»   » ಮಾಲಾಶ್ರೀ ಎಲೆಕ್ಷನ್ ಚಿತ್ರಕ್ಕೆ ಭರ್ಜರಿ ಟಿವಿ ರೈಟ್ಸ್

ಮಾಲಾಶ್ರೀ ಎಲೆಕ್ಷನ್ ಚಿತ್ರಕ್ಕೆ ಭರ್ಜರಿ ಟಿವಿ ರೈಟ್ಸ್

Posted By:
Subscribe to Filmibeat Kannada
ಒಂದು ಕಾಲದಲ್ಲಿ ಕನಸಿನ ರಾಣಿ ಎಂದು ಕರೆಸಿಕೊಂಡಿದ್ದ ಮಾಲಾಶ್ರೀ ಈಗ ಆಕ್ಷನ್ ಕ್ವೀನ್. ಅವರ ಆಕ್ಷನ್ ಪ್ರಧಾನ ಚಿತ್ರಗಳು ಬಾಕ್ಸ್ ಆಫೀಸಲ್ಲಿ ತಕ್ಕಮಟ್ಟಿಗೆ ಸದ್ದು ಮಾಡುತ್ತಿವೆ. ಈಗವರ ಲೇಟೆಸ್ಟ್ ಚಿತ್ರ 'ಎಲೆಕ್ಷನ್' ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಇನ್ನೂ ನಿರ್ಮಾಣ ಹಂತದಲ್ಲಿರುವ ಈ ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭರ್ಜರಿ ಬೆಲೆ ಸಿಕ್ಕಿದೆ. ಮೂಲಗಳ ಪ್ರಕಾರ ಎಲೆಕ್ಷನ್ ಚಿತ್ರ ರು.2.5 ಕೋಟಿಗೆ ಮಾರಾಟವಾಗಿದೆಯಂತೆ. ಮಹಿಳೆಯೊಬ್ಬರು ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಇಷ್ಟೊಂದು ಬೆಲೆ ಸಿಕ್ಕುತ್ತಿರುವುದು ಇದೇ ಮೊದಲು.

ಸಾಮಾನ್ಯವಾಗಿ ಉಪೇಂದ್ರ, ಪುನೀತ್, ದರ್ಶನ್, ಶಿವರಾಜ್ ಕುಮಾರ್ ಚಿತ್ರಗಳಿಗೆ ಸ್ಯಾಟಲೈಟ್ ರೈಟ್ಸ್ ನಲ್ಲಿ ಒಳ್ಳೆ ಬೆಲೆ ಸಿಕ್ಕೇ ಸಿಗುತ್ತದೆ. ಆದರೆ ಉಳಿದ ತಾರೆಗಳ ಚಿತ್ರಗಳನ್ನು ಮಾತ್ರ ಟಿವಿ ವಾಹಿನಿಗಳು ಕೊಂಡುಕೊಳ್ಳುವ ಸ್ಥಿತಿಯಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾಲಾಶ್ರೀ ಚಿತ್ರಕ್ಕೆ ಒಳ್ಳೆಯ ಬೆಲೆಯೇ ಸಿಕ್ಕಿದೆ ಎನ್ನಬಹುದು.

'ಎಲೆಕ್ಷನ್' ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಒಂದೇ ಒಂದು ಐಟಂ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆಯಂತೆ. ಈ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿರುವವರು ಬೇರಾರು ಅಲ್ಲ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ.

ವಿಧಾಸಭಾ ಚುನಾವಣೆಗೂ ಮುನ್ನವೇ 'ಎಲೆಕ್ಷನ್' ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬ ಸಿದ್ಧತೆಯಲ್ಲಿ ನಿರ್ಮಾಪಕ ರಾಮು ಇದ್ದಾರೆ. ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯ, ರಾಜೇಶ್ ಅವರ ಛಾಯಾಗ್ರಹಣವಿರುತ್ತದೆ. ಶ್ರೀನಿವಾಸಮೂರ್ತಿ, ಲೋಕನಾಥ್, ಮೈಕೋ ನಾಗರಾಜ್, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಶೋಭರಾಜ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ.

ರಾಮು ಎಂಟರ್ ಪ್ರೈಸಸ್ ಬ್ಯಾನರ್ ನ ಲಾಕಪ್ ಡೆತ್, ಎಕೆ 47, ಸಿಂಹದ ಮರಿ, ಕಲಾಸಿಪಾಳ್ಯ, ಕನ್ನಡದ ಕಿರಣ್ ಬೇಡಿ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಓಂ ಪ್ರಕಾಶ್ ರಾವ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಓಂ ಮತ್ತೊಂದು ಹಿಟ್ ನಿರೀಕ್ಷೆಯಲ್ಲಿದ್ದಾರೆ. (ಏಜೆನ್ಸೀಸ್)

English summary
If sources are to be belived Malashri's Kannada film Election has got 2.5 crores from satellite rights. Malashri would be the first heroine to get such huge money just by satellite channels.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada