»   » ಕಾವೇರಿ ವಿವಾದದ ಬಗ್ಗೆ 'ಕುರುಬನ ರಾಣಿ' ನಗ್ಮಾ ಉವಾಚ

ಕಾವೇರಿ ವಿವಾದದ ಬಗ್ಗೆ 'ಕುರುಬನ ರಾಣಿ' ನಗ್ಮಾ ಉವಾಚ

Posted By:
Subscribe to Filmibeat Kannada

ಕಾವೇರಿ ನೀರಿನ ವಿವಾದದ ಬಗ್ಗೆ ಇಡೀ ಕರ್ನಾಟಕವೇ ಹೊತ್ತಿ ಉರಿಯುತ್ತಿದೆ. ಇತ್ತಕಡೆ ಸಿ.ಎಂ ಸಿದ್ಧರಾಮಯ್ಯ ಅವರು ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆಬಾಗಿ, ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟು ಕರ್ನಾಟಕದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನೀರು ಬಿಟ್ಟ ವಿಚಾರ ತಿಳಿದ ರೈತಾಪಿ ವರ್ಗ ಎಲ್ಲಾ ಕಡೆ ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಮಂಡ್ಯ-ಮೈಸೂರಿನಲ್ಲಂತೂ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಈ ಕಾವೇರಿ ನೀರು ವಿವಾದದ ಬಗ್ಗೆ ಹಲವರು ತಮಗೆ ತೋಚಿದಂತೆ ತಮ್ಮ-ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ.[ಸುಪ್ರೀಂ ಆದೇಶ ಪಾಲನೆ, ತಮಿಳುನಾಡಿಗೆ ಹರಿದ ಕಾವೇರಿ]

ಇದೀಗ ನಟಿ ಕಮ್ ಕಾಂಗ್ರೆಸ್ ಮಹಿಳಾ ನಾಯಕಿ ನಗ್ಮಾ ಅವರು ಕಾವೇರಿ ನೀರು ಹಂಚಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರೂ ಕೂಡ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಸ್ಯಾಂಡಲ್ ವುಡ್ ನಲ್ಲಿ ಚಿರಪರಿಚಿತರಾಗಿರುವ ನಟಿ ನಗ್ಮಾ ಅವರು ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದಾರೆ.

ಶಿವಣ್ಣ ಅವರ ಜೊತೆ 'ಕುರುಬನ ರಾಣಿ', ವಿಷ್ಣುವರ್ಧನ್ ಜೊತೆ 'ಹೃದಯವಂತ' ಮತ್ತು ರವಿಚಂದ್ರನ್ ಅವರ ಜೊತೆ 'ರವಿಮಾಮ' ಮುಂತಾದ ಸಿನಿಮಾಗಳಲ್ಲಿ ನಟಿಸಿ, ಮನಗೆದ್ದಿರುವ ನಗ್ಮಾ ಅವರು ಕಾವೇರಿ ತಾಯಿ ಬಗ್ಗೆ ಏನಂತಾರೆ?. ಮುಂದೆ ಓದಿ....

ಮಹಿಳಾ ಕಾಂಗ್ರೆಸ್ ನಾಯಕಿ

ತಮಿಳುನಾಡಿನಲ್ಲಿ ರಾಜಕೀಯದಲ್ಲಿ ಸಕ್ರೀಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ಕಮ್ ಮಹಿಳಾ ಕಾಂಗ್ರೆಸ್ ನಾಯಕಿ ನಗ್ಮಾ ಅವರು, ಕಾವೇರಿ ವಿವಾದದ ಬಗ್ಗೆ, 'ಅತ್ತ ಹಾವು ಸಾಯಬಾರದು, ಇತ್ತ ಕೋಲು ಮುರಿಯಬಾರದು' ಎಂಬ ಧಾಟಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಬೆಂಗಳೂರಿನಲ್ಲಿ ತಮಿಳು ಚಿತ್ರ ಪ್ರದರ್ಶನ ರದ್ದು: ಪೋಸ್ಟರ್ ಗಳಿಗೆ ಬೆಂಕಿ]

