»   » ದುನಿಯಾ ವಿಜಯ್, ನಾಗಶೇಖರ್, ರವಿವರ್ಮಗೆ ತಾತ್ಕಾಲಿಕ ನಿಷೇಧ

ದುನಿಯಾ ವಿಜಯ್, ನಾಗಶೇಖರ್, ರವಿವರ್ಮಗೆ ತಾತ್ಕಾಲಿಕ ನಿಷೇಧ

Posted By:
Subscribe to Filmibeat Kannada

'ಇಂದಿನಿಂದ ಮುಂದಿನ ಆದೇಶದವರೆಗೂ, ತಮ್ಮ ಯಾವುದೇ ಚಿತ್ರದ ಚಿತ್ರೀಕರಣದಲ್ಲಿ ನಟ ದುನಿಯಾ ವಿಜಯ್ ಭಾಗವಹಿಸಬಾರದು'' ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಸೂಚನೆ ನೀಡಿದ್ದಾರೆ.

ದುನಿಯಾ ವಿಜಯ್ ಮಾತ್ರ ಅಲ್ಲ, 'ಮಾಸ್ತಿ ಗುಡಿ' ಚಿತ್ರದ ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಕೂಡ ಇನ್ಮುಂದೆ ಯಾವುದೇ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವಂತಿಲ್ಲ ಅಂತ ಫಿಲ್ಮ್ ಚೇಂಬರ್ ಅಧ್ಯಕ್ಷರು ಆದೇಶಿಸಿದ್ದಾರೆ.['ಮಾಸ್ತಿಗುಡಿ' ದುರಂತ: 2 ದಿನಗಳ ಬಳಿಕ ಓರ್ವ ನಟನ ಶವ ಪತ್ತೆ ]


ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!

'ಮಾಸ್ತಿ ಗುಡಿ' ಚಿತ್ರದ ಖಳ ನಟರ ಸಾವಿನ ಪ್ರಕರಣದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಈ ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸಿಬಾರದು. ಈ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರ ಜರುಗಿಸುವ ಅವಶ್ಯಕತೆಯಿದೆ. ಅದನ್ನ ಚಿತ್ರರಂಗದ ಹಿರಿಯರ ಜೊತೆ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೂ ಈ ನಮ್ಮ ಆದೇಶವನ್ನ 'ಮಾಸ್ತಿಗುಡಿ' ಚಿತ್ರದ ನಟ ಹಾಗೂ ನಿರ್ದೇಶಕರು ಪಾಲಿಸಿಬೇಕು ಎಂದು ತಿಳಿಸಿದ್ದಾರೆ.


Maasti Gudi Tragedy: Temporary Ban for Duniya Vijay

ಇದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಬೇರೆ ಯಾವುದೇ ಇಂಡಸ್ಟ್ರಿ ಚಿತ್ರೀಕರಣದಲ್ಲೂ ಸದ್ಯಕ್ಕೆ ಭಾಗವಹಿಸುವಂತಿಲ್ಲ. ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್, ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರುಗಳು ಜೊತೆ ಸಭೆ ಮಾಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೂ ಈ ಆದೇಶವನ್ನ ಪಾಲಿಸಬೇಕು, ಇದು ಆದೇಶವಷ್ಟೇ, ಬಹಿಷ್ಕಾರವಲ್ಲ ಎಂದು ಸಾ.ರಾ ಗೋವಿಂದು ಹೇಳಿದ್ದಾರೆ.[ನಾಪತ್ತೆ ಆಗಿದ್ದ 'ಮಸಣ ಗುಡಿ' ಸೂತ್ರಧಾರ ನಾಗಶೇಖರ್ ಪೊಲೀಸರ ವಶಕ್ಕೆ.!]


Maasti Gudi Tragedy: Temporary Ban for Duniya Vijay

ಸದ್ಯ, ನಿರ್ಮಾಪಕ ಸುಂದರ್ ಗೌಡ ಜೈಲಿನಲ್ಲಿದ್ದಾರೆ. ನಿರ್ದೇಶಕರ ನಾಗಶೇಖರ್ ಅವರನ್ನ ಇಂದು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ದುನಿಯಾ ವಿಜಯ್ ಅವರು ಸತತ ಮೂರು ದಿನಗಳಿಂದ ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ಮೃತ ದೇಹಗಳನ್ನ ಹುಡುಕುತ್ತಿದ್ದಾರೆ. ಹೀಗಾಗಿ, ಮೂವರ ಜೊತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿಬೇಕಿದೆ. ತದ ನಂತರವಷ್ಟೇ ಮುಂದಿನ ಕ್ರಮದ ಬಗ್ಗೆ ಯೋಚಿಸಬೇಕು ಎಂದಿದ್ದಾರೆ.[ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!]


Maasti Gudi Tragedy: Temporary Ban for Duniya Vijay

ಇನ್ನೂ, ವಾಣಿಜ್ಯ ಮಂಡಳಿಯ ತೀರ್ಮಾನಕ್ಕೆ ಪ್ರತಿಕ್ರಿಯಿಸಿರುವ ನಟ ದುನಿಯಾ ವಿಜಯ್, ''ಫಿಲ್ಮ್ ಚೇಂಬರ್ ಆದೇಶವನ್ನ ಗೌರವಿಸುತ್ತೇನೆ. ಅದು ನಮ್ಮ ಧರ್ಮ, ಅದನ್ನ ಪಾಲಿಸುತ್ತೇನೆ. ಯಾರೇ ಆಗಲಿ ಪಾಲಿಸಬೇಕು. ಸದ್ಯಕ್ಕೆ ತುಂಬಾ ನೋವಿನಲ್ಲಿದ್ದೇನೆ. ನಾನು ಈಗ ಶೂಟಿಂಗ್ ಮಾಡುವ ಮನಸ್ಥಿತಿಯಲಿಲ್ಲ'' ಎಂದು ಬೇಸರದಿಂದ ನುಡಿದಿದ್ದಾರೆ.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

English summary
Sa.Ra.Govindu, President of Karnataka Film Chamber of Commerce has issued Temporary Ban for Director Nagashekar, Stunt Master Ravi Varma and Kannada Actor Duniya Vijay in Kannada Film Industry or any Industry until further orders.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada