For Quick Alerts
  ALLOW NOTIFICATIONS  
  For Daily Alerts

  ಗಣತಂತ್ರದಿನದಂದು ಮಜ್ಜಿಗೆಹುಳಿ ಒಳ್ಳೆ ಬಾಡೂಟ ಗುರೂ ಪ್ರೋಮೋ ಸಾಂಗ್!

  |

  ಹೌದು, ಗಣರಾಜ್ಯೋತ್ಸವದಿನದಂದು ಬೆಳಗ್ಗೆ 11ಗಂಟೆಯಿಂದ ಮಜ್ಜಿಗೆಹುಳಿ ಒಳ್ಳೆ ಬಾಡೂಟ ಗುರೂ!. ಮಜ್ಜಿಗೆಹುಳಿ ಚಿತ್ರತಂಡ ಬಾಡೂಟದ ಕಥೆಯನ್ನು ಹಾಡಿನ ಮೂಲಕ ಗಣರಾಜ್ಯೋತ್ಸವದ ದಿನವಾದ ನಾಳೆ ಚಿತ್ರದ ಪ್ರಮೋಷನ್‍ಗೆ ಚಾಲನೆ ನೀಡುತ್ತಿದ್ದೆ.

  ಎಸ್.ಎಲ್.ವಿ, ಆರ್ಟ್ಸ್ ಬ್ಯಾನರ್ ಅಡಿ ರಾಮಚಂದ್ರ ಎಸ್. ನಿರ್ಮಿಸಿರುವ ಮಜ್ಜಿಗೆಹುಳಿ ಎಂಬ ಅಪ್ಪಟ್ಟ ಸಸ್ಯಾಹಾರಿ ಖಾದ್ಯ ಒಳ್ಳೆ ಬಾಡೂಟ ಅಂತ ಕರೆಸಿಕೊಂಡಿದೆ. ಆದರೆ ಈ ಬಾಡೂಟದ ಕಥೆಯನ್ನು ನಾಳೆ ಬೆಳಗ್ಗೆ ಲಹರಿ ಮ್ಯೂಸಿಕ್ ಮೂಲಕ ನೀವು ಕೂಡ ಕೇಳಬಹುದು.

  ನವಜೋಡಿಯ ಫಸ್ಟ್ ನೈಟ್ ರೂಮಲ್ಲಿ 'ಮಜ್ಜಿಗೆಹುಳಿ' ಒಳ್ಳೆ ಬಾಡೂಟ ಗುರೂ ನವಜೋಡಿಯ ಫಸ್ಟ್ ನೈಟ್ ರೂಮಲ್ಲಿ 'ಮಜ್ಜಿಗೆಹುಳಿ' ಒಳ್ಳೆ ಬಾಡೂಟ ಗುರೂ

  ಈ ಮಜ್ಜಿಗೆಹುಳಿಯ ಕಥೆಯನ್ನು ಹಾಡಿನ ಮೂಲಕ ಹೇಳುತ್ತಿದ್ದಾರೆ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಗಾಯಕರಾದ ಗುರುಕಿರಣ್. ಈ ಬಾಡೂಟದ ಹಾಡಿಗೆ ಸಂಗೀತವನ್ನು ಎಂ. ಸಂಜೀವ್‍ರಾವ್ ನೀಡಿದ್ದು, ಈ ಚಿತ್ರದ ನಿರ್ದೇಶಕರಾದ ರವೀಂದ್ರ ಕೊಟಕಿ ಸಾಹಿತ್ಯದ ರಚನೆ ಮಾಡಿದ್ದಾರೆ.

  ದಿಕ್ಷಿತ್ ವೆಂಕಟೇಶ್-ರೂಪಿಕಾ ಜೋಡಿಯಾಗಿ ನಟಿಸಿರುವ, ಒಂದೇ ಕೋಣೆಯಲ್ಲಿ ಇಡೀ ಚಿತ್ರವನ್ನು 28 ಪಾತ್ರಗಳೊಂದಿಗೆ ಚಿತ್ರಿಸಿದ್ದಾರೆ. ಮಜ್ಜಿಗೆಹುಳಿ ಮಾಡುವ ಬಗ್ಗೆ ಹಿರಿಯರು ಹೇಳಿರುವ ಮಾತುಗಳು, ಅದಕ್ಕೆ ಚಿತ್ರತಂಡ ಹೇಳಿದ ಬಾಡೂಟದ ಕಥೆಗೆ ಈ ಲಿಂಕ್ ನೋಡಿ

  ಇಡೀ ಸಿನಿಮಾ ಕೇವಲ ಒಂದೇ ಕೋಣೆಯಲ್ಲಿ ಇಪ್ಪತ್ತೆಂಟು ಪಾತ್ರಧಾರಿಗಳೊಂದಿಗೆ ಈ ಚಿತ್ರವನ್ನು ಚಿತ್ರಕರಿಸಲಾಗಿದೆ. ಸಂಪೂರ್ಣ ಹೊಸತನದೊಂದಿಗೆ ಪ್ರಯೋಗತ್ಮಾಕವಾದ ಮಜ್ಜಿಗೆಹುಳಿ-ಒಳ್ಳೆ ಬಾಡೂಟವಾಗಿ ಜನರ ಎದುರಿಗೆ ಬರಲು ಸಿದ್ದವಾಗುತ್ತಿದೆ. ಡಿಸೆಂಬರ್‍ನಲ್ಲಿ ಮಜ್ಜಿಗೆಹುಳಿಯ ರುಚಿಯನ್ನು ಕನ್ನಡ ಪ್ರೇಕ್ಷ್ಷಕರು ಸವಿಯಬಹುದು.

  ಮಜ್ಜಿಗೆಹುಳಿ ವಿಶೇಷತೆಗಳನ್ನು ಫಿಲ್ಮಿಬಿಟ್ ಜೊತೆಗೆ ಹಂಚಿಕೊಂಡ ನಿರ್ದೇಶಕ ರವೀಂದ್ರ ಕೊಟಕಿ ವಿವರಿಸಿದ್ದು ಹೀಗೆ 'ಮೊದಲರಾತ್ರಿ ಅದನ್ನು ಎರಡು ರೀತಿಯಲ್ಲಿ ನೋಡಬೇಕಾಗುತ್ತದೆ. ಅದು ಮದುವೆಯಾಗದವರಿಗೆ ಅದು ನಾಳೆ ನನಸಾಗಲಿರುವ ಕನಸು, ಅದೇ ಮದುವೆಯಾದವರಿಗೆ ಅದು ಅವಿಸ್ಮರಣೀಯ ರಾತ್ರಿ.

  ಹೊಸದಾಗಿ ಮದುವೆಯಾದ ನವಜೋಡಿಯೊಂದು ಮೊದಲರಾತ್ರಿಯನ್ನು ಜೀವನದ ಅತ್ಯಂತ ಮಧುರರಾತ್ರಿಯಾಗಿಸಿಕೊಳ್ಳಲು ಮದುವೆ ಮನೆಯ ಗದ್ದಲದಿಂದ ದೂರವಾಗಿ ಗೋವಾದಲ್ಲಿ ಆ ರಾತ್ರಿಯನ್ನು ಕಳೆಯುವುದಕ್ಕೆ ಮುಂದಾಗುತ್ತಾರೆ. ಹೀಗೆ ಮುಂದಾದ ಆ ಜೋಡಿಯ ಜೀವನದಲ್ಲಿ ಆ ರಾತ್ರಿ ಏನೆಲ್ಲಾ ಘಟನಾವಳಿಗೂ ನಡೆಯುತ್ತದೆ ಎಂಬುವುದೇ ಮಜ್ಜಿಗೆಹುಳಿಯ ಒನ್‍ಲೈನ್ ಕಥೆ' ಎನ್ನುತ್ತಾರೆ.

  English summary
  Majjigehuli Kannada Comedy Film directed by Ravi Kotaki is set to release soon. Film has Roopika and Dikkshit Venkatesh in the lead roles. A promo song will be released on Republic day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X