ಕರ್ನಾಟಕಕ್ಕೆ ಚಿರಋಣಿ

"ಚೆನ್ನೈಗೆ ಎಷ್ಟು ದೊಡ್ಡ ಪ್ರವಾಹ ಬಂತು, ಎಷ್ಟು ದೊಡ್ಡ ಸಮಸ್ಯೆ ಎದುರಾಯಿತು. ಆವಾಗ ಹೊರ ರಾಜ್ಯದಿಂದ ಬಂದು ಎಲ್ಲರೂ ಸಹಾಯ ಮಾಡಿದರು. ಅದ್ರಲ್ಲೂ ವಿಶೇಷವಾಗಿ ಕರ್ನಾಟಕದ ಜನತೆ ತುಂಬಾನೇ ಸಹಾಯ ಮಾಡಿದ್ದಾರೆ. ಅದನ್ನು ಖಂಡಿತವಾಗಲೂ ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ". -ನಗ್ಮಾ.[ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ ನಟ ದರ್ಶನ್]

ಸಮಸ್ಯೆ ಎಲ್ಲರಿಗೂ ಇರುತ್ತದೆ

"ಇದೀಗ ಕಾವೇರಿ ನೀರು ವಿವಾದ ಆಗ್ತಾ ಇದೆ. ಆದ್ರೆ ನಾವು ಮಾತನಾಡಿದಷ್ಟು ಸುಲಭವಾಗಿ ಈ ಸಮಸ್ಯೆ ಪರಿಹಾರ ಆಗೋದಿಲ್ಲ. ಇದರಲ್ಲಿ ಕೂಡ ಕೆಲವು ಸಮಸ್ಯೆಗಳು ಇವೆ. ಕರ್ನಾಟಕದವರು ಖಂಡಿತವಾಗಲೂ ನಮಗೆ ಏನೂ ದ್ರೋಹ ಮಾಡೋದಿಲ್ಲ. ಅವರಿಗೂ ಕೆಲವು ಸಮಸ್ಯೆ ಇರುತ್ತೆ. ಅದರ ಬಗ್ಗೆ ನಾವೆಲ್ಲ ಕಾಮೆಂಟ್ ಮಾಡಬಾರದು, ಮಾಡಲು ಆಗೋದಿಲ್ಲ".-ನಗ್ಮಾ.[ತಮಿಳುನಾಡಿಗೆ ಕಾವೇರಿ ನೀರು, ಸೋಮವಾರ ಸುಪ್ರೀಂಗೆ ಅರ್ಜಿ]

ಕಾವೇರಿ ಗಲಾಟೆ ದೊಡ್ಡದೇನಲ್ಲ

"ಚೆನ್ನೈ ಬಂದ ಪ್ರವಾಹ ಸಮಸ್ಯೆ ಮುಗಿದಿದೆ. ಆ ಸಂದರ್ಭದಲ್ಲಿ ಯಾರೆಲ್ಲಾ ಏನೇನೂ ಸಹಾಯ ಮಾಡಿದ್ದಾರೆ, ಬೆಂಗಳೂರು ನಗರದಿಂದ ಬಂದು ಎಲ್ಲರೂ ತುಂಬಾ ಸಹಾಯ ಮಾಡಿದ್ದಾರೆ. ಅದು ಎಲ್ಲರಿಗೂ ಗೊತ್ತಿದೆ, ಅದಕ್ಕೆ ತುಂಬಾ ಜನ ಸಾಕ್ಷಿ ಇದ್ದಾರೆ. ಆದ್ದರಿಂದ ಇದೀಗ ಈ ಕಾವೇರಿ ಗಲಾಟೆ ದೊಡ್ಡ ಗಲಾಟೆ ಅಂತ ನನಗೆ ಅನ್ನಿಸುತ್ತಿಲ್ಲ". -ನಗ್ಮಾ.

