For Quick Alerts
  ALLOW NOTIFICATIONS  
  For Daily Alerts

  ಎಲೆಕ್ಷನ್ ಗೆ ರಾಮು 'ಮುತ್ತಿನಂಥ ಹೆಂಡತಿ' ಮಾಲಾಶ್ರೀ

  By Rajendra
  |

  ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಒಬ್ಬ ಸಿನೆಮಾ ತಾರೆಗಳು ಒಂದೊಂದು ರಾಜಕೀಯ ಪಕ್ಷಕ್ಕೆ ನೆಗೆಯುತ್ತಿದ್ದಾರೆ. ಈಗ ತಾವೇನು ಕಮ್ಮಿ ಎಂದು ಕೋಟಿ ನಿರ್ಮಾಪಕ ರಾಮು ಅವರ 'ಮುತ್ತಿನಂಥ ಹೆಂಡತಿ' (1995ರಲ್ಲಿ ತೆರೆಕಂಡ ರಾಮು ನಿರ್ಮಾಣದ ಚಿತ್ರ) 'ಎಲೆಕ್ಷನ್'ಗೆ ಧುಮುಕಿದ್ದಾರೆ!

  ಆದರೆ ಇದು ನಿಜವಾದ ಚುನಾವಣೆಗೆ ಅಲ್ಲವೇ ಅಲ್ಲ. ಅವರ ಮುಂಬರುವ ಚಿತ್ರದ ಹೆಸರೇ 'ಎಲೆಕ್ಷನ್'. ಚಿತ್ರವನ್ನು 2013ರ ಚುನಾವಣೆಗೂ ಮುನ್ನ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ ರಾಮು. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಎನ್ ಓಂ ಪ್ರಕಾಶ್ ರಾವ್.

  ರಾಮು, ಓಂ, ಮಾಲಾಶ್ರೀ ಚಿತ್ರ ಎಂದ ಮೇಲೆ ಕೇಳಬೇಕೆ. ಆಕ್ಷನ್, ಥ್ರಿಲ್ ಜೊತೆಗೆ ಕಾರು ಲಾರಿಗಳ ಮಾರಣಹೋಮ ಪ್ರೇಕ್ಷಕರನ್ನು ತುದಿ ಸೀಟಿಲ್ಲಿ ಕೂರಿಸುವಲ್ಲಿ ಅನುಮಾನವಿಲ್ಲ. ಕನಸಿನ ರಾಣಿ ಮಾಲಾಶ್ರೀ ಅವರು ಈಗ ಆಕ್ಷನ್ ರಾಣಿ ಆಗಿರುವುದು ಗೊತ್ತೇ ಇದೆ.

  ಭೈರವಿ ಐಪಿಎಸ್, ದುರ್ಗಿ, ಚಾಮುಂಡಿ, ಕನ್ನಡದ ಕಿರಣ್ ಬೇಡಿ, ಶಕ್ತಿ ಚಿತ್ರಗಳಲ್ಲಿ ಮಾಲಾಶ್ರೀ ಅವರು ತಮ್ಮ ಖದರ್ ತೋರಿದ್ದಾರೆ. ಈ ಬಾರಿ ಮಾಲಾಶ್ರೀ ಅವರ ಕೈಗೆ ಓಂ ಪ್ರಕಾಶ್ ಯಾವ ಅಸ್ತ್ರ ನೀಡಲಿದ್ದಾರೋ ಸ್ವಲ್ಪ ಸಮಯ ಕಾದರೆ ಗೊತ್ತಾಗುತ್ತದೆ.

  ರಾಮು ಎಂಟರ್ ಪ್ರೈಸಸ್ ಬ್ಯಾನರ್ ನ ಲಾಕಪ್ ಡೆತ್, ಎಕೆ 47, ಸಿಂಹದ ಮರಿ, ಕಲಾಸಿಪಾಳ್ಯ, ಕನ್ನಡದ ಕಿರಣ್ ಬೇಡಿ ಹಿಟ್ ಚಿತ್ರಗಳನ್ನು ಕೊಟ್ಟವರು ಓಂ. ಈಗ ಅವರು ಮತ್ತೊಂದು ಹಿಟ್ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್ 7ರಿಂದ 'ಎಲೆಕ್ಷನ್' ಶುರುವಾಗಲಿದೆ.

  ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯ, ರಾಜೇಶ್ ಅವರ ಛಾಯಾಗ್ರಹಣವಿರುತ್ತದೆ. ಶ್ರೀನಿವಾಸಮೂರ್ತಿ, ಲೋಕನಾಥ್, ಮೈಕೋ ನಾಗರಾಜ್, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಶೋಭರಾಜ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ. (ಏಜೆನ್ಸೀಸ್)

  English summary
  Kannada action queen Malashri new film titled as 'Election'. Malashri husband Ramu produced film is going to hit the silver screen before the mid 2013 Karnataka State Assembly elections according to sources. The film is being directed by N Om Prakash Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X