»   » ಹೊಸ ಚಿತ್ರಕ್ಕಾಗಿ 9 ಕೆಜಿ ತೂಕ ಇಳಿಸಿದ ಮಾಲಾಶ್ರೀ

ಹೊಸ ಚಿತ್ರಕ್ಕಾಗಿ 9 ಕೆಜಿ ತೂಕ ಇಳಿಸಿದ ಮಾಲಾಶ್ರೀ

Posted By:
Subscribe to Filmibeat Kannada
ಹೊಸ ಚಿತ್ರಕ್ಕಾಗಿ 9 ಕೆಜಿ ತೂಕ ಇಳಿಸಿದ ಮಾಲಾಶ್ರೀ | Filmibeat Kannada

ನಟಿ ಮಾಲಾಶ್ರೀ ಅಭಿನಯದ 'ಉಪ್ಪು ಹುಳಿ ಕಾರ' ಸಿನಿಮಾ ಮುಂದಿನ ಶುಕ್ರವಾರ ತೆರೆಗೆ ಬರಲಿದೆ. ಆ ಚಿತ್ರದ ನಂತರ ಮಾಲಾಶ್ರೀ ಎರಡು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಬರೋಬ್ಬರಿ 35 ಕೆಜಿ ತೂಕ ಇಳಿಸಿಕೊಂಡ ಹಾಸ್ಯ ನಟ ಬುಲೆಟ್ ಪ್ರಕಾಶ್ !

ಮೊದಲು ಕನಸಿನ ರಾಣಿ ನಂತರ ಆಕ್ಷನ್ ಕ್ವೀನ್ ಅಂತ ಕರೆಸಿಕೊಂಡಿದ್ದ ಮಾಲಾಶ್ರೀ ಈಗ ವಿಭಿನ್ನ ಪಾತ್ರ ಮಾಡುವ ಮನಸು ಮಾಡಿದ್ದಾರೆ. ಈ ಬಾರಿ ಹಾರರ್ ಚಿತ್ರಕ್ಕೆ ಕೈ ಹಾಕಿರುವ ಮಾಲಾಶ್ರೀ ತಮ್ಮ ಪಾತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.

Malashri loses her weight

ಡಿಫರೆಂಟ್ ಕಥೆ ಇರುವ ಈ ಹಾರರ್, ಸಿನಿಮಾದಲ್ಲಿ ನಟಿಸುವುದಕ್ಕೆ ಮಾಲಾಶ್ರೀ ಕೂಡ ತುಂಬ ಉತ್ಸುಕರಾಗಿದ್ದಾರೆ. ಚಿತ್ರದ ಕಥೆ ಅವರಿಗೆ ತುಂಬ ಇಷ್ಟ ಆಗಿದ್ದು, ನಟಿಸುವುದಕ್ಕೆ ಓಕೆ ಎಂದಿದ್ದಾರೆ. ಈಗಾಗಲೇ ಆ ಪಾತ್ರಕ್ಕಾಗಿ ತಯಾರಿ ಶುರುವಾಗಿದ್ದು, 9 ಕೆಜಿ ತೂಕ ಕಡಿಮೆ ಮಾಡಿದ್ದಾರಂತೆ. ಅಂದಹಾಗೆ, ಮಾಲಾಶ್ರೀ ಅವರ ಈ ಎರಡು ಹೊಸ ಚಿತ್ರಗಳು ಅವರ ರಾಮು ಫಿಲ್ಮ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿದೆ.

ಇನ್ನು 9 ಕೆ.ಜಿ ತೂಕ ಇಳಿಸಿರುವ ಮಾಲಾಶ್ರೀ ತಾವು ಎಷ್ಟು ತೂಕ ಇದ್ದಾರೆ ಎನ್ನುವ ವಿಷಯವನ್ನು ಹೇಳಿಕೊಂಡಿಲ್ಲ. ಏನೇ ಆದರು ಹೆಣ್ಣುಮಕ್ಕಳು ಅವರ ವಯಸ್ಸು ಮತ್ತು ತೂಕದ ಬಗ್ಗೆ ಬಾಯಿ ಬಿಡುವುದಿಲ್ಲ ಎನ್ನುವುದು ಮತ್ತೆ ಈಗ ಮಾಲಾಶ್ರೀ ಅವರ ಮೂಲಕ ಸಾಬೀತಾಗಿದೆ.

English summary
Actress Malashri loses her 9kg weight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada