»   » ಚಾರ್ಮಿನಾರ್ ತೆಲುಗು ರೀಮೇಕ್ ನಲ್ಲಿ ಪ್ರಿನ್ಸ್ ಮಹೇಶ್

ಚಾರ್ಮಿನಾರ್ ತೆಲುಗು ರೀಮೇಕ್ ನಲ್ಲಿ ಪ್ರಿನ್ಸ್ ಮಹೇಶ್

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಆರ್ ಚಂದ್ರು ಅವರ ಹಿಟ್ ಚಿತ್ರ 'ಚಾರ್ ಮಿನಾರ್' ಟಾಲಿವುಡ್ ನಲ್ಲಿ ರೀಮೇಕ್ ಆಗುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ತೆಲುಗು ಚಿತ್ರ ನಟ ಸೂಪರ್ ಸ್ಟಾರ್ ಕೃಷ್ಣ ಅವರ ಪುತ್ರ ಪ್ರಿನ್ಸ್ ಮಹೇಶ್ ಬಾಬು ಅಭಿನಯಿಸಲಿದ್ದಾರೆ ಎಂಬುದು ಲೇಟೆಸ್ಟ್ ಸಮಾಚಾರ. 'ಚಾರ್ ಮಿನಾರ್' ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಪ್ರೇಮ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ತೆಲುಗಿನಲ್ಲಿ ಬಹಳ ಕ್ಯಾಚಿ ಶೀರ್ಷಿಕೆಯನ್ನು ಚಂದ್ರು ಕೊಟ್ಟಿದ್ದಾರೆ. ಅದೇನೆಂದರೆ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' (ಕೃಷ್ಣಮ್ಮ ಇಬ್ಬರನ್ನು ಒಂದು ಮಾಡಿದರು) ಎಂಬುದು. ಈ ಚಿತ್ರದ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ತೆಲುಗು ನೇಟಿವಿಟಿಗೆ ತಕ್ಕಂತೆ ತೆರೆಗೆ ತರಲಾಗುತ್ತಿದೆ. [ಚಾರ್ ಮಿನಾರ್ ಚಿತ್ರ ವಿಮರ್ಶೆ]

Mahesh Babu

ಚಿತ್ರದಲ್ಲಿ ಮಹೇಶ್ ಬಾಬು ಅವರದು ಅತಿಥಿ ಪಾತ್ರ. ಸುಧೀರ್ ಬಾಬು ಹಾಗೂ ನಂದಿತಾ ಚಿತ್ರದ ಮುಖ್ಯಪಾತ್ರಧಾರಿಗಳು. ಇಷ್ಟಕ್ಕೂ ಸುಧೀರ್ ಬಾಬು ಅವರು ಮಹೇಶ್ ಬಾಬು ಸೋದರಳಿಯ. ಹಾಗಾಗಿ ಅವರು ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಲು ಒಪ್ಪಿದ್ದಾರೆ ಎನ್ನುತ್ತವೆ ಮೂಲಗಳು.

ಚಿತ್ರ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡುವುದರಲ್ಲಿ ಆರ್ ಚಂದ್ರು ಅವರದು ಎತ್ತಿದ ಕೈ. ತಮ್ಮ 'ಚಾರ್ ಮಿನಾರ್' ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಮಾತನಾಡಿದ್ದರು. ಚಿತ್ರವನ್ನು ನೋಡಿದರೆ ಅವರ ಪ್ರಯತ್ನಕ್ಕೆ ಭೇಷ್ ಹೇಳಲೇಬೇಕು ಅನ್ನುವಂತಿತ್ತು. ಇದೀಗ ತೆಲುಗು ಚಿತ್ರರಂಗದಲ್ಲೂ ಅವರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

English summary
If Tollywood sources are to be belived, Prince Mahesh Babu to do a guest role in R Chandru directional venture 'Krishnamma Kalipindi Iddarini'. It is remake of Kannada hit movie 'Charminar'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada