»   » 'ಮಾಸ್ತಿ ಗುಡಿ' ತಂಡದ ಮೇಲೆ ಹೇರಿದ್ದ ನಿರ್ಬಂಧ ವಾಪಸ್ ಪಡೆದ ಕೆ.ಎಫ್.ಸಿ.ಸಿ

'ಮಾಸ್ತಿ ಗುಡಿ' ತಂಡದ ಮೇಲೆ ಹೇರಿದ್ದ ನಿರ್ಬಂಧ ವಾಪಸ್ ಪಡೆದ ಕೆ.ಎಫ್.ಸಿ.ಸಿ

Posted By:
Subscribe to Filmibeat Kannada

ನವೆಂಬರ್ 7, 2016 ರಂದು ರೋಚಕ ಸಾಹಸ ದೃಶ್ಯವನ್ನು ಚಿತ್ರೀಕರಿಸಲು ಹೋಗಿ, ಅನಿಲ್ ಮತ್ತು ಉದಯ್ ಎಂಬ ಉದಯೋನ್ಮುಖ ಖಳನಟರು ದುರಂತ ಸಾವಿಗೀಡಾದ ದುರ್ಘಟನೆಗೆ ಸಂಬಂಧಪಟ್ಟಂತೆ, 'ಮಾಸ್ತಿ ಗುಡಿ' ಚಿತ್ರತಂಡದ ಮೇಲೆ ಹೇರಿದ್ದ ನಿರ್ಬಂಧವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಾಪಸ್ ಪಡೆದಿದೆ.

ಈ ಕುರಿತು ನಿನ್ನೆ (ಡಿಸೆಂಬರ್ 30) ಪತ್ರಿಕಾಗೋಷ್ಠಿ ನಡೆಸಿದ ಕೆ.ಎಫ್.ಸಿ.ಸಿ ಅಧ್ಯಕ್ಷ ಸಾ.ರಾ.ಗೋವಿಂದು ''ಮೃತ ನಟರಾದ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ಪರಿಹಾರ ನೀಡುವುದು ಸೇರಿದಂತೆ ಕೆಲ ಷರತ್ತುಗಳಿಗೆ 'ಮಾಸ್ತಿ ಗುಡಿ' ಚಿತ್ರತಂಡ ಒಪ್ಪಿಗೆ ನೀಡಿದೆ. ಹೀಗಾಗಿ ನಿರ್ದೇಶಕ ನಾಗಶೇಖರ್, ನಟ ದುನಿಯಾ ವಿಜಯ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಅವರ ಮೇಲೆ ಹೇರಿದ್ದ ನಿರ್ಬಂಧವನ್ನು ವಾಪಸ್ ಪಡೆಯಲಾಗಿದೆ'' ಎಂದರು.[ದುನಿಯಾ ವಿಜಯ್, ನಾಗಶೇಖರ್, ರವಿವರ್ಮಗೆ ತಾತ್ಕಾಲಿಕ ನಿಷೇಧ]


'Maasti Gudi' Tragedy: KFCC lifts temporary ban

''ಇದು ಆಕಸ್ಮಿಕವಾಗಿ ನಡೆದ ಘಟನೆ. ಇದಕ್ಕಾಗಿ ಎಲ್ಲರ ಕ್ಷಮೆ ಕೋರುತ್ತೇವೆ'' ಎಂದು ನಟ ದುನಿಯಾ ವಿಜಯ್, ಸಾಹಸ ನಿರ್ದೇಶಕ ರವಿವರ್ಮ, ನಿರ್ದೇಶಕ ನಾಗಶೇಖರ್ ಹೇಳಿದರು.


ಅಲ್ಲಿಗೆ, ಇನ್ಮುಂದೆ ತಮ್ಮ ತಮ್ಮ ಕೆಲಸಗಳಲ್ಲಿ ದುನಿಯಾ ವಿಜಯ್, ನಾಗಶೇಖರ್ ಮತ್ತು ರವಿವರ್ಮ ಭಾಗಿಯಾಗಬಹುದು. ಸದ್ಯ ದುನಿಯಾ ವಿಜಯ್ ಕೈಯಲ್ಲಿ 'ಕನಕ' ಸಿನಿಮಾ ಇದೆ.['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]


'Maasti Gudi' Tragedy: KFCC lifts temporary ban

'ಮಾಸ್ತಿ ಗುಡಿ' ದುರಂತ ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸಬಾರದು ಎಂಬ ಕಾರಣಕ್ಕೆ ನಿರ್ದೇಶಕ ನಾಗಶೇಖರ್, ನಟ ದುನಿಯಾ ವಿಜಯ್, ಸಾಹಸ ನಿರ್ದೇಶಕ ರವಿವರ್ಮ ಮೇಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಾತ್ಕಾಲಿಕ ನಿಷೇಧ ಹೇರಿತ್ತು.

English summary
Karnataka Film Chamber of Commerce(KFCC) has lifted temporary ban on 'Maasti Gudi' team which includes Actor Duniya Vijay, Stunt Master Ravi Varma, Director Nagashekar as they agreed to all clauses proposed by KFCC.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada