»   » ಕಡೆಗೂ ಪೊಲೀಸರ ಮುಂದೆ ಶರಣಾದ ನಾಗಶೇಖರ್, ರವಿವರ್ಮ.!

ಕಡೆಗೂ ಪೊಲೀಸರ ಮುಂದೆ ಶರಣಾದ ನಾಗಶೇಖರ್, ರವಿವರ್ಮ.!

Posted By:
Subscribe to Filmibeat Kannada

ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ 'ಮಾಸ್ತಿ ಗುಡಿ' ಚಿತ್ರದ ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮ ಇಂದು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾದರು.

'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟರ್ ನಾಗಶೇಖರ್, ಸ್ಟಂಟ್ ಡೈರೆಕ್ಟರ್ ರವಿವರ್ಮ ಹಾಗೂ ಸಹ ನಿರ್ದೇಶಕ ಸಿದ್ದು ಮಾಗಡಿ ಪೊಲೀಸರ ಮುಂದೆ ಸರೆಂಡರ್ ಆದರು.


ಶರಣಾದ ನಾಗಶೇಖರ್, ರವಿವರ್ಮ.!

'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ದುರಂತ ಸಂಭವಿಸಿದ ಬಳಿಕ ನಾಪತ್ತೆ ಆಗಿದ್ದ ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮ ಮತ್ತು ಸಹ ನಿರ್ದೇಶಕ ಸಿದ್ದು ಇಂದು ಮಧ್ಯಾಹ್ನ 12.30ರ ಸುಮಾರಿಗೆ ಮಾಗಡಿ ಪೊಲೀಸ್ ಠಾಣೆ ಪೊಲೀಸರಿಗೆ ಶರಣಾದರು. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]


ರವಿವರ್ಮ ವಿಚಾರಣೆ ನಡೆಯುತ್ತಿದೆ.!

ಸರೆಂಡರ್ ಆಗುತ್ತಿದ್ದ ಹಾಗೆ, ಸಾಹಸ ನಿರ್ದೇಶಕ ರವಿವರ್ಮ ರವರನ್ನ ಮಾಗಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. [ಸ್ಟಂಟ್ ಮಾಸ್ಟರ್ ರವಿವರ್ಮನ ಇನ್ನೊಂದು ಸ್ಟಂಟ್ ಬಹಿರಂಗ.!]


ಎಲ್ಲರಿಗೂ ಪ್ರತ್ಯೇಕ ವಿಚಾರಣೆ

ರವಿವರ್ಮ ರವರ ವಿಚಾರಣೆ ನಡೆದ ಬಳಿಕ ನಾಗಶೇಖರ್ ರವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎನ್ನಲಾಗಿದೆ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]


ನಟ ದುನಿಯಾ ವಿಜಯ್ ಕಥೆ ಏನು.?

ಇದೇ ವೇಳೆ ನಟ ದುನಿಯಾ ವಿಜಯ್ ರವರನ್ನೂ ಮಾಗಡಿ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಕೂಡ ಇದೆ. ['ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]


ದುನಿಯಾ ವಿಜಯ್ ಕರ್ಕೊಂಡು ಬಂದರಂತೆ.!

'ಮಾಸ್ತಿ ಗುಡಿ' ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮ ಇಂದು ಬೆಳಗ್ಗೆ ನಟ ದುನಿಯಾ ವಿಜಯ್ ರವರ ಮನೆಗೆ ಹೋಗಿದ್ದರಂತೆ. ಅಲ್ಲಿಂದ, ಇಬ್ಬರನ್ನು ದುನಿಯಾ ವಿಜಯ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.


ನಟ ದುನಿಯಾ ವಿಜಯ್ ಏನಂದರು.?

''ಬೆಳಗ್ಗೆ ನನ್ನ ಮನೆಗೆ ರವಿವರ್ಮ, ನಾಗಶೇಖರ್ ಬಂದಿದ್ದರು. ಸದ್ಯಕ್ಕೆ ರವಿವರ್ಮ ವಿಚಾರಣೆ ನಡೆಯುತ್ತಿದೆ. ಎಲ್ಲರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡುತ್ತಾರೆ'' ಅಂತ ಮಾಧ್ಯಮಗಳ ಮುಂದೆ ನಟ ದುನಿಯಾ ವಿಜಯ್ ಹೇಳಿಕೆ ನೀಡಿದ್ದಾರೆ.


ಎಲ್ಲರ ಮೇಲೂ ಕೇಸ್ ದಾಖಲಾಗಿದೆ.!

'ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಲಮಂಡಳಿ ಅಧಿಕಾರಿಗಳು ನೀಡಿರುವ ದೂರಿನ ಅನ್ವಯ ನಿರ್ಮಾಪಕ ಸುಂದರ್ ಗೌಡ ಅವರನ್ನು ಎ-1 ಆರೋಪಿಯಾಗಿ, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ.


ಎ-1 ಆರೋಪಿ ಅರೆಸ್ಟ್ ಆಗಿದೆ.!

ಈಗಾಗಲೇ ಪ್ರಕರಣದ ಎ-1 ಆರೋಪಿ ನಿರ್ಮಾಪಕ ಸುಂದರ್.ಪಿ.ಗೌಡ ರವರ ಬಂಧನವಾಗಿದೆ. [ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!]


ಜಾಮೀನು ರಹಿತ ಪ್ರಕರಣ

ಅನಿಲ್ ಮತ್ತು ರಾಘವ್ ಉದಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 'ಮಾಸ್ತಿ ಗುಡಿ' ಚಿತ್ರ ತಂಡದ ಐವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 304(A) ಹಾಗೂ 308 ಅನ್ವಯ ಕೇಸ್ ಫೈಲ್ ಆಗಿದೆ.


ದುರ್ಘಟನೆ ಹಿನ್ನಲೆ

ನವೆಂಬರ್ 7 ರಂದು ಮಧ್ಯಾಹ್ನ ರಾಮನಗರ ಜಿಲ್ಲೆ ತಾವೆರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಹೆಲಿಕಾಪ್ಟರ್ ​ನಿಂದ ನೀರಿಗೆ ಹಾರಿ ನಾಯಕನಿಂದ (ದುನಿಯಾ ವಿಜಯ್) ತಪ್ಪಿಸಿಕೊಳ್ಳುವ ಲೈವ್ ಸ್ಟಂಟ್ ನಲ್ಲಿ ಅನಿಲ್ ಮತ್ತು ಉದಯ್ ನೀರುಪಾಲಾಗಿದ್ದರು.


English summary
Director Nagashekar, Assistant Director Siddu and Stunt Director Ravi Varma surrendered in Magadi Police Station today (Nov 12th). The FIR was filed against 5 of 'Maasti Gudi' team members after T G Halli reservoir dam's director filed a formal complaint with the local police.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada