»   » ಕನ್ನಡದ ಟ್ಯಾಲೆಂಟ್ ಬ್ಯೂಟಿಗಳಿಗೆ ಈಗ ಲಕ್ಕಿ ಟೈಂ

ಕನ್ನಡದ ಟ್ಯಾಲೆಂಟ್ ಬ್ಯೂಟಿಗಳಿಗೆ ಈಗ ಲಕ್ಕಿ ಟೈಂ

By: ಜೀವನರಸಿಕ
Subscribe to Filmibeat Kannada


ಒಂದೊಂದ್ ಸಾರಿ ಸ್ಟಾರ್ ನಟಿಯರನ್ನ ಬಿಟ್ರೆ ಉಳಿದವರಿಗೆ ಅವಕಾಶಗಳೇ ಇಲ್ಲವೇನೋ ಅನ್ನಿಸಿ ಬಿಡುತ್ತೆ. ಟಾಪ್ ನಟಿಯರಿಗೆ ಮಾತ್ರ ಭರ್ಜರಿ ಬೇಡಿಕೆ ಇರುತ್ತೆ. ಅಂತಹಾ ನಟಿಯರಿಗೆ ಮಾತ್ರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸಿಗ್ತವೆ. ಅವರೂ ಕೂಡ ಬಂದ ಅವಕಾಶಗಳನ್ನೆಲ್ಲಾ ಬಾಚಿ ಬಳಸಿಕೊಳ್ತಾರೆ. ಆಗ ಕೆಳಗಿರೋ ನಟಿಯರಿಗೆ ಅವಕಾಶಗಳು ಕಡಿಮೆಯಾಗ್ತವೆ.

ನಂಬರ್ ಒನ್, ಟೂ, ಥ್ರೀನಲ್ಲಿರೋ ಹೀರೋಯಿನ್ ಗಳು ತಮಗೆ ಸೂಟಾಗೋ ಕಥೆಗಳನ್ನ ಬಳಸಿಕೊಂಡು ಉಳಿದದ್ದನ್ನ ರಿಜೆಕ್ಟ್ ಮಾಡಿದ್ರೆ ಆ ಪ್ಲೇಸ್ ಗೆ ಸೂಟಾಗೋ ಬ್ಯೂಟಿಗಳನ್ನ ನಿರ್ಮಾಪಕರು, ನಿರ್ದೇಶಕರು ಹುಡುಕ್ತಾರೆ. ಆಗ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕುತ್ತೆ.

ಹಾಗೆ ನೋಡಿದ್ರೆ 2013ರ ವರ್ಷ ಸ್ಯಾಂಡಲ್ ವುಡ್ ನಲ್ಲಿ ಟ್ಯಾಲೆಂಡ್ ಬ್ಯೂಟಿಗಳಿಗೆ ಲಕ್ಕಿ ಟೈಂ. ಒಬ್ಬೊಬ್ಬರೇ ಹೊಸ ಪ್ರತಿಭೆಗಳು ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳ ಅವಕಾಶ ಗಿಟ್ಟಿಸ್ತಿದ್ದಾರೆ. ಅಂತಹಾ ಹೀರೋಯಿನ್ ಗಳನ್ನ ಸ್ಲೈಡ್ ನಲ್ಲಿ ನೋಡೋಣ ಬನ್ನಿ.

ಸುಕೃತಾ ವಾಗ್ಲೆ ಸುಕ್ರುತ ಸಮಯ

'ಲೌ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸುಕೃತಾ ವಾಗ್ಲೆ ಅನ್ನೋ ಚೆಲುವೆಗೆ ಸರಿಯಾದ ಟೈಂ ಬಂದಿರಲಿಲ್ಲ. ಅದರ ನಂತರ ಬಂದ ಎರನೇ ಸಿನಿಮಾ 'ಜಟ್ಟ'ದಲ್ಲಿ ಸುಕೃತಾ ಅಭಿನಯಕ್ಕೆ ಸ್ಯಾಂಡಲ್ವುಡ್ ನಿರ್ಮಾಪಕರು ಬೆಚ್ಚಿಬಿದ್ರು. ಈಗ ಸುಕೃತಾಗೆ ಭರ್ಜರಿ ಬೇಡಿಕೆ. ಹಲವು ಆಫರ್ ಗಲು ಬಂದ್ರೂ ಸದ್ಯ 'ಫ್ಲಾಪ್' ಅನ್ನೋ ಸಿನಿಮಾದಲ್ಲಿ ನಟಿಸ್ತಿದ್ದಾರೆ.

ದೀಪಿಕಾ ದಾಸ್ ಫುಲ್ ಬ್ಯುಸಿ

ಎರಡು ವರ್ಷದ ಹಿಂದೆ ಹೆಸರೇ ಕೇಳಿರದ ದೀಪಿಕಾ ದಾಸ್ ಈ ವರ್ಷ ಮೂರ್ನಾಲ್ಕು ಸಿನಿಮಾಗಳಲ್ಲಿ ಬಿಜಿ. ಇತ್ತೀಚೆಗೆ ಮುಹೂರ್ತ ಮಾಡಿಕೊಂಡ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್, ಈಗಾಗ್ಲೇ ಶೂಟಿಂಗ್ ಮುಗಿಸಿರೋ ದೂಧ್ ಸಾಗರ್, ರಂಗನ್ ಲವ್ ಸ್ಟೋರೀಲಿ ಒಂದು ಮುಖ್ಯಪಾತ್ರದ ಜೊತೆಗೆ ಹಲವು ಸಿನಿಮಾಗಳಲ್ಲಿ ಬಿಜಿ.

ಪವರ್ಫುಲ್ ನಟಿಯಾಗುವತ್ತ ಪಾವನಾ ಗೌಡ

'ಗೊಂಬೆಗಳ ಲವ್' ಸಿನಿಮಾ ಮೂಲಕ ಕಳೆದ ವರ್ಷ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಪಾವನಾ ಈ ವರ್ಷ ಸಖತ್ ಚೂಸಿಯಾಗಿದ್ದಾರೆ. ಎರಡನೇ ಸಿನಿಮಾಗೇನೇ ಸ್ಟಾರ್ ಒಬ್ಬರ ಜೊತೆ ನಟಿಸೋ ಅವಕಾಶ ಗಿಟ್ಟಿಸಿದ್ದಾರೆ. ದುನಿಯಾ ವಿಜಿ ಜೊತೆ ಪಾವನಾ ಅಭಿನಯಿಸ್ತಾ ಇರೋ 'ಜಾಕ್ಸನ್' ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆದಿದೆ.

ಡಾನ್ಸರ್ ಶ್ರುತಿಗೆ ಶುಭ ಸಮಯ

ಇಮ್ರಾನ್ ಸರ್ದಾರಿಯಾ ಟ್ರೂಪ್ ನಲ್ಲಿ ಡಾನ್ಸರ್ ಆಗಿದ್ದ ಶ್ರುತಿ ಈಗ ಡೈಮಂಡ್ ಸ್ಟಾರ್ ಕಿಟ್ಟಿ ಜೊತೆ ನಟಿಸೋ ಅವಕಾಶ ಪಡೆದಿದ್ದಾರೆ. ಇನ್ನು ಹಲವು ಸಿನಿಮಾಗಳು ಈ ವರ್ಷ ಶ್ರುತಿ ಲಿಸ್ಟ್ ನಲ್ಲಿವೆ.

ಕನಸನ್ನ ನನಸಾಗಿಸುವತ್ತ ನೇಹಾ ಪಾಟೀಲ್

ಕಳೆದ ವರ್ಷ ಒಂದೇ ಸಿನಿಮಾದಲ್ಲಿ ನಟಿಸಿ ಗೆಲ್ಲದೆ ಸಪ್ಪೆ ಮೋರೆ ಹಾಕಿಕೊಂಡಿದ್ದ ನೇಹಾ ಪಾಟೀಲ್ ಈ ವರ್ಷ ಐದಾರು ಸಿನಿಮಾಗಳಲ್ಲಿ ಬಿಜಿ. ಪಾರು ವೈಫ್ ಆಫ್ ದೇವದಾಸ್, ಶಂಬೋ ಮಹಾದೇವ, ಅಯ್ಯ-2 ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಿಜಿ.

ಪ್ರತಿಭೆ ಪ್ಲಸ್ ಬ್ಯೂಟಿ ಈಕ್ವಲ್ಸ್ ಟು ಅದಿತಿರಾವ್

ಅದಿತಿರಾವ್ ಅನ್ನೋ ಚೆಂದುಳ್ಳಿ ಚೆಲುವೆಯ ಒಂದೂ ಸಿನಿಮಾಗಳು ಸದ್ಯ ರಿಲೀಸಾಗಿಲ್ಲ. 'ಡವ್' ಸಿನಿಮಾಗೆ ಬಂದ ಈ ಚೆಲುವೆ ತನ್ನ ಪ್ರತಿಭೆ ಮತ್ತು ಬ್ಯೂಟಿಯಿಂದ ಸ್ಯಾಂಡಲ್ ವುಡ್ ನಲ್ಲಿ 2014 ಮೂರ್ನಾಲ್ಕು ಸಿನಿಮಾಗಳಲ್ಲಿ ತೆರೆಗೆ ಬರ್ತಿದ್ದಾಳೆ. ಅವುಗಳಲ್ಲಿ 'ಹುಚ್ಚುಡುಗ್ರು' ಚಿತ್ರವೂ ಒಂದು.

English summary
Kannada film industry opens door for talented beauties. Sandalwood beauties like Sukrutha Wagle, Aditi Rao, Pawana Gowda, Neha Patil, Deepika Das are getting more offers in Kannada film industry and became busy as bee.
Please Wait while comments are loading...