»   » ಆರ್.ಚಂದ್ರು ಪ್ರೇಮಕಾವ್ಯಕ್ಕೆ 'ಪ್ರಿನ್ಸ್' ಮಹೇಶ್ ಫಿದಾ

ಆರ್.ಚಂದ್ರು ಪ್ರೇಮಕಾವ್ಯಕ್ಕೆ 'ಪ್ರಿನ್ಸ್' ಮಹೇಶ್ ಫಿದಾ

Posted By:
Subscribe to Filmibeat Kannada

'ಟಾಲಿವುಡ್ ಪ್ರಿನ್ಸ್' ಮಹೇಶ್ ಬಾಬು ಡೇಟ್ಸ್ ಹೊಂದಾಣಿಕೆ ಆಗಿದ್ದರೆ, ಆರ್.ಚಂದ್ರು ನಿರ್ದೇಶನದ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದರು.

ಆದ್ರೆ, ಕಾಲ ಕೂಡಿ ಬರಲಿಲ್ಲ. ಮಹೇಶ್ ಬಾಬು ಬದಲು ರಾಣಾ ದಗ್ಗುಬಾಟಿ ಬಣ್ಣ ಹಚ್ಚಿದರು. 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಕಳೆದ ವಾರವಷ್ಟೇ ತೆರೆಗೆ ಬಂತು. ಬಿಜಿ ಶೆಡ್ಯೂಲ್ ಇದ್ದರೂ, ಚಿತ್ರವನ್ನ ನೋಡೋಕೆ ಮಹೇಶ್ ಬಾಬು ಮರೆಯಲಿಲ್ಲ. [ಆರ್ ಚಂದ್ರು ಚಿತ್ರದಲ್ಲಿ ಆರಡಿ ಅಂದಗಾರ ರಾಣಾ ದಗ್ಗುಬಾಟಿ]

Mahesh Babu praises R.Chandru for Krishnamma Kalipindi Iddarini

ವೀಕೆಂಡ್ ನಲ್ಲಿ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರವನ್ನ ಕಣ್ಣಾರೆ ಕಂಡ ಮಹೇಶ್ ಬಾಬುಗೆ, ಆರ್.ಚಂದ್ರು ರಚಿಸಿದ ಪ್ರೇಮಕಾವ್ಯ ಸಖತ್ ಇಷ್ಟವಾಗಿಬಿಟ್ಟಿದೆ. ಚಿತ್ರವನ್ನ ಮನಸಾರೆ ಮೆಚ್ಚಿಕೊಂಡಿರುವ ಮಹೇಶ್ ಬಾಬು ಟ್ವೀಟ್ ಕೂಡ ಮಾಡಿದ್ದಾರೆ.

''ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರವನ್ನ ನೋಡ್ದೆ. ಇದು ನಿಜವಾದ, ಪ್ರಾಮಾಣಿಕ ಲವ್ ಸ್ಟೋರಿ. ಚಿತ್ರವನ್ನ ನೋಡಿ ಎಂಜಾಯ್ ಮಾಡ್ದೆ'' ಅಂತ ಟ್ವೀಟ್ ಮಾಡಿದ್ದಾರೆ.

ಅಲ್ಲದೇ, ತಮ್ಮ ಸಂಬಂಧಿಯಾಗಿರುವ ಸುಧೀರ್ ಆಕ್ಟಿಂಗ್ ಬಗ್ಗೆಯೂ ಹೊಗಳಿದ್ದಾರೆ.

''ಸುಧೀರ್ ಪರ್ಫಾಮೆನ್ಸ್ ಬಹಳ ಇಷ್ಟವಾಯ್ತು. ಇಡೀ ಚಿತ್ರತಂಡಕ್ಕೆ ನನ್ನ ಹಾರ್ದಿಕ ಶುಭಾಶಯಗಳು'' ಅಂತ ಮಹೇಶ್ ಬಾಬು ಟ್ವೀಟಿಸಿದ್ದಾರೆ. [ಪ್ರಿನ್ಸ್ ಮಹೇಶ್ ಗೆ 'ಚಾರ್ಮಿನಾರ್' ಚಂದ್ರು ಡೈರೆಕ್ಟರ್]

Mahesh Babu praises R.Chandru for Krishnamma Kalipindi Iddarini

ಇದೇ ಮೊದಲ ಬಾರಿಗೆ 'ಚಾರ್ಮಿನಾರ್' ರೀಮೇಕ್ ಮೂಲಕ ತೆಲುಗು ಸಿನಿ ಅಂಗಳದಲ್ಲಿ ಖಾತೆ ತೆರೆದಿರುವ ಕನ್ನಡ ನಿರ್ದೇಶಕ ಆರ್.ಚಂದ್ರು ಹೆಮ್ಮೆ ಪಡುವುದಕ್ಕೆ ಇಷ್ಟು ಸಾಕಲ್ವಾ..!?

English summary
Tollywood Prince Mahesh Babu has taken his twitter account to praise Director R.Chandru, Actor Sudheer for coming out with Honest love story movie 'Krishnamma Kalipindi Iddarini'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada