For Quick Alerts
  ALLOW NOTIFICATIONS  
  For Daily Alerts

  'ಮಾದೇಶ' ನಿರ್ಮಾಪಕನಿಗೆ ಜೈಲಿನಿಂದ ಬಿಡುಗಡೆ

  By Rajendra
  |
  'ಮಾದೇಶ' ಚಿತ್ರದ ನಿರ್ಮಾಪಕ ಗೋವರ್ಧನ್ ಮೂರ್ತಿ ಅವರು ನಾಲ್ಕು ವರ್ಷಗಳ ಜೈಲುವಾಸ ಬಳಿಕ ಬುಧವಾರ ಸಂಜೆ (ಡಿ.26) ಅವರಿಗೆ ಬಿಡುಗಡೆ ಭಾಗ್ಯ ಸಿಗುತ್ತಿದೆ. ನಟ ವಿನೋದ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಕೊಲೆ ಆರೋಪ ಎದುರಿಸುತ್ತಿದ್ದರು.

  ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಅವರ ವಿರುದ್ಧದ ಕೊಲೆ ಆರೋಪವನ್ನು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಗೋವರ್ಧನ್ ಮೂರ್ತಿ ಸೇರಿದಂತೆ ಉಳಿದ ಆರು ಆರೋಪಿಗಳನ್ನೂ ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ಮೂರ್ತಿ ಪರ ವಕೀಲರಾದ ಸಿ.ಎಚ್.ಹನುಮಂತರಾಯ ಅವರು ತಿಳಿಸಿದ್ದಾರೆ.

  2008ರ ಅಕ್ಟೋಬರ್ 6ರ ರಾತ್ರಿ ಬೆಂಗಳೂರು ಹೊರವಲಯದ ರೆಸಾರ್ಟ್‌ವೊಂದರಲ್ಲಿ ಕುಡಿದ ಮತ್ತಿನಲ್ಲಿ ಸಹನಟ ವಿನೋದ್ ಕುಮಾರ್ ಹೆಣವಾಗಿ ಬಿದ್ದಿದ್ದ. 'ಮಾದೇಶ' ಚಿತ್ರದ ನಿರ್ಮಾಪಕ ಗೋವರ್ಧನ ಮೂರ್ತಿ ಅವರೇ ಗುಂಡು ಹಾರಿಸಿ ಆತನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 32 ಸಾಕ್ಷಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಇಬ್ಬರು ಪ್ರತ್ಯಕ್ಷ ಸಾಕ್ಷಿಗಳ ಸಹ ಇದ್ದರು. ಅವರೆಲ್ಲರನ್ನೂ ಪಾಟಿ ಸವಾಲಿಗೆ ಒಳಪಡಿಸಲಾಗಿತ್ತು. ಸೂಕ್ತ ಉತ್ತರ ನೀಡುವಲ್ಲಿ ಅವರೆಲ್ಲಾ ವಿಫಲರಾದರು ಎಂದು ಗೋವರ್ಧನ್ ಪರ ವಕೀಲರು ವಿವರ ನೀಡಿದರು. (ಒನ್ಇಂಡಿಯಾ ಕನ್ನಡ)

  English summary
  Kannada film producer Govardhan Murthy aquited from murder charge against actor Vinod Kumar. After more than three years in jail, Govardhan Murthy will be release on Wednesday (Dec 26) evening. Murthy was arrested by Bagalur police in October 2008 for allegedly murdering budding actor Vinod Kumar on October 6, 2008 in Bagalur. He was shot dead during the tussle.
  Wednesday, December 26, 2012, 16:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X