For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಅಣ್ತಮ್ಮಂದಿರಾ, ಯಶ್ 'ಅಣ್ಣಂಗೆ ಲವ್ ಆಗಿದೆ'

  By Suneetha
  |

  ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್' ಭಾರಿ ಸುದ್ದಿಯಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬರಿ ಯಶ್ ಅವರದೇ ಮಾತು. ಸದ್ಯಕ್ಕೆ ನಿರ್ದೇಶಕ ಮಂಜು ಮಾಂಡವ್ಯ ಮತ್ತು ಇಡೀ ಚಿತ್ರತಂಡ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದೆ.

  ಇದೀಗ 'ಮಾಸ್ಟರ್ ಪೀಸ್' ಚಿತ್ರದ ಮೊದಲ ಹಾಡು 'ಅಣ್ಣಂಗೆ ಲವ್ ಆಗಿದೆ' ಡಿಸೆಂಬರ್ 7 ರಂದು ಬಿಡುಗಡೆಯಾಗಿದ್ದು, ಹಾಡಿನ ಮೇಕಿಂಗ್ ವಿಡಿಯೋ ಎಲ್ಲೆಡೆ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಕ್ಷಮೆ ಕೇಳಿದ್ದು ಯಾಕೆ?]

  ನಿರ್ದೇಶಕ ಮಂಜು ಮಾಂಡವ್ಯ ಬರೆದಿರುವ 'ಅಣ್ಣಂಗೆ ಲವ್ ಆಗಿದೆ' ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಅವರು ಧ್ವನಿ ನೀಡಿದ್ದಾರೆ. ಈ ಮೊದಲು ಯಶ್ ಅವರು 'ಮಿ. ಅಂಡ್ ಮಿಸಸ್ ರಾಮಾಚಾರಿ' ಚಿತ್ರದ 'ಅಣ್ತಮ್ಮ' ಎಂಬ ಹಾಡಿಗೆ ವಾಯ್ಸ್ ನೀಡಿದ್ದು, ಆ ಹಾಡು ಕೂಡ ಸಖತ್ ಹಿಟ್ ಆಗಿತ್ತು.

  ನಟ ಯಶ್ ಮತ್ತು ನಟಿ ಶಾನ್ವಿ ಶ್ರೀವಾಸ್ತವ್ ಅವರ ಜೊತೆ ಸುಮಾರು 1000 ಸಹ ಕಲಾವಿದರು ಹಾಗೂ ನೃತ್ಯಪಟುಗಳು ಸೇರಿ ಮಾಡಿರುವ 'ಅಣ್ಣಂಗೆ ಲವ್ ಆಗಿದೆ' ಹಾಡು ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಧೂಳೆಬ್ಬಿಸುತ್ತಿದೆ. ಮುಂದೆ ಓದಿ...[ಇವತ್ತು 'ಮಾಸ್ಟರ್ ಪೀಸ್' ಹಾಡು ಕೇಳಕ್ಕಾಗಲ್ಲ ಬಿಡಿ..!]

  'ಅಣ್ಣಂಗೆ ಲವ್ ಆಗಿದೆ' ಕಲರ್ ಫುಲ್ ಹಾಡು

  'ಅಣ್ಣಂಗೆ ಲವ್ ಆಗಿದೆ' ಕಲರ್ ಫುಲ್ ಹಾಡು

  ಸುಮಾರು 3 ನಿಮಿಷ 23 ಸೆಕೆಂಡ್ ಗಳಷ್ಟು ಇರುವ 'ಅಣ್ಣಂಗೆ ಲವ್ ಆಗಿದೆ' ಹಾಡು ಸಖತ್ ಕಲರ್ ಫುಲ್ ಜೊತೆಗೆ ಯಶ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.[ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್' ಹಾಡುಗಳ ಲಿಸ್ಟ್ ನೋಡಿದ್ರಾ?]

  ದಾಖಲೆ ನಿರ್ಮಿಸಿದ ಹಾಡು

  ದಾಖಲೆ ನಿರ್ಮಿಸಿದ ಹಾಡು

  ಸುಮಾರು 900ಕ್ಕೂ ಹೆಚ್ಚು ನೃತ್ಯಪಟುಗಳು, ಸಹಕಲಾವಿದರು ಹಾಗೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿರುವ 'ಅಣ್ಣಂಗೆ ಲವ್ ಆಗಿದೆ' ಹಾಡು ಚಿತ್ರದ ನಾಯಕನಿಗೆ ಲವ್ ಆಗಿರುವುದನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತದೆ. ಜೊತೆಗೆ ಇಷ್ಟು ಸಿಬ್ಬಂದಿಗಳು ಹಾಗೂ ಸಹಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಂಡಿರುವುದರಿಂದ, ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿರುವ ಹಾಡು ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.

  ಯಶ್ ಅವರಿಗೆ ಮರೆಯಲಾರದ ಹಾಡು

  ಯಶ್ ಅವರಿಗೆ ಮರೆಯಲಾರದ ಹಾಡು

  'ಈ ಹಾಡು ನನ್ನ ಜೀವನದಲ್ಲಿ ಯಾವಾಗಲೂ ನನಗೆ ಮರೆಯಲಾರದ ಒಂದು ಘಟನೆ. ಈ ಹಾಡು ಇಷ್ಟು ಚೆನ್ನಾಗಿ ಮೂಡಿ ಬರಲು ಕಾರಣ ಕೊರಿಯೋಗ್ರಾಫರ್ ಮುರಳಿ ಮಾಸ್ಟರ್. ನನಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟದ್ದಕ್ಕೆ ನಾನು ನಮ್ಮ ಚಿತ್ರದ ನಿರ್ಮಾಪಕ ವಿಜಯ್ ಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಲು ಇಷ್ಟಪಡುತ್ತೇನೆ' ಎಂದು ನಟ ಯಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

  ರಾಕಿಂಗ್ ಸ್ಟಾರ್ ಯಶ್

  ರಾಕಿಂಗ್ ಸ್ಟಾರ್ ಯಶ್

  ನಟ ಯಶ್ ಅವರ ಇಷ್ಟರವರೆಗಿನ ಸಿನಿ ಪಯಣದಲ್ಲಿ 'ಅಣ್ಣಂಗೆ ಲವ್ ಆಗಿದೆ' ಹಾಡು ಮರೆಯಲಾರದ ಹಾಡಂತೆ. ಜೊತೆಗೆ ಮಾಸ್ ಹಾಡು 'ಅಣ್ಣಂಗೆ ಲವ್ ಆಗಿದೆ' ಯಶ್ ಅವರ ಅಭಿಮಾನಿಗಳಿಗೆ ಒಂದೊಳ್ಳೆ ಗಿಫ್ಟ್ ಅಂತಾನೇ ಹೇಳಬಹುದು.

  ಶಾನ್ವಿ ಶ್ರೀವಾಸ್ತವ್

  ಶಾನ್ವಿ ಶ್ರೀವಾಸ್ತವ್

  ಇದೇ ಮೊದಲ ಬಾರಿಗೆ ಗ್ಲಾಮರ್ ಬೊಂಬೆ ನಟಿ ಶಾನ್ವಿ ಶ್ರೀವಾಸ್ತವ್ ಅವರು ಯಶ್ ಅವರ ಜೊತೆ ಕಾಣಿಸಿಕೊಂಡಿದ್ದು, ಚಿರಂಜೀವಿ ಸರ್ಜಾ ಅವರ 'ಚಂದ್ರಲೇಖ' ಚಿತ್ರದ ನಂತರ ಯಶ್ ಅವರ ಜೊತೆ 'ಮಾಸ್ಟರ್ ಪೀಸ್' ಚಿತ್ರದಲ್ಲಿ ಕಾಣಿಸಿಕೊಂಡು ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

  ಯಶ್ ಮತ್ತು ಚಿಕ್ಕಣ್ಣ

  ಯಶ್ ಮತ್ತು ಚಿಕ್ಕಣ್ಣ

  ಈ ಹಾಡಿನಲ್ಲಿ ನಾಯಕ, ನಾಯಕಿ, ಸಹಕಲಾವಿದರು ಮಾತ್ರವಲ್ಲದೇ, ಕಾಮಿಡಿ ನಟ ಚಿಕ್ಕಣ್ಣ ಕೂಡ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಅಂದಹಾಗೆ ಚಿಕ್ಕಣ್ಣ ಅವರು ಈ ಚಿತ್ರದ ಮೂಲಕ ಹಾಫ್ ಸೆಂಚುರಿ ಬಾರಿಸುತ್ತಿದ್ದು, ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಮಾಸ್ಟರ್ ಪೀಸ್' ಚಿತ್ರದಲ್ಲಿ ಚಿಕ್ಕಣ್ಣ ಅವರು ಬ್ರೂಸ್ ಲೀ ಎಂಬ ಹೆಸರಲ್ಲಿ ಮಿಂಚಿದ್ದಾರೆ.

  ಡ್ಯಾನ್ಸ್ ಮಾಸ್ಟರ್ ಮುರಳಿ ಮಾಸ್ಟರ್

  ಡ್ಯಾನ್ಸ್ ಮಾಸ್ಟರ್ ಮುರಳಿ ಮಾಸ್ಟರ್

  ಕನ್ನಡ ಚಿತ್ರರಂಗದ ಹೆಸರಾಂತ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಅವರು ಯಶ್ ಅವರ 'ಮಾಸ್ಟರ್ ಪೀಸ್' ಚಿತ್ರದ 'ಅಣ್ಣಂಗೆ ಲವ್ ಆಗಿದೆ' ಎಂಬ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

  ನಿರ್ದೇಶಕ ಮಂಜು ಮಾಂಡವ್ಯ

  ನಿರ್ದೇಶಕ ಮಂಜು ಮಾಂಡವ್ಯ

  ಈ ಮೊದಲು ನಟ ಯಶ್ ಅವರ ಜೊತೆ 'ರಾಜಾಹುಲಿ' ಚಿತ್ರದಲ್ಲಿ ಮಂಜು ಮಾಂಡವ್ಯ ಅವರು ನಟಿಸಿದ್ದರು. ಇದೀಗ ತಾವೇ ಸಸ್ಪೆನ್ಸ್-ಥ್ರಿಲ್ಲರ್ ಕಥೆಯಾಧರಿತ ಸಿನಿಮಾವನ್ನು ಯಶ್ ಅವರಿಗೆ ಮಾಡಿದ್ದು, 'ಮಾಸ್ಟರ್ ಪೀಸ್' ಮೂಲಕ ನಿರ್ದೇಶಕನ ಪಟ್ಟ ಹೊತ್ತುಕೊಂಡಿದ್ದಾರೆ.

   ಯಶ್-ಶಾನ್ವಿ ಕೆಮಿಸ್ಟ್ರಿ

  ಯಶ್-ಶಾನ್ವಿ ಕೆಮಿಸ್ಟ್ರಿ

  ಮುದ್ದು ಹುಡುಗಿ ಶಾನ್ವಿ ಶ್ರೀವಾಸ್ತವ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಕೆಮಿಸ್ಟ್ರಿ ತೆರೆಯ ಮೇಲೆ ಸಖತ್ತಾಗಿ ವರ್ಕೌಟ್ ಆಗಿದೆ ಎಂಬುದು ಚಿತ್ರದ ಪೋಸ್ಟರ್ ಗಳು ಹೇಳುತ್ತಿವೆ. ಬಹುನಿರೀಕ್ಷಿತ 'ಮಾಸ್ಟರ್ ಪೀಸ್' ಡಿಸೆಂಬರ್ 24ಕ್ಕೆ ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸುತ್ತಿದೆ.

  'ಅಣ್ಣಂಗೆ ಲವ್ ಆಗಿದೆ' ಮೇಕಿಂಗ್ ವಿಡಿಯೋ

  'ಅಣ್ಣಂಗೆ ಲವ್ ಆಗಿದೆ' ಮೇಕಿಂಗ್ ವಿಡಿಯೋ

  ಯಶ್, ಶಾನ್ವಿ ಶ್ರೀವಾಸ್ತವ್ ಹಾಗೂ 1000 ನೃತ್ಯಪಟುಗಳು ಕಾಣಿಸಿಕೊಂಡಿರುವ 'ಮಾಸ್ಟರ್ ಪೀಸ್' ಚಿತ್ರದ ಮೊದಲನೇ ಹಾಡು 'ಅಣ್ಣಂಗೆ ಲವ್ ಆಗಿದೆ' ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ..['ಅಣ್ಣಂಗೆ ಲವ್ ಆಗಿದೆ' ಮೇಕಿಂಗ್ ವಿಡಿಯೋ]

  English summary
  Watch the Making Of 'Annange Love Aagidhe' Song from 'Masterpiece'. Starring Rocking star Yash, Actress Shanvi Srivastava, Chikkanna and others. Directed by Manju Mandavya. Music Composed by V Harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X