»   » ಕನ್ನಡಕ್ಕೆ ಬಂದ ಹಳೆ 'ಡವ್' ರಾಣಿ ಮದಲಸಾ ಶರ್ಮ

ಕನ್ನಡಕ್ಕೆ ಬಂದ ಹಳೆ 'ಡವ್' ರಾಣಿ ಮದಲಸಾ ಶರ್ಮ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಶೌರ್ಯ' ಚಿತ್ರದಲ್ಲಿ ಅಭಿನಯಿಸಿದ್ದ ಮದಲಸಾ ಶರ್ಮ ಮತ್ತೆ ಗಾಂಧಿನಗಕ್ಕೆ ಲಗ್ಗೆ ಹಾಕಿದ್ದಾರೆ. ಮದಲಸಾ ಬಿಕಿನಿ ಹಾಕಿದರೆ ಐಟಂ ಬೆಡಗಿಯರು ನಾಚಿ ನೀರಾಗುತ್ತಾರೆ.

ಈಗ ಆಕೆ ಬಿಕಿನಿ ತೊಡಲು ಅಥವಾ ಐಟಂ ಡಾನ್ಸ್ ಮಾಡಲು ಕನ್ನಡಕ್ಕೆ ಬಂದಿಲ್ಲ. ಸಾ.ರಾ.ಗೋವಿಂದು ಅವರ ಪುತ್ರ ಅನೂಪ್ ಗೋವಿಂದು ನಾಯಕನಟನಾಗಿರುವ 'ಡವ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೊದಲು ಈ ಚಿತ್ರಕ್ಕೆ ನಟಿ ಪ್ರಜ್ಞಾ ನಾಯಕಿಯಗಿ ಆಯ್ಕೆಯಾಗಿದ್ದರು.


ಬಳಿಕ ನಿರ್ದೇಶಕರ ಜೊತೆ ಮನಸ್ತಾಪದ ಉಂಟಾಗಿ ಪ್ರಜ್ಞಾ ಚಿತ್ರದಿಂದ ಹೊರನಡೆದರು. ಈಗ ಈ ಚಿತ್ರಕ್ಕೆ ಹೊಸ ನಾಯಕಿಯಾಗಿ ಮದಲಸಾ ಶರ್ಮ ಬಂದಿದ್ದಾರೆ. ಸಂತು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವನ್ನು ಬಿ.ಕೆ.ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ.

ಈ ಚಿತ್ರದ ಮತ್ತೊಬ್ಬ ನಾಯಕ ರಾಕೇಶ್. ಅನೂಪ್ ಗೆ ನಾಯಕಿ ಮೇಘನಾ ಜೋಡಿಯಾದರೆ ರಾಕೇಶ್ ಗೆ ಮದಲಸಾ ಜತೆಯಾಗಲಿದ್ದಾರೆ.  'ಡವ್' ಚಿತ್ರ ಹೆಸರೇ ಹೇಳುವಂತೆ ಮತ್ತೊಂದು ತುಡ್ ಹೈಕ್ಲ ಕಥೆ. ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಈಗಾಲೆ ಮುಗಿದಿದೆ.

ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಸಂತು ಸುಮಾರು ನಾಲ್ಕು ತಿಂಗಳುಗಳ ಕಾಲ ಅನೂಪ್‍ ಗೆ ಸಿನಿಮಾಕ್ಕೆ ಬೇಕಾದ ತರಬೇತಿ ನೀಡಿದ್ದಾರೆ. ಅಲ್ಲದೇ ಜಿಮ್, ಡ್ಯಾನ್ಸ್, ಫೈಟ್ ಸೇರಿದಂತೆ ಮತ್ತಿತರ ತಾಲೀಮುಗಳಲ್ಲಿ ಅನೂಪ್ ಬಿಜಿ.

ಇವೆಲ್ಲವನ್ನೂ ಹೊರತುಪಡಿಸಿ ಅನೂಪ್ ಕಾಲೇಜಿಗೂ ಹೋಗಿ ಬರಬೇಕಿದೆ. ಈ ಚಿತ್ರಕ್ಕೆ ಸಂಗೀತ ಅರ್ಜುನ್ ಜನ್ಯ, ಸಂಭಾಷಣೆ ಮಂಜು ಮಾಂಡವ್ಯ ಹಾಗೂ ಕ್ಯಾಮೆರಾ ಕೆಲಸ ಚಂದ್ರಶೇಖರ್ ನಿರ್ವಹಿಸಲಿದ್ದಾರೆ. (ಏಜೆನ್ಸೀಸ್)

English summary
Bollywood actress Madalasa Sharma re-enters into Kannada after a long break. Earlier she acted with Challenging Star Darsha in Shourya. Now she features in Kannada film 'Dove' directing by Santhu.
Please Wait while comments are loading...