For Quick Alerts
  ALLOW NOTIFICATIONS  
  For Daily Alerts

  ಚಾಮುಂಡೇಶ್ವರಿ ದೇವಿ ಮುಂದೆ ಚೇತನ್ ಬರೆದ ಸಾಹಿತ್ಯ ಹೀಗಿದೆ

  |

  ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ 'ಮದಗಜ' ಸಿನಿಮಾದ ಸ್ಕ್ರಿಪ್ಟ್ ಪೂಜೆ ಹಾಗೂ ಲಿರಿಕ್ಸ್ ಪೂಜೆ ಇಂದು ನಡೆದಿದೆ. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ಅಮ್ಮನ ದೇವಸ್ಥಾನದಲ್ಲಿ ಚಿತ್ರದ ಪೂಜೆ ಕಾರ್ಯಕ್ರಮ ಜರುಗಿದೆ.

  ಇಂದು ಬೆಳಗ್ಗೆ 7.30ಕ್ಕೆ ಚಿತ್ರದ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ, ಚೇತನ್ ಕುಮಾರ್ (ಭರಾಟೆ) , ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ , ಸುಪ್ರೀತ್, ನಿರ್ದೇಶಕ ಮಹೇಶ್ ಕುಮಾರ್ ಭಾಗಿಯಾಗಿದ್ದರು.

  ಸ್ಕ್ರಿಪ್ಟ್ ಪೂಜೆ ಮುಗಿಸಿದ 'ಭರಾಟೆ' ಟೀಂ

  ವಿಶೇಷ ಅಂದರೆ, ತಾಯಿ ಚಾಮುಂಡೇಶ್ವರಿ ಮುಂದೆಯೇ ಚೇತನ್ ಕುಮಾರ್ ಸಿನಿಮಾದ ಹಾಡನ್ನು ಬರೆದಿದ್ದಾರೆ. ದೇವರ ಮುಂದೆ ಚೇತನ್ ಬರದ ಸಾಹಿತ್ಯ ಈ ಮುಂದಿನಂತಿದೆ.

  ''ಶತ್ರು ದಮನವನ್ನು ಮಾಡೋ ಸೈನ್ಯವನೇ ಇಳಿಸೋ ವೈರತ್ವ ದರ್ಪ ಹೊರೆ

  ಸೂರ್ಯ ಇರೋವರೆಗೂ ಭೂಮಿ ನೆನೆಯಲಿ ಮೊಳಗಲಿ ಕೀರ್ತಿ ಜಯಿಸೊ ದೊರೆ

  ಗಜಗಳ ಪಳಗಿಸೊ ನಿನ್ನಯ ಭುಜಬಲಮದವನ್ನು ಕರಗಿಸೋ ನಿನ್ನೆಯ ಮನೋಬಲ

  ಛಲದಂಕ ಮಲ್ಲ ನೀನೇ ಮದಗಜ''

  ಶ್ರೀಮುರಳಿಯ ಈ ಚಿತ್ರ ನೋಡಿ ದರ್ಶನ್ ಹೊಟ್ಟೆ ಉರಿದುಕೊಂಡಿದ್ರಂತೆ

  'ಮದಗಜ' ಸಿನಿಮಾ ಟೈಟಲ್ ಸಾಂಗ್ ಇದಾಗಿದೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. 'ಅಯೋಗ್ಯ' ನಂತರ ಮತ್ತೆ ಅದೇ ಕಾಂಬಿನೇಶನ್ ನಲ್ಲಿ ಈ ಚಿತ್ರದ ಹಾಡುಗಳು ಸಿದ್ಧವಾಗಲಿವೆ.

  English summary
  Actor Sri Murali's 'Madhagaja' kannada movie script pooja held today in mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X