twitter
    For Quick Alerts
    ALLOW NOTIFICATIONS  
    For Daily Alerts

    ಸುನಿಲ್ ಪುರಾಣಿಕ್ ವಿರುದ್ಧ 4.50 ಕೊಟಿ ಭ್ರಷ್ಟಾಚಾರದ ಆರೋಪ ಹೊರಿಸಿದ ಮದನ್ ಪಟೇಲ್

    |

    ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ವಿರುದ್ಧ ನಿರ್ದೇಶಕ, ನಿರ್ಮಾಪಕ, ನಟ ಮದನ್ ಪಟೇಲ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

    ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುಮಾರು 4.50 ಕೋಟಿ ಹಣ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಮದನ್ ಪಟೇಲ್ ಆರೋಪಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಮದನ್ ಪಟೇಲ್, ಎಲ್ಲ ದಾಖಲೆಗಳು ನನ್ನ ಬಳಿ ಇದ್ದು ಅವನ್ನು ಎಸಿಬಿಗೆ ನೀಡಿದ್ದೇನೆ ಎಂದಿದ್ದಾರೆ.

    2018-19ರ ಸಾಲಿನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ನಾಲ್ಕು ಕೋಟಿಯನ್ನು ಆಗಿನ ಅಕಾಡೆಮಿ ಅಧ್ಯಕ್ಷರು ಖರ್ಚು ಮಾಡಿದ್ದರು. ಅದೇ 2019-20ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಬರೋಬ್ಬರಿ 8 ಕೋಟಿ ಖರ್ಚು ಮಾಡಲಾಗಿದೆ. ದುಪ್ಪಟ್ಟು ಹಣ ಖರ್ಚು ಮಾಡಿ ಸರ್ಕಾರದ ಬೊಕ್ಕಸಕ್ಕೆ ನಾಲ್ಕು ಕೋಟಿ ನಷ್ಟ ಮಾಡಿದ್ದಾರೆ ಎಂದು ಮದನ್ ಪಟೇಲ್ ಆರೋಪ ಮಾಡಿದ್ದಾರೆ.

    ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮದನ್ ಪಟೇಲ್, ''ಒಂದು ಟೀಗೆ 800 ರು ಬಿಲ್ ಹಾಕಿದ್ದಾರೆ. ಕ್ಷುಲ್ಲಕ ವಸ್ತುಗಳಿಗೆ ದುಬಾರಿ ಬೆಲೆಯ ಬಿಲ್ ಹಾಕಿ ಅದನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ. ಸೂಕ್ತವಾಗಿ ಟೆಂಡರ್ ಕರೆದಿಲ್ಲ. ನನಗೂ ಸುನಿಲ್ ಪುರಾಣಿಕ್‌ಗೂ ವೈಯಕ್ತಿಕ ದ್ವೇಷವಿಲ್ಲ ಆದರೆ ಸರ್ಕಾರದ ಹಣ ಪೋಲಾಗಬಾರದು ಎಂಬ ಕಾಳಜಿ ನನ್ನದು. ಹಾಗಾಗಿಯೇ ಈ ಬಗ್ಗೆ ಮಾತನಾಡುತ್ತಿದ್ದೇನೆ'' ಎಂದಿದ್ದಾರೆ ಮದನ್ ಪಟೇಲ್.

    ಈ ಹಿಂದೆಯೇ ದೂರು ನೀಡಿದ್ದ ಮದನ್ ಪಟೇಲ್

    ಈ ಹಿಂದೆಯೇ ದೂರು ನೀಡಿದ್ದ ಮದನ್ ಪಟೇಲ್

    ಮದನ್ ಪಟೇಲ್ ಈ ಹಿಂದೆಯೇ ಕುರಿತು ಎಸಿಬಿಗೆ ದೂರು ನೀಡಿದ್ದರು. 2020-21ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವನ್ನು ಆಯೋಜಿಸಬಾರದು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಹ ಮಾಡಿದ್ದರು. ಈಗ ಈ ಭ್ರಷ್ಟಾಚಾರ ಆರೋಪಕ್ಕೆ ಪೂರಕವಾದ ಇನ್ನಷ್ಟು ದಾಖಲೆಗಳನ್ನು ಎಸಿಬಿಗೆ ನೀಡಿರುವುದಾಗಿ ಮದನ್ ಪಟೇಲ್ ಹೇಳಿದ್ದಾರೆ. ನಾಲ್ಕು ಕೋಟಿಯಲ್ಲಿ ಮಾಡಲಾದ ಸಿನಿಮೋತ್ಸವಕ್ಕೆ ಅದರ ಮರುವರ್ಷವೇ ಎಂಟು ಕೋಟಿ ಖರ್ಚಾಗಿದ್ದು ಹೇಗೆ ಎಂಬುದು ಮದನ್ ಪಟೇಲ್ ಪ್ರಶ್ನೆ.

    ಅಧ್ಯಕ್ಷನಾಗುವ ಮುನ್ನವೇ ಕಾರ್ಯ ಯೋಜನೆ ಆಗಿತ್ತು: ಸುನಿಲ್

    ಅಧ್ಯಕ್ಷನಾಗುವ ಮುನ್ನವೇ ಕಾರ್ಯ ಯೋಜನೆ ಆಗಿತ್ತು: ಸುನಿಲ್

    ಆರೋಪದ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಪುರಾಣಿಕ್, ''ನಾನು ಅಧ್ಯಕ್ಷನಾಗುವ ಮುನ್ನವೇ ಆ ಕಾರ್ಯ ಯೋಜನೆ ಅನುಮೋದನೆ ಆಗಿತ್ತು ಅದನ್ನು ನಾನು ಜಾರಿಗೆ ತಂದಿದ್ದೇನೆ ಅಷ್ಟೆ. ನಾನು ಅಧ್ಯಕ್ಷನಾದ ಬಳಿಕ ಅದಕ್ಕೆ ಅನುಮೋದನೆಯನ್ನಷ್ಟೆ ನಾನು ನೀಡಿದ್ದೇನೆ. ಮತ್ತು ಅಧ್ಯಕ್ಷನಾಗಿ ಟೀಗೆ ಎಷ್ಟಾಗಿದೆ, ಚೇರ್‌ಗೆ ಎಷ್ಟು ಬಿಲ್ ಆಗಿದೆ ಎಂದು ನೋಡುತ್ತಾ ಕೂರುವುದು ನನ್ನ ಕೆಲಸವಲ್ಲ. ಅದು ಸಾಧ್ಯವೂ ಇಲ್ಲ'' ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.

    ಎಲ್ಲಿ ಉತ್ತರಿಸಬೇಕೊ ಅಲ್ಲಿ ಉತ್ತರಿಸುತ್ತೇನೆ: ಸುನಿಲ್ ಪುರಾಣಿಕ್

    ಎಲ್ಲಿ ಉತ್ತರಿಸಬೇಕೊ ಅಲ್ಲಿ ಉತ್ತರಿಸುತ್ತೇನೆ: ಸುನಿಲ್ ಪುರಾಣಿಕ್

    ''ಇದೇ ವಿಷಯ ವಿಧಾನಪರಿಷತ್‌ನಲ್ಲಿ ಚರ್ಚೆಯಾಗಿ ಕೊಂಡಜ್ಜಿಯವರು ಪ್ರಶ್ನೆಗಳನ್ನು ಕೇಳಿದ್ದರು. ಆಗ ನಮ್ಮ ನಾಯಕು, ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಉತ್ತರ ನೀಡಿ. ಮಹಿತಿಯನ್ನೂ ಒದಗಿಸಿದ್ದಾರೆ. ಎಂಟು ತಿಂಗಳ ಹಿಂದೆ ಮುಗಿದುಹೋದ ವಿಚಾರವಾಗಿ ಈಗ ಇವರು ಮತ್ತೆ ಹೋಗಿ ದೂರು ಕೊಟ್ಟಿದ್ದಾರೆ ಎನಿಸುತ್ತಿದೆ. ಅವರ ಪ್ರಶ್ನೆಗಳಿಗೆ ನಾನು ಎಲ್ಲಿ, ಯಾವ ವೇದಿಕೆಯಲ್ಲಿ ಉತ್ತರ ನೀಡಬೇಕೊ ಅಲ್ಲಿಯೇ ಉತ್ತರ ನೀಡುತ್ತೇನೆ'' ಎಂದಿದ್ದಾರೆ ಸುನಿಲ್ ಪುರಾಣಿಕ್.

    ಅಧ್ಯಕ್ಷರಾಗಿ ವಿರೋಧಿಸಲಿಲ್ಲ ಏಕೆ? ಮದನ್ ಪಟೇಲ್ ಪ್ರಶ್ನೆ

    ಅಧ್ಯಕ್ಷರಾಗಿ ವಿರೋಧಿಸಲಿಲ್ಲ ಏಕೆ? ಮದನ್ ಪಟೇಲ್ ಪ್ರಶ್ನೆ

    ಆದರೆ ಪುರಾಣಿಕ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಮದನ್ ಪಟೇಲ್, ''ಸುನಿಲ್ ಪುರಾಣಿಕ್ ಅಕಾಡೆಮಿ ಅಧ್ಯಕ್ಷರಾಗಿದ್ದು, ಈ ಹಿಂದಿನ ಕಾರ್ಯ ಯೋಜನೆ ಸರಿಯಲ್ಲ ಎಂದು ಅವರಿಗೆ ಎನಿಸಿದ್ದರೆ ಅದನ್ನು ಆಗಲೇ ವಿರೋಧ ಮಾಡಬೇಕಿತ್ತು. ಅದಕ್ಕೆ ಅನುಮೋದನೆ ಏಕೆ ನೀಡಿದರು. ಅಲ್ಲದೆ ಜಗದೀಶ್ ಶೆಟ್ಟರ್ ಅವರು ಮಾನ್ಯ ಕೊಂಡಜ್ಜಿಯವರಿಗೆ ನೀಡಿದ ಉತ್ತರಗಳನ್ನು ಆಧರಿಸಿಯೇ ನಾನು ಎಸಿಬಿಗೆ ದೂರು ನೀಡಿದ್ದೇನೆ. ಜಗದೀಶ್ ಶೆಟ್ಟರ್ ಉತ್ತರವಾಗಿ ನೀಡಿದ ದಾಖಲೆಯಿಂದಲೇ ಇವರ ಭ್ರಷ್ಟಾಚಾರ ಬಯಲಾಗಿದ್ದು'' ಎಂದು ಮದನ್ ಪಟೇಲ್ ಹೇಳಿದ್ದಾರೆ.

    English summary
    Actor, producer Madan Patel alleged that Karnatak Film academy president Sunil Puranik did 4.50 crore rs corruption.
    Tuesday, August 24, 2021, 9:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X