twitter
    For Quick Alerts
    ALLOW NOTIFICATIONS  
    For Daily Alerts

    ಪ್ರತಿಯಾಂದು ಮದುವೆಯೂ ಭರವಸೆಯ ವ್ಯವಸಾಯ

    By Super Admin
    |

    ಎಂದು ತಿಳಿದುಕೊಂಡ ಎಲಿಜಬೆತ್‌, ಯಾರನ್ನೂ ಮದುವೆಯಾಗುವುದಕ್ಕೆ ಪ್ರೋತ್ಸಾಹಿಸಬೇಡ, ಕೊನೆಗೆ ಪಶ್ಚಾತ್ತಾಪ ಪಡುವೆ ಎಂದ ಲಂಕೇಶ್‌... ಹೀಗೆ ಕತೆಗಳು ಹೊಳೆಯುತ್ತಾ ಹೋಗುತ್ತವೆ. ಪ್ರತಿಯಾಂದು ಮದುವೆಯೂ ಕೊನೆಯಲ್ಲಿ ಪೂರ್ತಿಯಾಗದ ಕರಾರಿನಂತೆ ಕಾಣತೊಡಗಿ, ಆರಂಭದ ಓವರ್‌ ರೇಟೆಡ್‌ ಆಸೆಗಳೆಲ್ಲ ಕಮರುತ್ತವೆ. ಅದಕ್ಕೇ ಒಮ್ಮೆ ಮದುವೆಯಾದವನು ಮತ್ತೊಮ್ಮೆ ಆಗುವುದಿಲ್ಲ ಎಂಬ ನಂಬಿಕೆ ಚಾಲ್ತಿಯಲ್ಲಿದೆ.

    ಆದರೆ, ದುರದೃಷ್ಟವಶಾತ್‌ ಮದುವೆಯಾಗುವುದು ಸಿಗರೇಟಿನ ಹಾಗೆ ಕೆಲವರಿಗೊಂದು ಚಟವಾಗಿರುವುದೂ ಉಂಟು. ಆ ಸಂಬಂಧಕ್ಕೆ ಅಡಿಕ್ಟ್‌ ಆದ ಮನುಷ್ಯನನ್ನು ತಡೆಯುವುದು ಕಷ್ಟ . ಒಂದು ಗಂಡು ತಾನು ಅತ್ಯಂತ ಅಸಹ್ಯಪಡುವ ಹೆಣ್ಣಿನ ಜೊತೆ, ಒಬ್ಬ ಹೆಣ್ಣು ತಾನು ಅತ್ಯಂತ ದ್ವೇಷಿಸುವ ಗಂಡಿನ ಜೊತೆ ಮಲಗಬಲ್ಲಳು ಅನ್ನುವುದು ಸೃಷ್ಟಿಯ ಪವಾಡಗಳಲ್ಲಿ ಒಂದು.

    ಗಂಡ-ಹೆಂಡತಿ ಕ್ರಮೇಣ ತಂದೆತಾಯಿ ಆಗುತ್ತಾರೆ. ಆಗಲೂ ಅವರು ಗಂಡಹೆಂಡಿರಾಗಿ ಉಳಿಯುತ್ತಾರೆ ಎನ್ನುವುದು ಕಷ್ಟ. ಆದರೆ, ಒಂದು ಕಾಲಘಟ್ಟದಲ್ಲಿ ಇಬ್ಬರೂ ಹಂಚಿಕೊಂಡ ರಸ ಘಳಿಗೆಗಳನ್ನು ಮರೆಯುವುದು ಕಷ್ಟ. ಭಾವುಕರಾದಾಗಲೆಲ್ಲ ಅದು ನೆನಪಾಗಬಹುದು.

    ಅಂಥವರಿಗೆ ಮರು ಮದುವೆ ಕಷ್ಟದ ಬಾಬತ್ತೇ. ಆದರೆ ಮನಸ್ಸು ವಿಚಿತ್ರವಾದದ್ದು . ಅದು ತನ್ನನ್ನು ಹಿಂಸಿಸಿಕೊಳ್ಳುವುದನ್ನೂ, ಸದಾ ಅಶಾಂತವಾಗಿರೋದನ್ನು, ನೆಮ್ಮದಿ ಕಳಕೊಳು ್ಳವುದನ್ನೂ ಒಮ್ಮೊಮ್ಮೆ ಇಷ್ಟಪಟ್ಟು ಮಾಡುತ್ತದೆ. ಭೂಮಿ ಅದುರಿ ತನ್ನನ್ನು ತಾನೇ ನೋಯಿಸಿಕೊಳ್ಳುವ ಹಾಗೆ ನಾವೂ ನೋಯಿಸಿಕೊಳ್ಳುತ್ತೇವೆ.

    ಯಾರನ್ನು ಮದುವೆಯಾಗ್ತೀರಿ ಅನ್ನೋದು ಮುಖ್ಯವಲ್ಲ . ನೀವು ಯಾರನ್ನು ಅಂತ ಮದುವೆಯಾಗಿರ್ತಿರೋ ಅವರು ಮಾರನೆ ಬೆಳಗ್ಗೆ ಅವರೇ ಆಗಿರೋದಿಲ್ಲ ಎಂಬ ಜಾಣ್ಣುಡಿಯಾಂದಿದೆ. ಮದುವೆ ಒಂದು ಚೌಕಾಸಿ ವ್ಯಾಪಾರ ಆಗಿರುವಾಗ ಒಬ್ಬನಷ್ಟೇ ಲಾಭ ಮಾಡಿಕೊಳ್ಳೋದು ಸಾಧ್ಯ. ಅರ್ಧಾಂಗಿಯಾದ ಮೇಲೆ ಅದು ಇಬ್ಬರದೂ ಆಗುತ್ತದೆ.

    ಎಲ್ಲಕ್ಕಿಂತ ಮುಖ್ಯವಾದದ್ದನ್ನು ನೆನಪಿಡಿ : ಮದುವೆಯಾದ ಮೇಲೆ ನಿಮಗೆ ಆತನ ಮೇಲೆ, ಆಕೆಗೆ ನಿಮ್ಮ ಮೇಲೆ ಪ್ರೀತಿ ಹೊರಟು ಹೋಗಬಹುದು. ಆದರೆ ಜೊತೆಗೇ ಇದ್ದರೆ ಅದೇ ಪ್ರೀತಿ ಮತ್ತೊಮ್ಮೆ ಹುಟ್ಟಲೂಬಹುದು. ಒಮ್ಮೆ ಮದುವೆಯಾದವನು ಬೇರೆ ಯಾರನ್ನೂ ಪ್ರಾಮಾಣಿಕವಾಗಿ ಪ್ರೀತಿಸಲಾರ. ಇದು ಸುಳ್ಳಾದರೆ ಜಗವೆಲ್ಲ ಸುಳ್ಳು!

    ನೀವು ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗುತ್ತೀರಿ. ಆದರೆ, ವ್ಯಕ್ತಿತ್ವದ ಜೊತೆ ಬದುಕಬೇಕಾಗುತ್ತದೆ. ಸುಧಾರಾಣಿಯ ಸಂದರ್ಭದಲ್ಲೂ ಹೀಗೇ ಆಗಿರಬಹುದು. ಪರ್ಸನಾಲಿಟಿ, ಕ್ಯಾರೆಕ್ಟರ್‌ ಆದಾಗ ಉದ್ಭವಿಸುವ ಸಮಸ್ಯೆಗಳು ಇವು. ಒಂದು ಸಣ್ಣ ತಮಾಷೆಯಾಂದಿಗೆ ಮುಗಿಸೋಣ. ಹೆಂಡತಿಯ ಗೋರಿಯ ಮುಂದೆ ನಿಂತು ಒಬ್ಬಾತ ಹೇಳುತ್ತಿದ್ದನಂತೆ:

    Here lies my wife; here let her lie
    Now she is at rest, and so am I

    ಮದುವೆ, ಮರು ಮದುವೆ ಮತ್ತು ಬದುಕು

    ವಾರ್ತಾ ಸಂಚಯ
    ಬಲಗಾಲಿಟ್ಟು ಒಳಗೆ ಬಾರಮ್ಮ ಮಗಳೆ....
    ಸುಧಾರಾಣಿ ಮರುಮದುವೆ
    ಮರಳಿ ಬಂದಳು ಸೀತೆ , ನಿಜವಾಯಿತು ನಿರೀಕ್ಷೆ
    ಸುಧಾರಾಣಿ ಇದನ್ನು ತಿಳಿದುಕೊಂಡರೆ ಒಳಿತು
    ಸುಧಾರಾಣಿ ಈಗ ಎಲ್ಲಿದ್ದಾರೆ ? ಬೆಂಗಳೂರಿನಲ್ಲಿ ಅರಿಜೋನಾದಲ್ಲಿ?

    ಮುಖಪುಟ / ಸ್ಯಾಂಡಲ್‌ವುಡ್‌

    Thursday, May 26, 2011, 17:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X