For Quick Alerts
  ALLOW NOTIFICATIONS  
  For Daily Alerts

  ಕಾಂಗ್ರೆಸ್ ಪ್ರಚಾರಕ್ಕಾಗಿ ರಸ್ತೆಗಿಳಿದರು ಸ್ಟಾರ್ ಕಲಾವಿದರು

  By Pavithra
  |

  ಚುನಾವಣೆ ಹತ್ತಿರ ಬರುತ್ತಿದೆ. ರಾಜಕೀಯ ಪಕ್ಷಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕಾರ್ಯಗಳನ್ನ ಶುರು ಮಾಡುತ್ತಿವೆ. ಜನರನ್ನ ಯಾವ ರೀತಿಯಲ್ಲಿ ಆಕರ್ಷಣೆ ಮಾಡಲು ಸಾಧ್ಯ ಎನ್ನುವ ಅಂಶಗಳನ್ನ ಹುಡುಕಿ ಸಿನಿಮಾರಂಗದತ್ತ ರಾಜಕೀಯ ವ್ಯಕ್ತಿಗಳು ಮುಖ ಮಾಡಿದ್ದಾರೆ.

  ಕಾಂಗ್ರೆಸ್ ಪಕ್ಷದಿಂದ ಸ್ಟಾರ್ ಕಲಾವಿದರು ಪ್ರಚಾರಕ್ಕಾಗಿ ರಸ್ತೆಗಿಳಿಯುತ್ತಿದ್ದಾರೆ. ಇಂದಿನಿಂದ(ಜ.31) ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಲಿದ್ದಾರೆ. ಚಂದನವನದ ಕನಸಿನ ರಾಣಿ ಮಾಲಾಶ್ರೀ , ಉಮಾಶ್ರೀ ಹಾಗೂ ಹಾಸ್ಯ ಕಲಾವಿದ ಸಾಧುಕೋಕಿಲ ಸದ್ಯ ಕಾಂಗ್ರೇಸ್ ಪಕ್ಷದಿಂದ ಪ್ರಚಾರಕ್ಕೆ ಇಳಿಯುವುದು ಕನ್ಫರ್ಮ್ ಆಗಿದೆ.

  ಸಿನಿಮಾ ಅಷ್ಟೇ ಅಲ್ಲ ನಿಜವಾಗಿಯೂ 'MLA' ಆಗ್ತಾರಂತೆ ಪ್ರಥಮ್ ಸಿನಿಮಾ ಅಷ್ಟೇ ಅಲ್ಲ ನಿಜವಾಗಿಯೂ 'MLA' ಆಗ್ತಾರಂತೆ ಪ್ರಥಮ್

  ನಟಿ ಮಾಲಾಶ್ರೀ ಅವರಿಗೆ ಕ್ಲಾಸ್ ಮತ್ತು ಮಾಸ್ ಎರಡು ರೀತಿಯ ಅಭಿಮಾನಿಗಳು ಇದ್ದಾರೆ. ಇನ್ನು ಸಾಧುಕೋಕಿಲ ತೆರೆ ಮೇಲೆ ಬಂದರೆ ಸಾಕು ಖುಷಿ ಪಡುವ ಜನರು ಸಾಕಷ್ಟಿದ್ದಾರೆ. ಅದೇ ಕಾರಣದಿಂದ ಇವರಿಬ್ಬರನ್ನ ಸ್ಟಾರ್ ಪ್ರಚಾರಕರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

  Malashree, Sadhu Kokila doing election campaign for Congress

  ಡಿ ಕೆ ಶಿವಕುಮಾರ್ ಈ ಮೂರು ಕಲಾವಿದರನ್ನ ತಮ್ಮ ಪಕ್ಷದ ಪ್ರಚಾರದ ಕೆಲಸಕ್ಕಾಗಿ ಆಹ್ವಾನ ಮಾಡಿದ್ದಾರೆ. ಇವರುಗಳನ್ನ ಬಿಟ್ಟು ಇನ್ನು ಅನೇಕರು ಕಾಂಗ್ರೆಸ್ ಪಕ್ಷದ ಪರವಾಗಿ ಓಟು ಕೇಳಲು ನಿಮ್ಮ ಮನೆಯ ಬಾಗಿಲಿಗೆ ಬರಲಿದ್ದಾರೆ.

  English summary
  Kannada cinema artists Malashree, Sadhu Kokila doing election campaign for Congress, These two artist will visit the people and ask them to vote for the Congass
  Friday, February 2, 2018, 9:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X