»   » 'ನಂಜುಂಡಿ ಕಲ್ಯಾಣ'ಕ್ಕೆ ಮತ್ತೊಮ್ಮೆ ಸಮಯ ನಿಕ್ಕಿ ಆಯ್ತು.!

'ನಂಜುಂಡಿ ಕಲ್ಯಾಣ'ಕ್ಕೆ ಮತ್ತೊಮ್ಮೆ ಸಮಯ ನಿಕ್ಕಿ ಆಯ್ತು.!

Posted By:
Subscribe to Filmibeat Kannada

ಅದು 1989, ವರನಟ ಡಾ.ರಾಜ್ ಕುಮಾರ್ ರವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಆಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗ, ಒಂದರ ಹಿಂದೆ ಒಂದರಂತೆ ಒಟ್ಟು ಮೂರು ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಆದ್ರೆ, ರಾಘವೇಂದ್ರ ರಾಜ್ ಕುಮಾರ್ ಅದೃಷ್ಟ ಖುಲಾಯಿಸಿರಲಿಲ್ಲ. ಮೊದಲ ಚಿತ್ರ 'ಚಿರಂಜೀವಿ ಸುಧಾಕರ' ಪ್ರೇಕ್ಷಕರ ಮನ ಗೆಲ್ಲಲಿಲ್ಲ.

ಒಂದು ಒಳ್ಳೆ ಕಥೆ, ಒಳ್ಳೆ ನಿರ್ದೇಶಕನಾಗಿ ಹುಡುಕಾಡುತ್ತಿದ್ದ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಕಣ್ಣಿಗೆ ಬಿದ್ದದ್ದು ಹಿರಿಯ ನಿರ್ದೇಶಕ ಎಂ.ಎಸ್.ರಾಜಶೇಖರ್. ಅವರು ನಿರ್ದೇಶಿಸಿದ ಬ್ಲಾಕ್ ಬಸ್ಟರ್ ಚಿತ್ರವೇ 'ನಂಜುಂಡಿ ಕಲ್ಯಾಣ'.

ಯಾರೂ ಊಹಿಸಲಾರದಷ್ಟು ಗಳಿಕೆ ಮಾಡಿ, 435 ದಿನ ಯಶಸ್ವಿ ಪ್ರದರ್ಶನ ಕಂಡ ರಾಘವೇಂದ್ರ ರಾಜ್ ಕುಮಾರ್, ಮಾಲಾಶ್ರೀ ಅಭಿನಯದ ಸಿನಿಮಾ 'ನಂಜುಂಡಿ ಕಲ್ಯಾಣ'. ಮುಂದೆ ಓದಿ....

'ನಂಜುಂಡಿ ಕಲ್ಯಾಣ'ಕ್ಕೆ ಮತ್ತೆ ಘಳಿಗೆ ಕೂಡಿ ಬಂತು

ಅಂದಿನ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ನಂಜುಂಡಿ ಕಲ್ಯಾಣ' ಇಂದು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಹಾಗಂದ ಮಾತ್ರಕ್ಕೆ 'ನಂಜುಂಡಿ ಕಲ್ಯಾಣ' ಚಿತ್ರ ಮತ್ತೊಮ್ಮೆ ಬಿಡುಗಡೆ ಆಗುತ್ತಿದೆ ಅಂತಲ್ಲ. ಬದಲಾಗಿ, ಅದೇ ಹೆಸರಿನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ.

ಮತ್ತೊಮ್ಮೆ 'ನಂಜುಂಡಿ ಕಲ್ಯಾಣ'

ಸ್ಯಾಂಡಲ್ ವುಡ್ ನಲ್ಲಿ ಸದ್ಯದ ಖಾಸ್ ಖಬರ್ ಅಂದ್ರೆ ಇದೇ. 'ಮಡಮಕ್ಕಿ' ಹೀರೋ ತನುಷ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ 'ನಂಜುಂಡಿ ಕಲ್ಯಾಣ' ಅಂತ ಹೆಸರಿಡಲಾಗಿದೆ.

ಅದೇ ಟೈಟಲ್ ಯಾಕೆ?

ಒಂದು ಮದುವೆ ಸುತ್ತ ನಡೆಯುವ ಕಾಮಿಡಿ ಕಥೆ ಇದಾಗಿರುವುದರಿಂದ ಚಿತ್ರಕ್ಕೆ 'ನಂಜುಂಡಿ ಕಲ್ಯಾಣ' ಟೈಟಲ್ ಸೂಕ್ತ ಅಂತ ಅನಿಸ್ತಂತೆ. ಹೀಗಾಗಿ ರಾಘವೇಂದ್ರ ರಾಜ್ ಕುಮಾರ್ ರವರಿಂದ ಪರ್ಮಿಷನ್ ತೆಗೆದುಕೊಂಡು, ಶೀರ್ಷಿಕೆ ಇಡಲಾಗಿದೆ ಎನ್ನುತ್ತಾರೆ ನಟ ತನುಷ್.

ಹತ್ತು ಕಥೆ ಪೈಕಿ 'ನಂಜುಂಡಿ ಕಲ್ಯಾಣ'ಕ್ಕೆ ಗ್ರೀನ್ ಸಿಗ್ನಲ್.!

'ಮಡಮಕ್ಕಿ' ಚಿತ್ರದ ಬಳಿಕ ನಟ ತನುಷ್ ರವರು ಬೇಕಾದಷ್ಟು ಕಥೆಗಳನ್ನ ಕೇಳಿದ್ರಂತೆ. ಅದರಲ್ಲೂ ನಿರ್ದೇಶಕ ರಾಜೇಂದ್ರ ಕಾರಂತ್ ರವರೇ ಹತ್ತು ಕಥೆಗಳನ್ನ ಹೇಳಿದ್ದರು. ಅದರಲ್ಲಿ 'ನಂಜುಂಡಿ ಕಲ್ಯಾಣ' ಚಿತ್ರಕ್ಕೆ ಸದ್ಯಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಹೊಸ 'ಮಾಲಾಶ್ರೀ' ಇನ್ನೂ ಸಿಕ್ಕಿಲ್ಲ.!

ಸದ್ಯಕ್ಕೆ ಮಾಲಾಶ್ರೀ ತರಹ ನಟಿಗಾಗಿ ನಿರ್ದೇಶಕ ರಾಜೇಂದ್ರ ಕಾರಂತ್ ದುರ್ಬೀನು ಹಾಕೊಂಡು ತಲಾಶ್ ಮಾಡುತ್ತಿದ್ದಾರೆ.

ಅರುಣ್ ಸಾಗರ್ ಇರಲಿದ್ದಾರೆ

ಹೊಸ 'ನಂಜುಂಡಿ ಕಲ್ಯಾಣ' ಚಿತ್ರದಲ್ಲಿ ಅರುಣ್ ಸಾಗರ್ ಕೂಡ ಇರಲಿದ್ದಾರೆ. ನವೆಂಬರ್ ನಿಂದ ಶೂಟಿಂಗ್ ಶುರುವಾಗಲಿದೆ.

English summary
Raghavendra Rajkumar starrer Kannada Movie 'Nanjundi Kalyana' is back in news as 'Madamakki' hero Thanush's next movie titled as 'Nanjundi Kalyana' directed by Rajendra Karanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada