Just In
Don't Miss!
- Lifestyle
ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು
- Automobiles
ಭಾರತದಲ್ಲಿ ಮೊದಲ ಬಾರಿಗೆ ಸ್ಟುಡಿಯೋ ಕೆಫೆ ಶೋರೂಂ ತೆರೆದ ಪೋರ್ಷೆ
- News
ಡೊನಾಲ್ಡ್ ಟ್ರಂಪ್ರನ್ನು ಮತ್ತೆ ಕೆಣಕಿದ ಗ್ರೆಟಾ ಥನ್ಬರ್ಗ್
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- Finance
ದಿನದ ಗರಿಷ್ಠ ಮಟ್ಟದಿಂದ 500ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಜನಿಕಾಂತ್ 'ಲಿಂಗಾ' ಚಿತ್ರದ ರಿಲೀಸ್ ಗೆ ಕಂಟಕ
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗಿಲ್ಲಿದೆ ಶಾಕಿಂಗ್ ನ್ಯೂಸ್. ಸೆಟ್ಟೇರಿದಾಗಿನಿಂದಲೂ ದೇಶಾದ್ಯಂತ ಸೆನ್ಸೇಷನ್ ಕ್ರಿಯೇಟ್ ಮಾಡಿ, ಬಿಡುಗಡೆಗೂ ಮುನ್ನ ದಾಖಲೆ ಬರೆದಿರುವ 'ಲಿಂಗಾ' ಚಿತ್ರ ಈಗ ಕೋರ್ಟ್ ಕಟಕಟೆಯಲ್ಲಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳು 'ಲಿಂಗಾ' ಚಿತ್ರವನ್ನ ಕುಣ್ತುಂಬಿಕೊಳ್ಳೋಕೆ ತುದಿಗಾಗಲ್ಲಿ ನಿಂತು ಕಾಯ್ತಿದ್ರೆ, ಇತ್ತ ಮದ್ರಾಸ್ ಹೈಕೋರ್ಟ್ 'ಲಿಂಗಾ' ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ.
ಯುವ ನಿರ್ಮಾಪಕ ಮತ್ತು ನಿರ್ದೇಶಕ ಕೆ.ಆರ್. ರವಿ ರತ್ನಂ ಸಲ್ಲಿಸಿರುವ ಅರ್ಜಿಯ ಆಧಾರ ಮೇಲೆ ಮದ್ರಾಸ್ ಹೈಕೋರ್ಟ್ 'ಲಿಂಗಾ' ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ನೋಟೀಸ್ ಜಾರಿ ಮಾಡಿದೆ.
ತಮ್ಮ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿಬರುತ್ತಿರುವ ''ಮುಲ್ಲೈ ವಾನಂ 999'' ಚಿತ್ರಕಥೆಯನ್ನ ಕದ್ದು 'ಲಿಂಗಾ' ಚಿತ್ರವನ್ನ ರೆಡಿಮಾಡಲಾಗಿದೆ ಅಂತ ಆರೋಪಿಸಿ ಮದ್ರಾಸ್ ಹೈಕೋರ್ಟ್ ನಲ್ಲಿ ಕೆ.ಆರ್. ರವಿ ರತ್ನಂ ದಾವೆ ಹೂಡಿದ್ರು. ಅರ್ಜಿಯನ್ನ ಪುರಸ್ಕರಿಸಿದ ಕೋರ್ಟ್, ಚಿತ್ರಕ್ಕೆ ತಡೆಯಾಜ್ಞೆ ನೀಡಿದೆ.
ಕಳೆದ ಫೆಬ್ರವರಿಯಂದು ''ಮುಲ್ಲೈ ವಾನಂ 999'' ಚಿತ್ರದ ಮುಹೂರ್ತ ನಡೆದದ್ದು, ಚಿತ್ರದ ಕಥಾವಸ್ತು ಬಗ್ಗೆ ಯ್ಯೂಟ್ಯೂಬ್ ಮತ್ತು ಇತರೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಕೆ.ಆರ್.ರವಿ ರತ್ನಂ ಪೋಸ್ಟ್ ಮಾಡಿದ್ದರಂತೆ. ಇದನ್ನ ನೋಡಿ, ಲಿಂಗಾ ಚಿತ್ರತಂಡ ತಮ್ಮ ಕೃತಿಚೌರ್ಯ ಮಾಡಿದೆ ಅಂತ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಈಗಾಗಲೇ 'ಮುಲ್ಲೈ ವಾನಂ 999'' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹೊಸ ವರ್ಷಕ್ಕೆ ತೆರೆಗೆ ಬರ್ಬೇಕಿತ್ತು. ಅಷ್ಟರಲ್ಲಿ, ಲಿಂಗಾ ಚಿತ್ರದ ತುಣುಕಗಳನ್ನ ನೋಡಿ, ಕೆ.ಆರ್. ರವಿರತ್ನಂ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆಗೆ ಕೋರ್ಟ್ ಅಸ್ತು ಅಂದಿರುವುದರಿಂದ, 'ಲಿಂಗಾ' ಚಿತ್ರಕ್ಕೆ ಕಂಟಕ ಎದುರಾಗಿದೆ. ಮುಂದೇನಾಗುತ್ತೋ ಆ 'ಶಿವ'ನೇ ಬಲ್ಲ. (ಏಜೆನ್ಸೀಸ್)