For Quick Alerts
  ALLOW NOTIFICATIONS  
  For Daily Alerts

  ರಾಹುಲ್ ಗಾಂಧಿ ಬಗ್ಗೆ ರಮ್ಯಾ ಮೌನ ಮಾತಾದಾಗ...

  By Harshitha
  |

  ನಟಿ ರಮ್ಯಾ ಈಗ ಎಲ್ಲಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಲಂಡನ್ ನಲ್ಲಿ ವ್ಯಾಸಂಗ ಮಾಡುತ್ತಿರುವ ರಮ್ಯಾ ಮೇಡಂ ಇತ್ತೀಚೆಗಷ್ಟೆ ಟಿಪ್ಪು ಸುಲ್ತಾನ್ ಮತ್ತು ಮೈಸೂರು ಇತಿಹಾಸದ ಬಗ್ಗೆ ನಿಬ್ಬೆರಗಾಗಿ ಟ್ವೀಟ್ ಮಾಡಿದ್ದರು. [ಲಂಡನ್ ನಲ್ಲಿ ಲಕ್ಕಿ ಸ್ಟಾರ್ ರಮ್ಯಾ ಮಾಡ್ತಿರೋದು ಇದನ್ನಾ?]

  ಇದೀಗ ರಮ್ಯಾ ಮೇಡಂ ಕಡೆಯಿಂದ ಮತ್ತೊಂದು ಸಂದೇಶ ರವಾನೆಯಾಗಿದೆ. ಈ ಬಾರಿ ಅವರು ಮಾತನಾಡುತ್ತಿರುವುದು ಕಾಂಗ್ರೆಸ್ ಯಂಗ್ ಹೀರೋ ರಾಹುಲ್ ಗಾಂಧಿ ಬಗ್ಗೆ! ಲೋಕಸಭೆ ಮತ್ತು ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ಬಳಿಕ ರಾಹುಲ್ ಗಾಂಧಿ ಪತ್ತೆಯಾಗಿಲ್ಲ.

  ಎಲ್ಲೂ ಸುದ್ದಿಯಾಗದ ರಾಹುಲ್ ರನ್ನ ಲಕ್ಕಿ ಸ್ಟಾರ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ! ''ಯಾರನ್ನಾದರೂ ಮಿಸ್ ಮಾಡಿಕೊಳ್ಳುತ್ತಿದ್ದೀವಿ ಅಂದ್ರೆ ಅವರನ್ನ ನಾವು ಪ್ರೀತಿಸುತ್ತಿದ್ದೇವೆ ಅಂತ ಅರ್ಥ'' ಅಂತ್ಹೇಳಿ ರಮ್ಯಾ ಮೇಡಂ ಹೊಸ ವರಸೆ ಶುರು ಮಾಡಿದ್ದಾರೆ. ಹಾಗಾದ್ರೆ, ರಮ್ಯಾ ಬಾಯಿಂದ ಬಂದಿರುವ ನುಡಿಮುತ್ತುಗಳೇನು..? ಮುಂದೆ ಓದಿ......

  ರಾಹುಲ್ ಅಂದ್ರೆ ರಮ್ಯಾಗೆ ಪಂಚಪ್ರಾಣ

  ರಾಹುಲ್ ಅಂದ್ರೆ ರಮ್ಯಾಗೆ ಪಂಚಪ್ರಾಣ

  ಮೊದಲಿನಿಂದಲೂ ರಾಹುಲ್ ಗಾಂಧಿ ಅಂದ್ರೆ ರಮ್ಯಾಗೆ ಅಚ್ಚುಮೆಚ್ಚು. ಯುವ ಜನಾಂಗದ ಬಗ್ಗೆ ರಾಹುಲ್ ತೋರಿಸುವ ಕಳಕಳಿಯನ್ನ ಮನಸಾರೆ ಮೆಚ್ಚಿರುವ ರಮ್ಯಾ, ಯೂತ್ ಕಾಂಗ್ರೆಸ್ ಸೇರಿದ್ದು ರಾಹುಲ್ ಗಾಂಧಿ ಮೇಲಿನ ಅಪಾರ ಅಭಿಮಾನಕ್ಕೆ. ರಾಹುಲ್ ಮಾತಿನಿಂದ ಪ್ರೇರಿತಗೊಂಡು ಲೋಕಸಭೆ ಚುನಾವಣೆಗೂ ಇಳಿದ ರಮ್ಯಾ, ಸೋಲುಂಡರೂ ಕಾಂಗ್ರೆಸ್ ಯುವರಾಜನ ಮೇಲಿನ ಪ್ರೀತಿ-ಅಭಿಮಾನ ಮಾತ್ರ ಕಮ್ಮಿಯಾಗಿಲ್ಲ ಅನ್ನುವುದಕ್ಕೆ ಕೇವಲ ಐದು ಗಂಟೆಗಳ ಹಿಂದೆ ಅಪ್ ಡೇಟ್ ಆಗಿರುವ ಅವರ ಫೇಸ್ ಬುಕ್ ಸ್ಟೇಟಸ್ ಸಾಕ್ಷಿ.

  ರಾಹುಲ್ ಗಾಂಧಿಯನ್ನ ಪ್ರೀತಿ ಮಾಡುತ್ತೇವೆ..! ಅಲ್ವಾ..?

  ರಾಹುಲ್ ಗಾಂಧಿಯನ್ನ ಪ್ರೀತಿ ಮಾಡುತ್ತೇವೆ..! ಅಲ್ವಾ..?

  ''ಭಾರತೀಯರಾಗಿ ನಾವೆಲ್ಲರೂ ರಾಹುಲ್ ಗಾಂಧಿಯನ್ನ ಪ್ರೀತಿ ಮಾಡುತ್ತೇವೆ. ಅಲ್ಲವೇ? ಇದಕ್ಕೆ ಎಲ್ಲೆಲ್ಲೂ #whereisrahul ಅಂತ ಟ್ರೆಂಡಿಂಗ್ ಆಗುತ್ತಿರುವುದು ಸಾಕ್ಷಿ! ರಾಹುಲ್ ಗಾಂಧಿಯನ್ನ ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಯಾರನ್ನಾದರೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂದ್ರೆ, ನಾವು ಅವರನ್ನ ಪ್ರೀತಿಸುತ್ತಿದ್ದೇವೆ ಅಂತರ್ಥ'' ಅಂತ ರಮ್ಯಾ ಸ್ಟೇಟಸ್ ಅಪ್ ಡೇಟ್ ಮಾಡಿದ್ದಾರೆ. [ರಮ್ಯಾ ಬಣ್ಣ ಹಚ್ಚೋಕೆ ಹೇಳಿದ ರಾಹುಲ್ ಗಾಂಧಿ]

  ಪ್ರೀತಿ ಅಂದ್ರೆ ನಂಬಿಕೆ ಮತ್ತು ಕ್ಷಮೆ!

  ಪ್ರೀತಿ ಅಂದ್ರೆ ನಂಬಿಕೆ ಮತ್ತು ಕ್ಷಮೆ!

  ರಾಹುಲ್ ಪರ ದನಿಯೆತ್ತಿರುವ ರಮ್ಯಾ ಪ್ರೀತಿ, ನಂಬಿಕೆ ಮತ್ತು ವಿಶ್ವಾಸದ ಬಗ್ಗೆಯೂ ಕೆಲ ಮಾತುಗಳನ್ನಾಡಿದ್ದಾರೆ. ''ಎಲ್ಲರೂ ಕೂಲ್ ಆಗಿರಬೇಕು ಅಂತ ಬಯಸುವುದು ಸಹಜ. ಆದ್ರೆ, ಇನ್ನೊಬ್ಬರನ್ನ ಹೀಯಾಳಿಸುವುದು ಕೂಲ್ ಅಲ್ಲ. ಪ್ರೀತಿ ಅಂದ್ರೆ ನಂಬಿಕೆ ಮತ್ತು ಕ್ಷಮೆ'' ಅಂತ ರಾಹುಲ್ ಗಾಂಧಿಯನ್ನ ಟೀಕೆ ಮಾಡಿದವರೆಲ್ಲರಿಗೂ ರಮ್ಯಾ ಬೌನ್ಸರ್ ಹಾಕಿದ್ದಾರೆ. [ಹೇಗಿದ್ದ ಲಕ್ಕಿ ಸ್ಟಾರ್ ರಮ್ಯಾ ಈಗ ಹೇಗಾಗಿದ್ದಾರೆ ನೋಡಿ]

  ಬಜೆಟ್ ಅಧಿವೇಶನದಲ್ಲಿ ರಾಹುಲ್ ಮಿಸ್ಸಿಂಗ್

  ಬಜೆಟ್ ಅಧಿವೇಶನದಲ್ಲಿ ರಾಹುಲ್ ಮಿಸ್ಸಿಂಗ್

  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಗ್ಗರಿಸಿ ಬಿದ್ದ ಬಳಿಕ ರಾಹುಲ್ ಎಲ್ಲೂ ಕಾಣಿಸುತ್ತಿಲ್ಲ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ''ರಾಹುಲ್ ಎಲ್ಲಿ'' ಅನ್ನುವ ಪ್ರಶ್ನೆ ಟ್ರೆಂಡಿಂಗ್ ಆಗುತ್ತಿದೆ. ಅಲ್ಲದೇ ಈಗ ನಡೆಯುತ್ತಿರುವ ಬಜೆಟ್ ಅಧಿವೇಶದಲ್ಲೂ ರಾಹುಲ್ ಗೈರು ಹಾಜರಾಗಿರುವ ಬಗ್ಗೆ ಯುವ ಸಮೂಹ ರಾಹುಲ್ ರನ್ನ ಕಿಚಾಯಿಸುತ್ತಿದೆ. ಇದನ್ನೆಲ್ಲಾ ಕಂಡ ರಮ್ಯಾ, ರಾಹುಲ್ ಪರ ಬ್ಯಾಟಿಂಗ್ ಶುರು ಮಾಡಿದ್ದಾರೆ.

  ಫೇಸ್ ಬುಕ್ ನಲ್ಲಿ ಕಾಮೆಂಟ್ ಗಳ ಸುರಿಮಳೆ

  ಫೇಸ್ ಬುಕ್ ನಲ್ಲಿ ಕಾಮೆಂಟ್ ಗಳ ಸುರಿಮಳೆ

  ಸ್ಟೇಟಸ್ ಅಪ್ ಡೇಟ್ ಆದ ನಾಲ್ಕು ಗಂಟೆಗಳಲ್ಲೇ, 553 ಲೈಕ್ ಗಳು, 11 ಶೇರ್ ಗಳು ಮತ್ತು 98 ಕಾಮೆಂಟ್ ಗಳು ಲಭ್ಯವಾಗಿವೆ. ರಮ್ಯಾ ಅಭಿಪ್ರಾಯಕ್ಕೆ ಜೈಕಾರ ಹಾಕುವ ಬದಲು, ಅದಕ್ಕೆ ಧಿಕ್ಕಾರ ಹಾಕಿರುವ ಅಭಿಮಾನಿಗಳೇ ಹೆಚ್ಚು. ರಾಹುಲ್ ಪರ ನಿಂತಿರುವ ರಮ್ಯಾ ಕೂಡ ಭಾರತದಲ್ಲಿಲ್ಲ. ಇಲ್ಲಿದ್ದು ಸಮಾಜಸೇವೆ ಮಾಡಿ ನಂತ್ರ ಕಾಂಗ್ರೆಸ್ ಪರ ಮಾತನಾಡಿದ್ದರೆ, ರಮ್ಯಾ ಮಾತಿಗೂ ಬೆಲೆ ಇರುತ್ತಿತ್ತು ಅನ್ನುವುದು ಅಭಿಮಾನಿಗಳ ಒಕ್ಕೊರಲಿನ ಆಗ್ರಹ. [ಅಭಿಮಾನಿಗಳಿಗೆ ಬಕೆಟ್ ತಣ್ಣೀರೆರಚಿದ ನಟಿ ರಮ್ಯಾ]

  ರಮ್ಯಾ ಎಂದು ಬರುತ್ತಾರೆ ಭಾರತಕ್ಕೆ..?

  ರಮ್ಯಾ ಎಂದು ಬರುತ್ತಾರೆ ಭಾರತಕ್ಕೆ..?

  ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡುವ ರಮ್ಯಾ, ಎಲೆಕ್ಷನ್ ಮುಗಿದ ಮೇಲೆ ಭಾರತದಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ರಾಜ್ಯಶಾಸ್ತ್ರ ವ್ಯಾಸಂಗ ಮಾಡುತ್ತಿರುವ ರಮ್ಯಾ ಮರಳಿ ಭಾರತಕ್ಕೆ ಕಾಲಿಟ್ಟು ಕಾಂಗ್ರೆಸ್ ಪರ ನಿಂತರೆ 'ಯುವರಾಜ'ನಿಗೆ ಮತ್ತಷ್ಟು ಶಕ್ತಿ ಬರ ಬಹುದೇನೋ...ಅದಕ್ಕೆಲ್ಲಾ ರಮ್ಯಾ ಅಭಿಮಾನಿಗಳ ಕೃಪೆ ಸಿಗಬೇಕು. ಮಾತಿಗಿಂತ, ಕೆಲಸದಲ್ಲಿ ರಮ್ಯಾ ಸಕ್ರಿಯರಾಗಬೇಕು. [ಗೌಡರ ಮನೆ ಸೊಸೆಯಾಗುವರೇ ಲಕ್ಕಿ ಸ್ಟಾರ್ ರಮ್ಯಾ?]

  English summary
  Lucky Star Ramya aka Divya Spandana is finally back on Social Networking sites by taking a stand on Congress Leader Rahul Gandhi. Seems like the Actress is quite disappointed with the negative talks about Congress' Youth Icon. And hence defends Rahul Gandhi through her Facebook Account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X