Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರಶ್ಮಿಕಾ ಹೇಳಿಕೆ ಎಸ್‌ಪಿಬಿ, ಎಸ್ ಜಾನಕಿ, ಹಂಸಲೇಖರಿಗೆ ಅವಮಾನ ಮಾಡಿದಂತೆ" - ಡಾ. ವಿ. ನಾಗೇಂದ್ರ ಪ್ರಸಾದ್!
ರಶ್ಮಿಕಾ ಮಂದಣ್ಣ ವಿವಾದದಲ್ಲಿ ಸಿಕ್ಕಿಕೊಳ್ಳೋದು ಹೊಸತೇನೂ ಅಲ್ಲ. ಏನಾದರೂ ಒಂದು ಹೇಳಿಕೆ ಕೊಟ್ಟು ಪೇಚಿಗೆ ಸಿಲುಕುತ್ತಾರೆ. ಈಗ ನ್ಯಾಷನಲ್ ಕ್ರಶ್ ಕೊಟ್ಟ ಹೇಳಿಕೆಯೊಂದು ದಕ್ಷಿಣ ಭಾರತದ ಸಿನಿಮಾ ಮಂದಿಯ ಕೋಪಕ್ಕೆ ಕಾರಣವಾಗಿದೆ.
ರಶ್ಮಿಕಾ ಮಂದಣ್ಣ ತನ್ನ ಬಾಲಿವುಡ್ ಸಿನಿಮಾ 'ಮಿಷನ್ ಮಜ್ನು' ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆ ಕೊಟ್ಟ ಹೇಳಿಕೆ ಹಲವರ ನಿದ್ದೆ ಕೆಡಿಸಿದೆ. ಈ ಕಾರ್ಯಕ್ರಮದಲ್ಲಿ "ಬಾಲಿವುಡ್ ಸಿನಿಮಾ ಹಾಡು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತವೆ. ಅದೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾಸ್ ಹಾಗೂ ಐಟಂ ಸಾಂಗ್‌ಗಳೇ ಹೆಚ್ಚಿರುತ್ತೆ." ಎಂದು ಕೇಳಿದ್ದರು.
'ದಕ್ಷಿಣಕ್ಕಿಂತ
ಬಾಲಿವುಡ್
ಹಾಡುಗಳು
ರೊಮ್ಯಾಂಟಿಕ್'
ಎಂದ
ರಶ್ಮಿಕಾ
ಫುಲ್
ಟ್ರೋಲ್!
ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆ ಬಗ್ಗೆ ಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಫಸ್ಟ್ ನ್ಯೂಸ್ ಜೊತೆ ಮಾತಾಡಿದ ನಾಗೇಂದ್ರ ಪ್ರಸಾದ್, ರಶ್ಮಿಕಾ ಮಂದಣ್ಣ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಡಿ. ಅವರ ಮಾತುಗಳಿಗೆ ಮಾನ್ಯತೆ ಕೊಟ್ಟರೆ ಸುಮ್ಮನೆ ದೊಡ್ಡವರಾಗುತ್ತಾರೆ. ಎಂದು ಹೇಳಿದ್ದಾರೆ.

'ರಶ್ಮಿಕಾ ಅವರದ್ದು ಚಿಕ್ಕ ಪ್ರಪಂಚ'
ರಶ್ಮಿಕಾ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ವಿ.ನಾಗೇಂದ್ರ ಪ್ರಸಾದ್ ರಶ್ಮಿಕಾ ಪ್ರಪಂಚ ಚಿಕ್ಕದು ಗಂಭೀರವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದಾರೆ. " ರಶ್ಮಿಕಾ ಮಂದಣ್ಣ ಅವರ ಮಾತುಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಆ ಹುಡುಗಿಗೆ ಪಾಪ ಚಿತ್ರಗೀತೆಯ ಬಗ್ಗೆ ಏನು ಗೊತ್ತು? ಅವರು ಕಾಲೇಜಿನಿಂದ ಸಿನಿಮಾಗೆ ಬಂದಿದ್ದು. ಅವರದ್ದೊಂದು ಚಿಕ್ಕ ಪ್ರಪಂಚ. ಅಷ್ಟರೊಳಗೆ ಮಾತ್ರ ಯೋಚನೆ ಮಾಡಿರುತ್ತಾರೆ. ಅವರ ಹೇಳಿಕೆಗಳಿಗೆ ಮಾನ್ಯತೆ ಕೊಟ್ಟರೆ, ಅವರನ್ನು ಸುಮ್ಮನೆ ದೊಡ್ಡವರು ಮಾಡಿದ ಹಾಗೆ ಆಗುತ್ತೆ" ಎಂದು ಡಾ. ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

