»   » ಪ್ರಿನ್ಸ್ ಮಹೇಶ್ ಬಾಬು ಪುತ್ರಿಗೆ ಮುದ್ದಾದ ಹೆಸರು

ಪ್ರಿನ್ಸ್ ಮಹೇಶ್ ಬಾಬು ಪುತ್ರಿಗೆ ಮುದ್ದಾದ ಹೆಸರು

Posted By:
Subscribe to Filmibeat Kannada
ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಹಾಗೂ ನಮ್ರತಾ ದಂಪತಿ ತಮ್ಮ ಪುಟ್ಟ ಕೂಸಿಗೆ ಮುದ್ದಾ ಹೆಸರನ್ನಿಟ್ಟಿದ್ದಾರೆ. ಶ್ರಾವಣ ಮಾಸದಲ್ಲಿ ಮಹಾಲಕ್ಷ್ಮಿ ರೀತಿ ಮನೆ ಬೆಳೆಗಲು ಬಂದಿರುವ ಹೆಣ್ಣು ಮಗುವಿಗೆ 'ಸಿತಾರಾ' ಎಂದು ನಾಮಕರಣ ಮಾಡಲಾಗಿದೆಯಂತೆ.

ಈ ವಿಷಯವನ್ನು ಸ್ವತಃ ಮಹೇಶ್ ಬಾಬು ಅವರು "Ghattamaneni Sitara is the name:)need all ur love n blessings:)," ಎಂದು ಟ್ವೀಟ್ ಮಾಡಿದ್ದಾರೆ.

ಶ್ರಾವಣ ಶುಕ್ರವಾರದಂದು ಜನಿಸಿದ ಈ ಪುತ್ರಿ ಹಾಗೂ ತಾಯಿ ಇಬ್ಬರು ಆರೋಗ್ಯದಿಂದಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿದೆ. ಹೆಣ್ಣು ಮಗು ಹೆಚ್ಚಾಗಿ ಅಪ್ಪ ಮಹೇಶ್ ಬಾಬು ಹೋಲಿಕೆ ಹೊಂದಿದೆಯಂತೆ. ಮೊದಲಿಗೆ ವೈದ್ಯರ ತಂಡ ನಮತ್ರಾಗೆ ಜುಲೈ 26 ಕ್ಕೆ ಡೆಲಿವರಿ ಡೇಟ್ ಕೊಟ್ಟಿದ್ದರು. ಆದರೆ, ನಮ್ಮ ಲಕ್ ಶುಭ ಶುಕ್ರವಾರದಂದು ಮಹಾಲಕ್ಷ್ಮಿ ಮನೆಗೆ ಬಂದಿದ್ದಾಳೆ ಎಂದು ಅಪ್ಪ ಮಹೇಶ್ ಬಾಬು ಖುಷಿಯಿಂದ ಹೇಳಿಕೊಂಡಿದ್ದಾರೆ.

ಮಹೇಶ್ ಬಾಬು ಹಾಗೂ ಮಾಜಿ ಮಿಸ್ ಇಂಡಿಯಾ ನಮ್ರತಾ ದಂಪತಿಗಳಿಗೆ 6 ವರ್ಷ ಮಗನೊಬ್ಬನಿದ್ದಾನೆ. ಪುತ್ರ ಗೌತಮ್ ಕೃಷ್ಣನ ಜೊತೆ ಆಡಿಕೊಳ್ಳಲು ಹೆಣ್ಣು ಶಿಶು ಬೇಕು ಎಂದು ದಂಪತಿ ಬಯಸಿದ್ದರು ಅದರಂತೆ ಮುದ್ದಾದ ಮಗು ಪಡೆದಿದ್ದಾರೆ.

ಬಿಸಿನೆಸ್ ಮೆನ್ ನಂತರ ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿರುವ ಮಹೇಶ್ ಬಾಬು ಅವರು ವೆಂಕಟೇಶ್ ಜೊತೆ ನಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯಕ್ಕಂತೂ ಈ ತೆಲುಗು ನಟ ಮನೆ ಮಂದಿ ಜೊತೆ ಆಡಿ ನಲಿವುದೇ ಕಾಯಕವಾಗಿದೆ.

ಶುಕ್ರವಾರ (ಜು.20) ಹೈದರಾಬಾದಿನ ಸಪ್ನ ನರ್ಸಿಂಗ್ ಹೋಮ್ ನಲ್ಲಿ ನಮ್ರತಾ ಶಿರೋಡ್ಕರ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನರ್ಮಲ್ ಡೆಲಿವೆರಿನಾ ಅಥವಾ ಸಿ ಸೆಕ್ಷನ್ ನಾ ಎಂಬುದರ ಬಗ್ಗೆ ಮಹೇಶ್ ಬಾಬು ಕುಟುಂಬ ಯಾವುದೇ ಮಾಹಿತಿ ಹೊರ ಹಾಕಿಲ್ಲ. ಆದರೆ, ತೆಲುಗು ಮಾಧ್ಯಮದವರು ಮಹೇಶ್ ಬಾಬು ಕುಟುಂಬದ ಸದಸ್ಯರ ಹಿಂದು ಮುಂದು ಸುತ್ತಾಡುತ್ತಾ ವಿಷಯ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ.

ಮುಂಬೈನಲ್ಲಿ 2005ರಲ್ಲಿ ಬಾಲಿವುಡ್ ನಟಿ, ಮಾಜಿ ಭಾರತ ಸುಂದರಿ ನಮ್ರತಾ ಶಿರೋಡ್ಕರ್ ಅವರನ್ನು ಮಹೇಶ್ ಬಾಬು ಮದುವೆಯಾಗಿದ್ದರು. ಇದಕ್ಕೂ ಮುನ್ನ ಇಬ್ಬರು ಐದು ವರ್ಷಕ್ಕೂ ಅಧಿಕ ಕಾಲ ಪ್ರೇಮ ಜೀವನ ನಡೆಸಿದ್ದರು.

2000ರಲ್ಲಿ ವಂಶಿ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. 2000ನೇ ಇಸವಿಯಲ್ಲಿ ತೆರೆಕಂಡಿದ್ದ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಚೋರ ಚಿತ್ತ ಚೋರ' ಚಿತ್ರದಲ್ಲಿ ನಮ್ರತಾ ಶಿರೋಡ್ಕರ್ ಅಭಿನಯಿಸಿದ್ದರು. ಈ ದಂಪತಿಗೆ 2006, ಆಗಸ್ಟ್ 31ರಂದು ಗಂಡು ಶಿಶು ಪಡೆದಿದ್ದರು. ಮಹೇಶ್ ಬಾಬು ಅವರು ಟಾಲಿವುಡ್ ನ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಾಯಕ ನಟರಾಗಿದ್ದಾರೆ.

English summary
Tollywood Prince Mahesh Babu and Namratha couple named their newly born baby girl as Sitara. Mahesh Babu tweeted "Ghattamaneni Sitara is the name:)need all ur love n blessings:),".
Please Wait while comments are loading...