ಮುಪ್ಪಿನಲ್ಲಿ ಮಹೇಶ್ ಬಾಬು ಜೊತೆ ನಟಿಸೋ ಅವಕಾಶ : ಭಾವುಕರಾದ ಅಜ್ಜ
Recommended Video
ಕನ್ನಡದಲ್ಲಿ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ತಮ್ಮ ಇಳಿ ವಯಸ್ಸಿನಲ್ಲಿ ಸಿನಿಮಾದಲ್ಲಿ ನಟಿಸಿ ಕರ್ನಾಟಕದ ತುಂಬ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅದೇ ರೀತಿ ಟಾಲಿವುಡ್ ನಲ್ಲಿ ಗುರುಸ್ವಾಮಿ ಎಂಬ ತಾತ ಸಾಕಷ್ಟು ಫೇಮಸ್ ಆಗಿದ್ದಾರೆ.
ಮಹೇಶ್ ಬಾಬು ನಟನೆಯ 'ಮಹರ್ಷಿ' ಸಿನಿಮಾದಲ್ಲಿ ಗುರುಸ್ವಾಮಿ ಎಂಬ ತಾತ ನಟಿಸಿದ್ದಾರೆ. ಸಿನಿಮಾದ ಸೆಂಕೆಂಡ್ ಹಾಫ್ ನಲ್ಲಿ ಆ ತಾತ ಪಾತ್ರ ಬರುತ್ತದೆ. ಕೆಲವೇ ದೃಶ್ಯಗಳು ಇದ್ದರೂ, ಸಿನಿಮಾ ಮುಗಿದ ಮೇಲೆಯೂ ಆ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಇರುತ್ತದೆ.
ಇಂತಹ ಪಾತ್ರದ ಮೂಲಕ ಗುರುಸ್ವಾಮಿ ತಾತ ತೆಲುಗು ಪ್ರೇಕ್ಷಕರ ಪ್ರೀತಿ ಪಡೆದಿದ್ದಾರೆ. ತಮ್ಮ ಮುಪ್ಪಿನ ವಯಸ್ಸಿನಲ್ಲಿ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುವ ಅವಕಾಶ ನೆನೆದು ಭಾವುಕರಾಗಿದ್ದಾರೆ.

'ಮಹರ್ಷಿ' ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಗುರುಸ್ವಾಮಿ ತಾತ ಕೂಡ ಮಾತನಾಡಿದರು. ಅವರ ಭಾವುಕ ಮಾತುಗಳು ನಟ ಮಹೇಶ್ ಬಾಬು ಹಾಗೂ ಇಡೀ ತಂಡದವರ ಮನಸ್ಸು ಮುಟ್ಟಿದವು.
''ನಾನು ಎಲ್ಲಿಂದ ಎಲ್ಲಿಗೆ ಬಂದಿದ್ದೇನೆ. ನನಗೆ
ಕ್ಯಾಮರಾ ಏನು ತಿಳಿಯದು. ಅದರ ಮುಂದೆ ಹೇಗೆ ನಿಂತು ಕೊಳ್ಳಬೇಕು ಎಂಬುದು ತಿಳಿಯದು. ಹೀಗಿದ್ದ ನನಗೆ ಈ ಸಿನಿಮಾದಲ್ಲಿ ನಟಿಸಲು ಹೇಳಿ ಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು.
ಗುರುಸ್ವಾಮಿ ತಾತನ ತಂದೆ ಕೂಲಿ ಮಾಡುತ್ತಿದ್ದರಂತೆ. ಕಷ್ಟ ಪಟ್ಟು ಓದಿ ಒಂದು ಉದ್ಯೋಗ ಪಡೆದರೂ, ಕುಟುಂಬ ಹಣಕಾಸಿನ ಕಷ್ಟ ಅವರಿಗೆ ಬೇಜಾರು ಉಂಟು ಮಾಡಿತ್ತಂತೆ. ಮನೆಯಲ್ಲಿ ಸಮಯ ಕಳೆದರೆ ಮನಸ್ಸಿಗೆ ಆಗುವ ನೋವನ್ನು ದೂರ ಮಾಡಲು ನಾಟಕ, ವೇದಿಕೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು.

ಹೀಗೆ ಉದ್ಯೋಗ ಮಾಡುತ್ತಲೇ ತನ್ನ ಹವ್ಯಾಸವನ್ನು ಗುರುಸ್ವಾಮಿ ತಾತ ಶುರು ಮಾಡಿದರು. ಯುವಕರ ಜೊತೆ ಸೇರಿ ಒಂದು ಕಿರುಚಿತ್ರದಲ್ಲಿ ನಟಿಸಿದರು. ಇದೇ ಕಿರುಚಿತ್ರ ನೋಡಿದ ನಿರ್ದೇಶಕ ವಂಶಿ 'ಮಹರ್ಷಿ' ಸಿನಿಮಾದ ಒಂದು ಪಾತ್ರಕ್ಕೆ ಅವಕಾಶ ನೀಡಿದರು.
ಹೀಗೆ ಸಿಕ್ಕ ಅವಕಾಶವನ್ನು ತುಂಬ ಚೆನ್ನಾಗಿ ಬಳಸಿಕೊಂಡ ಗುರುಸ್ವಾಮಿ ತಾತ ತಮ್ಮ ಪಾತ್ರದ ಮೂಲಕ ಟಾಲಿವುಡ್ ಜನರ ಮೆಚ್ಚುಗೆ ಪಡೆದಿದ್ದಾರೆ.


Click it and Unblock the Notifications