'ಇದನ್ನೆಲ್ಲಾ ದೃಷ್ಟಿ ಬಟ್ಟು ಅಂದ್ಕೊಳ್ಳಬೇಕು'
"ಕನ್ನಡ ಚಿತ್ರರಂಗಕ್ಕೆ 85 ವರ್ಷಗಳ ಇತಿಹಾಸವಿದೆ. ದಕ್ಷಿಣ ಭಾರತಕ್ಕೆ 100 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಅದೆಲ್ಲ ಅವರಿಗೆ ಏನು ಗೊತ್ತು. ಅತೀ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುವುದು ದಕ್ಷಿಣ ಭಾರತದಲ್ಲಿಯೇ. ಕನ್ನಡ, ತೆಲುಗು. ತಮಿಳು ನಾವುಗಳೇ ಹೆಚ್ಚು ತಯಾರಕರು. ಇನ್ನು ಹಿಂದಿ ಚಿತ್ರಗಳ ಪರಂಪರೆಯಲ್ಲಿ ಹಿಂದಿ ಮಾರುಕಟ್ಟೆಯಾಗಿರೋದ್ರಿಂದ ಬಹಳ ಹಿಂದೆನೇ ಇಡೀ ದೇಶಕ್ಕೆ ವಿಸ್ತಾರ ಮಾಡಿಕೊಂಡಿರೋದ್ರಿಂದ ಹಾಗೆಲ್ಲ ಅನ್ನಿಸಬಹುದು. ಇಡೀ ಭಾರತದವರು ಈಗ ಕನ್ನಡದ ಕಡೆ ತಿರುಗಿ ನೋಡುತ್ತಿದ್ದಾರಲ್ಲ. ಈ ಸಂದರ್ಭದಲ್ಲಿ ಇದನ್ನೆಲ್ಲಾ ದೃಷ್ಟಿ ಬಟ್ಟು ಅಂದ್ಕೊಂಡು ಸುಮ್ನೆ ನೋಡ್ಕೊಂಡು ಮುಂದಕ್ಕೆ ಹೋಗಬೇಕಿದೆ."

'ಸಾವಿರಾರು ರೊಮ್ಯಾಂಟಿಕ್ ಹಾಡುಗಳಿವೆ'
" ಕನ್ನಡದ ರೊಮ್ಯಾಂಟಿಕ್ ಹಾಡುಗಳೇ ಅವರ ತಂದೆತಾಯಿಯ ಬದುಕಿನ ಭಾಗಗಳು ಆಗಿರುತ್ತವೆ. ಹಾಗಾಗಿ ಇದಕ್ಕೇನು ಮಹತ್ವ ಕೊಡುವ ಅಗತ್ಯವೇನೂ ಇಲ್ಲ. ಯಾರು ಏನೇ ಮಾತಾಡಿದರೂ, ಕನ್ನಡ ಚಿತ್ರಗೀತೆಗಳಿಗೆ ಅದರದ್ದೇ ಆದ ದೊಡ್ಡ ಪರಂಪರೆಯಿದೆ. ನೂರಾರು ಸಂಗೀತಗಾರರು ಕೆಲಸ ಮಾಡಿದ್ದಾರೆ. ಸಾವಿರಾರು ಗೀತೆಗಳು ಇವೆ."

'ಎಸ್‌ಪಿಬಿ, ಜಾನಕಿ, ಹಂಸಲೇಖಗೆ ಮಾಡೋ ಅವಮಾನ'
"ಇಂತಹ ಹೇಳಿಕೆಗಳನ್ನು ನೀಡುವುದರಿಂದ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂಗೆ ಅವಮಾನ ಮಾಡಿದಂತೆ. ಎಸ್ ಜಾನಕಿಯವರಿಗೆ ಅವಮಾನ ಮಾಡಿದ ಹಾಗೆ. ಇಳೆಯರಾಜ, ಉದಯ್ ಶಂಕರ್, ಹಂಸಲೇಖ ಸೇರಿದಂತೆ ಎಲ್ಲಾ ಸಂಗೀತದ ಹಿರಿಯರಿಗೂ ಅವಮಾನ ಮಾಡಿದಂತೆ. ಇದಕ್ಕಾಗಿ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ." ಎಂದು ಡಾ. ವಿ ನಾಗೇಂದ್ರ ಪ್ರಸಾದ್ ಆಕ್ರೋಶ ಹೊರ ಹಾಕಿದ್ದಾರೆ.