twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಬೇಕೇ ಬೇಡವೇ ಪ್ರಶ್ನೆಗೆ ರಮ್ಯಾ ಉತ್ತರ

    |
    <ul id="pagination-digg"><li class="next"><a href="/news/ramya-kannada-movies-dubbing-remake-talk-065520.html">Next »</a></li></ul>

    ಸ್ಯಾಂಡಲ್ ವುಡ್ ಪ್ರಮುಖ 'ಸ್ಟಾರ್'ಗಳು ಕನ್ನಡ ಚಿತ್ರರಂಗಕ್ಕೆ 'ಡಬ್ಬಿಂಗ್' ಸಹವಾಸ ಬೇಡ ಎಂದು ಸಮರ ಸಾರಿರುವ ಬೆನ್ನಲ್ಲೇ, ಸ್ಯಾಂಡಲ್ ವುಡ್ ಕ್ವೀನ್, ಲಕ್ಕಿ ಸ್ಟಾರ್ ರಮ್ಯಾ ಡಬ್ಬಿಂಗ್ ಬೇಡ ಎನ್ನುವುದರ ಜೊತೆ ರೀಮೇಕ್ ಕೂಡ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಷ್ಟೇ ಅಲ್ಲ, ಮಚ್ಚು. ಲಾಂಗು ಸಂಸ್ಕೃತಿಗೂ ಅಂತ್ಯ ಹಾಡುವಂತೆ ಕರೆ ನೀಡಿದ್ದಾರೆ.

    ರಮ್ಯಾ ತಮಗನಿಸಿದ್ದನ್ನು ನೇರಾನೇರ ಹೇಳುವ ಸ್ವಭಾವ ಹೊಂದಿದವರು. ಆದಾಗ್ಯೂ ಡಬ್ಬಿಂಗ್ ನಂತಹ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿ ಸೂಕ್ಷವಾಗಿಯೇ ಮಾತನಾಡಿದ್ದಾರೆ. ಯಾರೊಬ್ಬರ ಹೆಸರನ್ನೂ ಹೇಳದೇ ಕನ್ನಡ ಚಿತ್ರರಂಗದ ಬೆಳವಣಿಗೆ ಯಾವುದರಿಂದ ಸಾಧ್ಯ, ಯಾವುದರಿಂದ ಅಸಾಧ್ಯ ಎಂಬುದಕ್ಕೆ ತಮ್ಮ ಅನಿಸಿಕೆಯನ್ನು ಹೊರಗೆಡವಿದ್ದಾರೆ.

    ಲಕ್ಕಿ ಸ್ಟಾರ್ ರಮ್ಯಾ ಆರೋಗ್ಯಕರ ಚರ್ಚೆಯೊಂದನ್ನು ಶುರು ಮಾಡಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು. "ಕನ್ನಡಕ್ಕೆ ಡಬ್ಬಿಂಗ್ ಸದ್ಯಕ್ಕೆ ಬೇಡ. ಆದರೆ ಕೇವಲ ಡಬ್ಬಿಂಗ್ ಸಂಸ್ಕೃತಿಯಿಂದ ಮಾತ್ರ ಸಮಸ್ಯೆ ಆಗುವುದಿಲ್ಲ. ನಾವು ನಿದ್ದೆಯಿಂದೇಳುವ ತನಕ ಎಲ್ಲಾ ಸಮಸ್ಯೆಗಲೂ ತಪ್ಪಿದ್ದಲ್ಲ".

    ಡಬ್ಬಿಂಗ್ ಬೇಡ ಎಂದು ಹೇಳುವವರಿಗೆ ನಮ್ಮ ಚಿತ್ರರಂಗದ ಮೇಲೆ ನಂಬಿಕೆಯಿಲ್ಲ. ನನ್ನ ಪ್ರಕಾರ, ನಾವು ಸಾಕಷ್ಟು ಸಮರ್ಥರು. ಸ್ವಮೇಕ್ ಸಿನಿಮಾಗಳನ್ನು ಮಾಡಿ ಗೆಲ್ಲಬಲ್ಲೆವು. ಗೆಲುವುಗಾಗಿ ರೀಮೇಕ್ ಮೊರೆ ಹೋಗುವುದೇ ಮೂರ್ಖತನ. ನಾವು ಮೊದಲು ನಿದ್ದೆಯಿಂದ ಎದ್ದೇಳಬೇಕು ಅಷ್ಟೇ" ಎಂದಿದ್ದಾರೆ.

    "ನಮ್ಮ ಕನ್ನಡ ಚಿತ್ರರಂಗ ಬೆಳೆಯಬೇಕು ಎಂಬ ದೃಷ್ಟಿಯಿಂದ ನಾನು ರಿಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದೆ. ಮೊದಲು ನಾವು ನಮ್ಮತನವನ್ನು ಬೆಂಬಲಿಸಬೇಕು, ಪ್ರೋತ್ಸಾಹಿಸಬೇಕು ಎನ್ನುವುದು ನನ್ನ ಬಯಕೆ. ಅದೇ ನಿಟ್ಟಿನಲ್ಲಿ ನಾನೀಗ ಡಬ್ಬಿಂಗ್ ಕೂಡ ಕನ್ನಡಕ್ಕೆ ಸದ್ಯಕ್ಕೆ ಬೇಡ ಎನ್ನುತ್ತಿದ್ದೇನೆ.

    ನಾವು ಒಳ್ಳೆಯ ಕನ್ನಡ ಸಿನಿಮಾಗಳನ್ನು ಮಾಡಿದರೆ, ಪರಭಾಷೆಯವರೂ ಅದನ್ನು ನೋಡುತ್ತಾರೆ. ಭಾಷೆಗೆ ಯಾವುದೇ ಎಲ್ಲೆಯಿಲ್ಲ. ಉತ್ತಮ ಚಿತ್ರ ಯಾವ ಭಾಷೆಯಲ್ಲಿ ಬಂದರೂ ಜನ ನೋಡುತ್ತಾರೆ, ಸ್ವೀಕರಿಸುತ್ತಾರೆ. ಹೀಗಾಗಿ ಮೊದಲು ಉತ್ತಮ ಗುಣಮಟ್ಟದ ಚಿತ್ರಗಳನ್ನು ಕೊಡುವುದರತ್ತ ಕನ್ನಡ ಚಿತ್ರರಂಗ ಗಮನ ಹರಿಸಬೇಕು. ಮುಂದಿನ ಪುಟ ನೋಡಿ...

    <ul id="pagination-digg"><li class="next"><a href="/news/ramya-kannada-movies-dubbing-remake-talk-065520.html">Next »</a></li></ul>

    English summary
    Lucky Star Ramya spoke about present discussing issue Dubbing. She told, not only dubbing is harmful, the Remake and Bloodshed Movies are also not our Culture. If Kannada Industry understand this, then everything will be correct.&#13; &#13;
    Sunday, May 27, 2012, 17:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X