ರೈತರ ಬಗ್ಗೆ ಯೋಚನೆ ಮಾಡಿ

"ಕಾವೇರಿ ನೀರಿಗಿಂತ ಇನ್ನೂ ದೊಡ್ಡ ದೊಡ್ಡ ಸಮಸ್ಯೆ ಇದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಮುಂದೆ ಕಾವೇರಿ ವಿಚಾರ ತುಂಬಾ ದೊಡ್ಡದೇನಲ್ಲ, ಹಾಗಾಗಿ ಅದರ ಬಗ್ಗೆ ನಾನೇನು ಅಂತಹ ಕಾಮೆಂಟ್ ಏನೂ ಮಾಡೋದಿಲ್ಲ. ಮೊದಲು ರೈತರ ಸಮಸ್ಯೆ ಬಗ್ಗೆ ನಾವೆಲ್ಲಾ ಆಲೋಚನೆ ಮಾಡಬೇಕು". -ನಗ್ಮಾ.

'ಕಾಂಗ್ರೆಸ್ ಪಕ್ಷ ಬಡವರ ಬಂಧು'

"ಕಾವೇರಿ ನೀರಿನ ವಿಚಾರಕ್ಕೆ ಬಂದಾಗ ಅದು ತುಂಬಾ ಸುಲಭದಲ್ಲಿ ಪರಿಹಾರ ಕಾಣೋ ವಿಚಾರ ಅಲ್ಲ, ಬಹಳ ಕಷ್ಟಕರವಾಗಿದೆ. ಅದನ್ನು ರಾಜ್ಯವೇ ನಿರ್ಧರಿಸಿ, ಕ್ರಮ ಕೈಗೊಳ್ಳಬೇಕು. ನಮ್ಮ ಹೈಕಮಾಂಡ್ ನಿರ್ಧಾರ ಮಾಡಬೇಕು. ಇನ್ನು ಕಾಂಗ್ರೆಸ್ ಪಕ್ಷ ಯಾವಾಗಲೂ ಬಡವರ ಬಂಧು, ಈ ಪಕ್ಷ ಸದಾ ಬಡವರಿಗಾಗಿ ಮಿಡಿಯುತ್ತದೆ".-ನಗ್ಮಾ.

ಭೇದ-ಭಾವ ಮಾಡೋಲ್ಲ

"ನಮಗೆ ಎಲ್ಲರೂ ಒಂದೇ, ಇದರಲ್ಲಿ ತಮಿಳುನಾಡು ಜನ ಬೇರೆ, ಕರ್ನಾಟಕ ಜನ ಬೇರೆ ಅಂತ ಬೇದ ಭಾವ ಇಲ್ಲ. ತಮಿಳುನಾಡಿಗೆ ಪ್ರವಾಹ ಬಂದಾಗ ಎಲ್ಲರೂ ಸೇರಿಯೇ ಸಮಸ್ಯೆ ಪರಿಹಾರ ಮಾಡಿದ್ದು. ಅದರಲ್ಲಿ ಹೆಚ್ಚಾಗಿ ಕರ್ನಾಟಕ ಜನತೆಯೇ ತಮಿಳುನಾಡಿಗೆ ಸಹಾಯ ಮಾಡಿದ್ದು. ಅದನ್ನು ಯಾವತ್ತೂ ಮರೆಯಬಾರದು".-ನಗ್ಮಾ.

ಸಮಸ್ಯೆಗೆ ಪರಿಹಾರ ರಾಹುಲ್ ಗಾಂಧಿ

"ಚೆನ್ನೈ ಪ್ರವಾಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೇ ಖುದ್ದಾಗಿ ಬಂದು ಎಲ್ಲವನ್ನು ನೋಡಿದ್ದಾರೆ. ಅವರು ಎಲ್ಲರನ್ನು ಮಾತಾಡಿಸಿ, ಅವರ ಸಮಸ್ಯೆ ಕೇಳುತ್ತಾರೆ. ಆದ್ದರಿಂದ ಈ ವಿಚಾದರಲ್ಲೂ ಖಂಡಿತ ಏನಾದ್ರೂ ಮಾಡೇ ಮಾಡುತ್ತಾರೆ. ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ". -ನಗ್ಮಾ.

English summary
Actress-Mahila Congress Leader Nagma speaks about 'Cauvery water dispute' in Chennai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada