twitter
    For Quick Alerts
    ALLOW NOTIFICATIONS  
    For Daily Alerts

    ವಿದ್ಯಾರ್ಥಿಗಳಿಗೆ 'ಗಂಧದ ಗುಡಿ' ಸಿನಿಮಾ ತೋರಿಸಿ: ಸರ್ಕಾರಕ್ಕೆ ಒತ್ತಾಯ

    |

    ಪುನೀತ್ ರಾಜ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

    ಈ ಡಾಕ್ಯು-ಡ್ರಾಮಾದಲ್ಲಿ ಕರ್ನಾಟಕದ ಹಲವು ಪ್ರೇಕ್ಷಣೀಯ ಸ್ಥಳಗಳನ್ನು, ನಾಡಿನ ಪ್ರಕೃತಿ ಸೊಬಗನ್ನು, ನದಿ-ಅರಣ್ಯದ ಮಹತ್ವವನ್ನು ಸಾರಲಾಗಿದೆ.

    ಒಂದೂವರೆ ಗಂಟೆಯ ಈ ಸಿನಿಮಾವನ್ನು ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಿಸಿ ಮೆಚ್ಚಿದ್ದು, ಈ ಸಿನಿಮಾವನ್ನು ವಿದ್ಯಾರ್ಥಿಗಳಿಗೆ ತೋರಿಸಿ ಎಂಬ ಒತ್ತಾಯ ಹೆಚ್ಚಾಗಿದೆ.

    ಸರ್ಕಾರವೇ ಕಾಳಜಿ‌ ವಹಿಸಿ ನಾಡಿನ ಮಕ್ಕಳಿಗೆ ಈ ಸಿನಿಮಾವನ್ನು ಉಚಿತವಾಗಿ ತೋರಿಸಲಿ ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದ್ದು, ನಾಡಿನ ಹಲವರು ಇದಕ್ಕೆ ದನಿಗೂಡಿಸಿದ್ದಾರೆ.

    ಭೌಗೋಳಿಕ ವೈಭವ ತೋರಿಸುವ ಸಿನಿಮಾ

    ಭೌಗೋಳಿಕ ವೈಭವ ತೋರಿಸುವ ಸಿನಿಮಾ

    ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಮಂಸೋರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದು, ಕರ್ನಾಟಕದ ಪ್ರತೀ ಶಾಲೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ #ಗಂಧದಗುಡಿ ಸಿನೆಮಾ ತೋರಿಸಲಿ. ಕರ್ನಾಟಕದ ಭೌಗೋಳಿಕ ವೈಭವ ಮುಂದಿನ ಪೀಳಿಗೆ ಅರಿಯುವಂತಾಗಲಿ. ಹತ್ತಾರು ಪುಸ್ತಕ ಓದುವುದಕ್ಕಿಂತ ಹೆಚ್ಚುಪರಿಣಾಮಕಾರಿಯಾಗಿ ಸಿನೆಮಾ ವಿಧ್ಯಾರ್ಥಿಗಳಿಗೆ ಅರ್ಥವಾಗುತ್ತದೆ ಎಂದಿದ್ದಾರೆ.

    ಮನವಿ ಮಾಡಿರುವ ಚಕ್ರವರ್ತಿ ಸೂಲಿಬೆಲೆ

    ಮನವಿ ಮಾಡಿರುವ ಚಕ್ರವರ್ತಿ ಸೂಲಿಬೆಲೆ

    ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ‌ ಸೂಲಿಬೆಲೆ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಚಿತ್ರದ ವಸ್ತು ಭವಿಷ್ಯದ ಪೀಳಿಗೆಗೆ ಪ್ರಕೃತಿ & ವನ್ಯ ಜೀವಿಗಳ ಕುರಿತಂತೆ ಆಸಕ್ತಿ & ಪ್ರೀತಿ ಹುಟ್ಟಿಸುವಂಥದ್ದಾಗಿದೆ. ಅದನ್ನೇಕೆ ಶಾಲಾ ಮಕ್ಕಳಿಗೆ ತೋರಿಸುವ ವ್ಯವಸ್ಥೆ ಆಗಬಾರದು? ಸರ್ಕಾರವೇ ಎಲ್ಲೆಡೆ ಈ ಪ್ರಯತ್ನಕ್ಕೆ ಮುಂದಾದರೆ ಪುನೀತ್ ರಾಜಕುಮಾರರ ನೆನಪು ಮತ್ತು ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ' ಎಂದು ಶಿಕ್ಷಣ ಸಚಿವ ನಾಗೇಶ್ ಗೆ ಮನವಿ ಮಾಡಿದ್ದಾರೆ.

    ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ನಾಗೇಶ್

    ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ನಾಗೇಶ್

    ಶಿಕ್ಷಣ ಸಚಿವ ನಾಗೇಶ್ ಸಹ 'ಗಂಧದ ಗುಡಿ' ಸಿನಿಮಾವನ್ನು ನೋಡಿ ಮೆಚ್ಚಿದ್ದು, ' ರಾಜ್ಯದ ರಮಣೀಯ ಪ್ರಕೃತಿ ಸೌಂದರ್ಯ, ವನ್ಯ ಮೃಗಗಳು, ನದಿ, ಸಮುದ್ರ, ಜಲಚರಗಳನ್ನು ಕಣ್ಮನ ತುಂಬುವಂತೆ ಚಿತ್ರಿಸಿ, ಮಹತ್ವದ ಸಂದೇಶವನ್ನು ನೀಡುವ 'ಕರ್ನಾಟಕ ರತ್ನ', ಯುವ ಜನತೆಯ ಕಣ್ಮಣಿ ಪುನೀತ್ ರಾಜಕುಮಾರ್ ಅವರ ಪರಿಸರ ಪ್ರೀತಿಯ 'ಗಂಧದಗುಡಿ' ಇಂದು ಬಿಡುಗಡೆಯಾಗಿದೆ. ಇಡೀ ತಂಡಕ್ಕೆ ಹಾರ್ದಿಕ ಶುಭಾಶಯಗಳು' ಎಂದಿದ್ದಾರೆ.

    ತೆರಿಗೆ ವಿನಾಯಿತಿ ನೀಡಿರುವ ಸರ್ಕಾರ

    ತೆರಿಗೆ ವಿನಾಯಿತಿ ನೀಡಿರುವ ಸರ್ಕಾರ

    ರಾಜ್ಯ ಸರ್ಕಾರ ಈಗಾಗಲೇ 'ಗಂಧದ ಗುಡಿ' ಡಾಕ್ಯು-ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದೆ. ಈಗ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಉಚಿತವಾಗಿ ತೋರಿಸಿದಲ್ಲಿ ಇನ್ನಷ್ಟು ಹೊರೆ ಆಗುವ ಸಾಧ್ಯತೆ ಇದೆ. ಆದರೆ ನಾಡಿನ ಪ್ರಾಕೃತಿಕ ಹಿರಿಮೆಯನ್ನು ಸಾರುವ ಸಿನಿಮಾ 'ಗಂಧದ ಗುಡಿ' ಆಗಿದ್ದು, ಅದರಲ್ಲಿಯೂ ಮಕ್ಕಳ ಮೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಇದಾಗಿದೆ. ಮಕ್ಕಳು ಈ ಸಿನಿಮಾವನ್ನು ನೋಡಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    English summary
    Make students watch Gandhada Gudi docu drama of Puneeth Rajkumar for free many people demanding state government.
    Monday, October 31, 2022, 20:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X