twitter
    For Quick Alerts
    ALLOW NOTIFICATIONS  
    For Daily Alerts

    ಸೆನ್ಸಾರ್ ಮಂಡಳಿಗೆ ಹೊಸ ಬಾಸ್ ನಾಗೇಂದ್ರ ಸ್ವಾಮಿ

    By Rajendra
    |

    ಕರ್ನಾಟಕ ಪ್ರಾದೇಶಿಕ ಚಲನಚಿತ್ರ ಸೆನ್ಸಾರ್ ಮಂಡಳಿಗೆ ಹೊಸ ಬಾಸ್ ಬಂದಿದ್ದಾರೆ. ಇಷ್ಟು ದಿನ ಖಡಕ್ ಆಫೀಸರ್ ಎಂದೇ ಹೆಸರಾಗಿದ್ದ ನಾಗರಾಜ್ ಅವರ ಸ್ಥಾನಕ್ಕೆ ಹೊಸದಾಗಿ ಎಂ ನಾಗೇಂದ್ರ ಸ್ವಾಮಿ (54) ಅವರನ್ನು ಅಧ್ಯಕ್ಷ ಹುದ್ದೆಗೆ ಸರ್ಕಾರ ನೇಮಕ ಮಾಡಿದೆ. ಎಂ.ನಾಗೇಂದ್ರಸ್ವಾಮಿ ಅವರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ಈಗಿನ ಅಧ್ಯಕ್ಷರಾಗಿರುವ ನಾಗರಾಜ್ ಅವರು ನಾಲ್ಕು ವರ್ಷಗಳ ಅವಧಿಯನ್ನು ಪೂರೈಸಿದ್ದು ದೆಹಲಿಗೆ ವರ್ಗಾವಣೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವಾಗಿರುವ ಅವರ ಸ್ಥಾನಕ್ಕೆ ನಾಗೇಂದ್ರ ಸ್ವಾಮಿ ನೇಮಕವಾಗಿದ್ದಾರೆ. ನಾಗೇಂದ್ರ ಸ್ವಾಮಿ ಅವರಿಗೆ ಇದು ಹೆಚ್ಚುವರಿ ಜವಾಬ್ದಾರಿ. ಈ ಹಿಂದೆ ಇವರು ಮುಂಬೈ, ಕರ್ನಾಟಕ ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

    karnataka regional censor board
    ಸರ್ಕಾರದ ಮುಂದಿನ ಆದೇಶ ಬರುವ ತನಕ ಅವರು ಈ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಇದೇ ಗುರುವಾರ (ಜನವರಿ 9) ನಾಗೇಂದ್ರ ಸ್ವಾಮಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಐಎಎಸ್ ಅಧಿಕಾರಿಯಾದ ಇವರು ಹದಿನೆಂಟು ವರ್ಷಗಳಿಂದ ಕೇಂದ್ರ ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

    ನಾಗೇಂದ್ರ ಸ್ವಾಮಿ ಅವರ ಮುಂದೆ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಮೊದಲು ಬರುತ್ತಿರುವ ಚಿತ್ರವೇ ಬಿಗ್ ಬಜೆಟ್ ನ ಬಹುನಿರೀಕ್ಷಿತ ಚಿತ್ರ 'ನಿನ್ನಿಂದಲೇ'. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಈ ಚಿತ್ರ ಶೀಘ್ರದಲ್ಲೇ ಸೆನ್ಸಾರ್ ಗೆ ರೆಡಿಯಾಗಲಿದೆ.

    ಸೆನ್ಸಾರ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಎಲ್ಲಿ ತಡವಾಗುತ್ತದೋ ಎಂಬ ಆತಂಕ ನಿರ್ಮಾಪಕರಲ್ಲಿ ಮನೆಮಾಡಿತ್ತು. ಉಗ್ರಂ, ಕ್ವಾಟ್ಲೆ ಚಿತ್ರಗಳು ಸೆನ್ಸಾರ್ ಗಾಗಿ ಕಾಯುತ್ತಿವೆ. ಈಗ ನಾಗೇಂದ್ರ ಸ್ವಾಮಿ ಬಂದಿರುವುದು ಎಲ್ಲರ ಆತಂಕವೂ ನಿವಾರಣೆಯಾಗಿದೆ. (ಏಜೆನ್ಸೀಸ್)

    English summary
    M Nagendra Swamy will be taking charge 9th Jan 2014 as the new Regional officer, Central Board of Film Certification, Bangalore in addition to his present charge. Aged 54 years Nagendra Swamy is a central government officer under the ministry of information and Broadcasting.
    Thursday, January 9, 2014, 12:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X