ನಟ ಜಗ್ಗೇಶ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾದ ಕವಿರಾಜ್
Recommended Video

ಗೀತರಚನೆಕಾರ ಕವಿರಾಜ್ ಸಾವಿರಾರು ಹಿಟ್ ಹಾಡುಗಳನ್ನು ಬರೆದಿದ್ದಾರೆ. ಅದಕ್ಕೂ ಒಂದು ಹೆಚ್ಚು ಮುಂದೆ ಹೋಗಿ ಈ ಹಿಂದೆಯೇ ಸಿನಿಮಾವನ್ನು ನಿರ್ದೇಶನ ಸಹ ಮಾಡಿದ್ದರು. ತೂಗುದೀಪ ಪ್ರೊಡಕ್ಷನ್ಸ್ ನಲ್ಲಿ ಬಂದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರವನ್ನು ಕವಿರಾಜ್ ನಿರ್ದೇಶನ ಮಾಡಿದ್ದರು. ಆದರೆ ಈ ಸಿನಿಮಾದ ನಂತರ ಮತ್ತೆ ಕವಿಗಳು ಡೈರೆಕ್ಟರ್ ಪಟ್ಟವನ್ನು ಅಲಂಕರಿಸಿದ್ದಾರೆ.
ಕವಿರಾಜ್ ಈ ಬಾರಿ ನವರಸ ನಾಯಕ ಜಗ್ಗೇಶ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ವಿಶೇಷ ಅಂದರೆ ಕವಿರಾಜ್ ಅವರ ಹೊಸ ಸಿನಿಮಾದಲ್ಲಿ ಜಗ್ಗೇಶ್ ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. '8MM' ಸಿನಿಮಾದಲ್ಲಿಯೂ ಜಗ್ಗೇಶ್ ಗನ್ ಹಿಡಿದಿದ್ದು, ಕವಿರಾಜ್ ಚಿತ್ರದಲ್ಲಿಯೂ ಅದು ಮುಂದುವರೆಯಲಿದೆ. ಈ ಮೂಲಕ ಮತ್ತೊಂದು ಖಡಕ್ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಕವಿರಾಜ್ ಅವರ ಸಿನಿಮಾದ ಕಥೆ ಮತ್ತು ಪಾತ್ರ ಜಗ್ಗೇಶ್ ಅವರಿಗೆ ತುಂಬ ಇಷ್ಟ ಆಗಿದ್ದು, ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ.

ಅಂದಹಾಗೆ, ಕವಿರಾಜ್ ಮತ್ತು ಜಗ್ಗೇಶ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಸಿನಿಮಾಗೆ ಗುರುಕಿರಣ್ ಸಂಗೀತ ನೀಡಲಿದ್ದಾರೆ. ಗುರುಕಿರಣ್ ಸಂಗೀತದ 'ಕರಿಯ' ಚಿತ್ರದ ಮೂಲಕ ಕವಿರಾಜ್ ಸಿನಿಮಾ ಕೆರಿಯರ್ ಶುರು ಆಗಿದ್ದು, ಈಗ ಕವಿರಾಜ್ ನಿರ್ದೇಶಕದ ಚಿತ್ರಕ್ಕೆ ಗುರು ಸಂಗೀತ ನೀಡುತ್ತಿದ್ದಾರೆ. ಏಪ್ರಿಲ್ ನಿಂದ ಈ ಹೊಸ ಸಿನಿಮಾ ಶುರು ಆಗಲಿದೆ. ಕೃಷ್ಣ ಕುಮಾರ್ ಚಿತ್ರಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ.


Click it and Unblock the Notifications











