರೇಮ್ ಮುಂದಿನ ಸಿನಿಮಾ ಸುದ್ದಿ ಹೊರ ಬಂತು!

ಚಿತ್ರತಂಡದ ಬಗ್ಗೆ....

ಲಕ್ಕಿ ಗೋಪಾಲ್ ನಿರ್ದೇಶನ ಮಾಡಲಿರುವ ಈ ಚಿತ್ರವನ್ನ ಕಿರಣ್ ಕುಮಾರ್ ಸಿ ಗೌಡ ಮತ್ತು ಅರವಿಂದ್ ಬಿ ಗೌಡ ಬಂಡವಾಳ ಹಾಕುತ್ತಿದ್ದಾರೆ. ಅಜನೀಶ್ ಲೋಕನಾತ್ ಸಂಗೀತಿ ನೀಡಲಿದ್ದಾರೆ. ಚೇತನ್ ಕುಮಾರ್ ಸಂಭಾಷಣೆ ಮತ್ತು ಸಾಹಿತ್ಯ ಬರೆಯಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣವಿದ್ದು, ರಾಜನ್ ಎಫೆಕ್ಟ್ ನೀಡಲಿದ್ದಾರೆ.

ಯಾರು ಈ ಲಕ್ಕಿ ಗೋಪಾಲ್?

ಡಾ.ರಾಜ್ ಕುಮಾರ್ ರವರ ಸಹೋದರಿಯ ಮೊಮ್ಮಗ ಈ ಲಕ್ಕಿ ಗೋಪಾಲ್. ಡಾ.ರಾಜ್‌ ಅವರ ಸಹೋದರಿ ನಾಗಮ್ಮ ಅವರ ಮೊಮ್ಮಗ. ನಾಗಮ್ಮ ಅವರ ಪುತ್ರ ಗೋಪಾಲ್‌ ಈಗ ಗಾಜನೂರಿನಲ್ಲಿ ವಾಸವಿದ್ದಾರೆ. ಅವರ ಪುತ್ರ ಈ ಲಕ್ಕಿ ಗೋಪಾಲ್‌. ಲಕ್ಕಿ ಗೋಪಾಲ್‌ ಓದಿದ್ದು, ಬೆಳೆದಿದ್ದು ಬೆಂಗಳೂರಲ್ಲಿ. ಬಿಕಾಂ ಓದಿರುವ ಅವರು, "ಸಿದ್ಧಾರ್ಥ', "ರನ್‌ ಆಂಟೋನಿ', "ದೊಡ್ಮನೆ ಹುಡುಗ' ಮತ್ತು "ಟಗರು' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಅಣ್ಣಾವ್ರ ಮಗ ಶಿವಣ್ಣನ ಸರಳತೆಗೆ ಈ ಫೋಟೋ ಸಾಕ್ಷಿ.!

ಯಾವಾಗ ಮತ್ತು ಎಲ್ಲಿ?

ನವೆಂಬರ್ 1 (ಬುಧವಾರ) ರಂದು ಸಂಜೆ 4.30ಕ್ಕೆ ಮಂತ್ರಿ ಸ್ಕ್ವಯರ್ ಮಾಲ್ ಮಲ್ಲೇಶ್ವರಂ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

English summary
Dr.Rajkumar family member Lucky Gopal to make his sandalwood debut as Director. The Movie will launch on November 1st.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X