Just In
- 15 min ago
ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್
- 16 min ago
ಆರ್ಆರ್ಆರ್, ಅಣ್ಣಾತ್ತೆ ಬಳಿಕ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ
- 1 hr ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 3 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
Don't Miss!
- News
ಮುಂಬೈ ಅನ್ನು ಕರ್ನಾಟಕಕ್ಕೆ ಸೇರಿಸಿ: ಉದ್ಧವ್ ಠಾಕ್ರೆಗೆ ಲಕ್ಷ್ಮಣ ಸವದಿ ತಿರುಗೇಟು
- Sports
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇಂದು ಮತ್ತೊಂದು ಚಿಕಿತ್ಸೆ
- Automobiles
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಟಾಟಾ ನೆಕ್ಸಾನ್ ಇವಿ
- Finance
ಗರಿಷ್ಠ ಮಟ್ಟದಿಂದ 7500 ರು. ದೂರದಲ್ಲಿರುವ ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಲ್ಲಿ ಮಹೇಶ್ ಬಾಬು, ಇಲ್ಲಿ ದರ್ಶನ್ ಮತ್ತು ಶಿವಣ್ಣ
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಮಹರ್ಷಿ ಸಿನಿಮಾ ಕಳೆದ ವಾರ ತೆರೆಕಂಡಿದ್ದು, ಎಲ್ಲೆಡೆ ಭರ್ಜರಿ ಸದ್ದು ಮಾಡ್ತಿದೆ. ಸಿನಿಮಾ ತುಂಬಾ ಚೆನ್ನಾಗಿದೆ, ಇಂದಿನ ಜನಾಂಗಕ್ಕೆ ಈ ಸಿನಿಮಾ ಸ್ಫೂರ್ತಿಯಾಗಿದೆ ಎಂದು ಮಾತುಗಳು ಕೇಳಿಬರುತ್ತಿದೆ.
ವಿಶೇಷ ಅಂದ್ರೆ, ಮಹರ್ಷಿ ಸಿನಿಮಾದಲ್ಲಿ ತೋರಿಸಿರುವ 'ವೀಕೆಂಡ್ ಫಾರ್ಮಿಂಗ್' ಪರಿಕಲ್ಪನೆಗೆ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ವಾರಾಂತ್ಯದಲ್ಲಿ ಪಾರ್ಟಿ, ಪಬ್ ಅಂತೂ ಸುತ್ತಾಡುವ ಬದಲು ವ್ಯವಸಾಯ ಮಾಡಿ, ಶಾಲೆಯಲ್ಲಿ ಕೃಷಿ ಎಂದೇ ಒಂದು ವಿಷಯ ಹೇಳಿಕೊಡಿ ಎಂಬ ಸಂದೇಶ ಸಮಾಜಕ್ಕೆ ಮಾದರಿಯಾಗಿದೆ.
ಸ್ಫೂರ್ತಿಯಾಯ್ತು 'ಮಹರ್ಷಿ' ಚಿತ್ರದ 'ವಾರಾಂತ್ಯದ ವ್ಯವಸಾಯ' ಕಾನ್ಸೆಪ್ಟ್
ರೈತರ, ಜನಸಾಮಾನ್ಯರ, ಹಳ್ಳಿಗಳ ಅಭಿವೃದ್ದಿ ಬಗ್ಗೆ ಮಹೇಶ್ ಬಾಬು ಸಿನಿಮಾಗಳಲ್ಲಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಶ್ರೀಮಂತಡು, ಭರತ್ ಅನೇ ನೇನು ಈಗ ಮಹರ್ಷಿ. ಈ ರೀತಿ ಚಿತ್ರಗಳು ಕನ್ನಡದಲ್ಲೂ ಇದೆ. ಕನ್ನಡ ನಟರು ಈ ರೀತಿ ಸಿನಿಮಾ ಮಾಡಬಲ್ಲರು, ಮಾಡಿದ್ದಾರೆ ಕೂಡ....ಮುಂದೆ ಓದಿ.....

ಸನ್ ಆಫ್ ಬಂಗಾರದ ಮನುಷ್ಯ
ಇತ್ತೀಚಿನ ದಿನದಲ್ಲಿ ರೈತರ ಬಗ್ಗೆ ಅವರ ಸಮಸ್ಯೆಗಳ ಬಗ್ಗೆ ಮತ್ತು ಅದನ್ನ ಹೇಗೆ ಬಗೆಹರಿಸಬೇಕು ಎಂಬುದರ ಕುರಿತು ಬಹಳ ಅಚ್ಚುಕಟ್ಟಾಗಿ ತೋರಿಸಿದ್ದ ಸಿನಿಮಾ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ. ಶಿವರಾಜ್ ಕುಮಾರ್ ನಟನೆಯ ಈ ಚಿತ್ರವನ್ನ ನೋಡಿದ ಪ್ರತಿಯೊಬ್ಬರು ಇದರಲ್ಲಿದ್ದ ಕಾನ್ಸಪ್ಟ್ ಮೆಚ್ಚಿಕೊಂಡಿದ್ದರು. ಈ ರೀತಿ ಸಿನಿಮಾ ಬೇಕು ಎಂದು ಹೇಳಿದ್ದರು.
ವಿಮರ್ಶೆ: 'ಬಂಗಾರದ ಮನುಷ್ಯ'ನ ಪ್ರತಿರೂಪ ಶಿವಣ್ಣನ ಈ 'ಬಂಗಾರ' ರೂಪ

ಕೃಷಿ ಭೂಮಿಯ ಮೇಲೆ ಕಾರ್ಪೊರೇಟ್ ಕಣ್ಣು
ಈಗ ಮಹರ್ಷಿ ಸಿನಿಮಾದಲ್ಲಿ ತೋರಿಸಲಾಗಿರುವ ಕಾನ್ಸಪ್ಟ್ ಮತ್ತು ಬಂಗಾರ ಸನ್ ಆಫ್ ಬಂಗಾರ ಚಿತ್ರದ ಕಾನ್ಸಪ್ಟ್ ಕೂಡ ಒಂದೇ. ರೈತರ ಜಮೀನು ವಶಪಡಿಸಿಕೊಂಡು ಕಾರ್ಪೊರೇಟ್ ಕಂಪನಿಗಳು ತಮ್ಮ ಪ್ರಾಜೆಕ್ಟ್ ಮಾಡುವುದರ ವಿರುದ್ಧ ನಾಯಕ ಹೋರಾಡುತ್ತಾನೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರ ಕೂಡ ಅದೇ. ಈಗ ಮಹರ್ಷಿ ಸಿನಿಮಾದಲ್ಲೂ ಮಹೇಶ್ ಬಾಬು ಪಾತ್ರವೂ ಅದೇ.

ಸ್ಫೂರ್ತಿ, ಕಾಪಿ, ರೀಮೇಕ್ ಅನ್ನೋದು ಮುಖ್ಯವಲ್ಲ
ತೆಲುಗು ಚಿತ್ರಕ್ಕೆ ಕನ್ನಡ ಸಿನಿಮಾ ಸ್ಫೂರ್ತಿ, ಕನ್ನಡ ಚಿತ್ರದ ಕಾಪಿ ಮಾಡಿದ್ದಾರೆ ಅಥವಾ ರೀಮೇಕ್ ಮಾಡಿದ್ದಾರೆ ಅನ್ನೋದು ಮುಖ್ಯವಲ್ಲ. ಒಂದೊಳ್ಳೆ ಕಥೆಯನ್ನ ಜನರಿಗೆ ತಲುಪಿಸುವ ಕೆಲಸವನ್ನ ಈ ಎರಡು ಚಿತ್ರಗಳು ತಮ್ಮದೇ ಚಿತ್ರಕಥೆಯ ಮೂಲಕ ಹೇಳಿದೆ. ಅದು ಜನರಿಗೂ ತಲುಪಿದೆ. ಅದರ ಪರಿಣಾಮವೇ ಈಗ ಮಹರ್ಷಿ ಸಿನಿಮಾದ 'ವೀಕೆಂಡ್ ಫಾರ್ಮಿಂಗ್'ಗೆ ಸ್ಫೂರ್ತಿಗೊಂಡ ಯುವಪಡೆ ಈಗ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ.

ಯಜಮಾನ ಚಿತ್ರವೂ ಅದೇ ಸಾಲಿಗೆ ಸಲ್ಲುತ್ತೆ
ದರ್ಶನ್ ತಮ್ಮ ಸಿನಿಮಾಗಳಲ್ಲಿ ರೈತರ ಏನಾದರೂ ಹೇಳುತ್ತಲೇ ಇರ್ತಾರೆ. ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ದರ್ಶನ್ ಅಭಿನಯದ ಯಜಮಾನ ಸಿನಿಮಾವೂ ಅದೇ ವಿಭಾಗಕ್ಕೆ ಸೇರುತ್ತೆ. ರೈತರು ಯಾರ ಕೈ ಕೆಳಗೆಯೂ ಕೆಲಸ ಮಾಡಬಾರದು, ಅವರೇ ಯಜಮಾನ ಎಂದು ಸಿನಿಮಾ ತೋರಿಸಿದೆ. ಕಾರ್ಪೋರೇಟ್ ಉದ್ಯಮದ ವಿರುದ್ಧ ಡಿ ಬಾಸ್ ಅಬ್ಬರಿಸಿದ್ದರು. ದರ್ಶನ್ ವೃತ್ತಿ ಜೀವನದಲ್ಲಿ ಇದೊಂದು ಹೊಸ ರೀತಿ ಸಿನಿಮಾ ಆಗಿತ್ತು.
Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ..

ಈ ರೀತಿ ಸಿನಿಮಾಗಳು ಹೆಚ್ಚು ಬರಬೇಕು
ಮಹರ್ಷಿ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ಯಜಮಾನ ಇದೆಲ್ಲ ಒಂದು ಉದಾಹರಣೆ ಅಷ್ಟೆ. ಈ ರೀತಿ ಸಿನಿಮಾಗಳು ಇನ್ನು ಹೆಚ್ಚು ಬರಬೇಕು. ಬರಿ ಹೊಡೆದಾಟ, ಪ್ರೀತಿ, ಹೀರೋ ಹೀರೋಯಿನ್ ಅಂತ ಕಮರ್ಷಿಯಲ್ ಸಿನಿಮಾ ಮಾಡೋದರ ಜೊತೆಗೆ ರೈತ, ಜನಸಾಮಾನ್ಯರ ಸಮಸ್ಯೆಯ ಕುರಿತು, ಅದನ್ನ ಬಗೆಹರಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾಗಳು ಬರಬೇಕಿದೆ. ಈ ರೀತಿಯ ಚಿತ್ರಗಳು ಕನ್ನಡದಲ್ಲಿ ಕಮ್ಮಿ ಇದೆ ಎಂಬುದು ಬೇಸರ.