»   » ಕನ್ನಡ ನ್ಯೂಸ್ ಚಾನೆಲ್ ಗಳ ಮೇಲೆ ಮಾಳವಿಕಾ ಅವಿನಾಶ್ ಗುಡುಗಿದ್ಯಾಕೆ?

ಕನ್ನಡ ನ್ಯೂಸ್ ಚಾನೆಲ್ ಗಳ ಮೇಲೆ ಮಾಳವಿಕಾ ಅವಿನಾಶ್ ಗುಡುಗಿದ್ಯಾಕೆ?

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ 'ಬದುಕು ಜಟಕಾ ಬಂಡಿ' ಕಾರ್ಯಕ್ರಮದಲ್ಲಿ ತಮ್ಮ ಮಾತಿನ ಮೂಲಕವೇ ಅನೇಕ ಕುಟುಂಬಗಳನ್ನು ಒಂದು ಮಾಡಿದ್ದ ನಟಿ ಮಾಳವಿಕಾ ಅವಿನಾಶ್ ಈಗ ಕೊಂಚ ಗರಂ ಆಗಿದ್ದಾರೆ. ಕನ್ನಡ ನ್ಯೂಸ್ ಚಾನೆಲ್ ಗಳ ವಿರುದ್ಧ ಗುಡುಗಿದ್ದಾರೆ.

ಕನ್ನಡ ನ್ಯೂಸ್ ಚಾನೆಲ್ ಗಳ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಸುದೀರ್ಘ ಸ್ಟೇಟಸ್ ಹಾಕುವ ಮೂಲಕ ತಮ್ಮ ಮನದಾಳದ ಮಾತನ್ನ ನಟಿ ಮಾಳವಿಕಾ ಅವಿನಾಶ್ ಹೊರಹಾಕಿದ್ದಾರೆ. [ಕೌಟುಂಬಿಕ ಕೋರ್ಟ್ ನಲ್ಲಿ ಮಾಳವಿಕಾ ಅವಿನಾಶ್!]

ಅಸಲಿಗೆ, ಏಕಾಏಕಿ ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ ನಟಿ ಮಾಳವಿಕಾ ಅವಿನಾಶ್ ಸಿಡಿದೇಳಲು ಒಂದು ಕಾರಣ ಇದೆ. ಅದೇನು ಅಂತ ಡೀಟೇಲ್ ಆಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....

ಕನ್ನಡ ನ್ಯೂಸ್ ಚಾನೆಲ್ ಗಳ ವಿರುದ್ಧ ಮಾಳವಿಕಾ ಅವಿನಾಶ್ ಮಾತು...

''ಕನ್ನಡ ಸುದ್ದಿ ವಾಹಿನಿಗಳಲ್ಲಿ 6.30ಕ್ಕೆ ಬಹುತೇಕ ಸಿನಿಮಾ ಸುದ್ದಿಗಳು ಪ್ರಸಾರವಾಗುತ್ತೆ. ಅದರಲ್ಲಿ ಬಹುತೇಕ ಸುದ್ದಿಗಳು ಅಲ್ಲು ಅರ್ಜುನ್ ಸಮಸ್ಯೆ ಕುರಿತು, ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಕುಟುಂಬದ ನಡುವೆ ಇರುವ ಮನಸ್ತಾಪದ ಕುರಿತದ್ದೇ ಆಗಿರುತ್ತೆ. ಕನ್ನಡ ಚಿತ್ರ 'ಯು-ಟರ್ನ್' ಬಿಡುಗಡೆ ಆಗಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ರವರ 'ಬ್ರಹ್ಮೋತ್ಸವಂ' ಸಿನಿಮಾ ನೋಡಿ 'ಪಿಕ್ಚರ್ ಸೂಪರ್ ಆಗಿದೆ ಸರ್' ಅಂತ ಪ್ರೇಕ್ಷಕರು ಕ್ಯಾಮರಾ ಮುಂದೆ ಕಿರುಚುವುದನ್ನು ತೋರಿಸ್ತಾರೆ. ಜ್ಯೂನಿಯರ್ ಎನ್.ಟಿ.ಅರ್ 100 ಕೋಟಿ ಸಿನಿಮಾ ಬಗ್ಗೆ ಸುದ್ದಿ ಮಾಡ್ತಾರೆ'' - ಮಾಳವಿಕಾ ಅವಿನಾಶ್

ಮಾಳವಿಕಾ ಅವಿನಾಶ್ ಹಾಕಿರುವ ಸ್ಟೇಟಸ್ ಓದಿ....

''ನಾನು ಕೂಡ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದೀನಿ. ಆದ್ರೆ, ಯಾವ ಒಂದು ತೆಲುಗು ನ್ಯೂಸ್ ಚಾನೆಲ್ ಕೂಡ ಒಂದೇ ಒಂದು ಕನ್ನಡ ಚಿತ್ರದ ಬಗ್ಗೆ ಸುದ್ದಿ ಮಾಡುವುದಿಲ್ಲ. ರಾಜ್ಯ ಸಭೆಗೆ ಕರ್ನಾಟಕದಿಂದ ಯಾರು ಹೋಗ್ಬೇಕು, ಯಾರು ಹೋಗ್ಬಾರ್ದು ಅಂತ ಚರ್ಚೆಯಲ್ಲಿ ಭಾಗವಹಿಸಲು ನನಗೆ ಆಮಂತ್ರಣ ನೀಡುತ್ತಿರುವವರು ಇದೇ ನ್ಯೂಸ್ ಚಾನೆಲ್ ನಲ್ಲಿರುವ ಮಂದಿಯೇ.?'' - ಮಾಳವಿಕಾ ಅವಿನಾಶ್ [ಮಾಳವಿಕಾ ಅವಿನಾಶ್ ಈಗ ರಾಜ್ಯ ಬಿಜೆಪಿ ವಕ್ತಾರೆ]

ಫೇಸ್ ಬುಕ್ ನಲ್ಲಿ ವಾದ-ವಿವಾದ.!

ನಟಿ ಮಾಳವಿಕಾ ಅವಿನಾಶ್ ರವರ ಸ್ಟೇಟಸ್ ನಿಂದಾಗಿ ಫೇಸ್ ಬುಕ್ ನಲ್ಲಿ ವಾದ-ವಿವಾದ ಸೃಷ್ಟಿಯಾಗಿದೆ. ಅನೇಕ ಪತ್ರಕರ್ತರೂ ಕೂಡ ನಟಿ ಮಾಳವಿಕಾ ಅವಿನಾಶ್ ರವರಿಗೆ ಸ್ಪಷ್ಟನೆ ನೀಡುತ್ತಿದ್ದಾರೆ.

ಕನ್ನಡ ಚಿತ್ರರಂಗದಿಂದ ಸುದ್ದಿ ಕಡಿಮೆ.!

ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಮಾಚಿಮಂಡ ಅಪ್ಪಯ್ಯ ದೇವಯ್ಯ ಅವರು ಹೇಳುವಂತೆ ಕನ್ನಡ ಚಿತ್ರರಂಗದಿಂದ ಸಿಗುವ ಸುದ್ದಿ ಕಡಿಮೆ. ಸಿನಿಮಾ ಶುರುವಾದಾಗಿನಿಂದಲೂ, ನಿರ್ಮಾಪಕರು ಚಿತ್ರದ ಪ್ರಚಾರದ ಬಗ್ಗೆ ಪ್ಲಾನ್ ಮಾಡಬೇಕು. ಹಾಗೆ ಮಾಡುವ ಕನ್ನಡ ನಿರ್ಮಾಪಕರು ಕಡಿಮೆ.

ಮಾಳವಿಕಾ ಅವಿನಾಶ್ ಕೇಳಿದ ಮತ್ತೊಂದು ಪ್ರಶ್ನೆ

''ಎಲ್ಲಾ ಸುದ್ದಿ ವಾಹಿನಿಗಳು ತೆಲುಗು ಸಿನಿಮಾ ಬಗ್ಗೆ ಸುದ್ದಿ ಮಾಡುತ್ತವೆ. ನಂತರ ಕನ್ನಡ ಚಿತ್ರ ಚೆನ್ನಾಗಿ ಓಡುತ್ತಿಲ್ಲ ಅಂತ ದೂರುತ್ತವೆ. ಇದರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ಹೈದರಾಬಾದ್ ಗೆ ತೆಲುಗು, ಚೆನ್ನೈಗೆ ತಮಿಳು ಇದ್ದರಂತೆ ಬೆಂಗಳೂರಿಗೆ ಕನ್ನಡ ಯಾಕೆ ಇಲ್ಲ?'' ಅಂತ ನಟಿ ಮಾಳವಿಕಾ ಅವಿನಾಶ್ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರ ಕನ್ನಡ ಹಾಡುಗಳು.!

ಮಾಳವಿಕಾ ಅವಿನಾಶ್ ರವರ ಅಭಿಪ್ರಾಯಕ್ಕೆ ದನಿ ಸೇರಿಸಿರುವ ರಮೇಶ್ ರಾಜಾಮಣಿ ಎನ್ನುವವರು ''ಬೆಂಗಳೂರಿನಲ್ಲಿ ಮಾತ್ರ ಎಫ್.ಎಂ ನಲ್ಲಿ ಹಿಂದಿ ಹಾಡುಗಳನ್ನು ಕೇಳುತ್ತೇನೆ. ಆದ್ರೆ ಚೆನ್ನೈನಲ್ಲಿ ಹಾಗೆ ಇಲ್ಲ. ಕನ್ನಡ ಭಾಷೆಗೆ ಬೆಲೆ ಕೊಡುವುದು ಹೀಗಾ? ಹಿಂದಿ ಭಾಷೆಯಲ್ಲಿ ಬರೆದಿರುವ ಜಾಹೀರಾತುಗಳು ಎಲ್ಲೆಡೆ ರಾರಾಜಿಸುತ್ತಿವೆ. ಮುಂಬೈ ಹಾಗೂ ದೆಹಲಿಯಲ್ಲಿ ಕನ್ನಡ ಹಾಡುಗಳು ಪ್ರಸಾರವಾಗುತ್ತಾ?'' ಎಂದು ಪ್ರಶ್ನೆ ಮಾಡಿದ್ದಾರೆ.

ಮೀಡಿಯಾ ಯಾಕೆ ಕೇರ್ ಮಾಡ್ಬೇಕು?

ಟೈಮ್ ಆಫ್ ಇಂಡಿಯಾ ಪತ್ರಿಕೆಯ ಸುನಯನ ಸುರೇಶ್ ರವರು, ''ಇದು ಸಹಜ. 'ತಿಥಿ', 'ಯು-ಟರ್ನ್' ಚಿತ್ರಗಳ ಕುರಿತಾಗಿ ಯಾವ ಸ್ಟಾರ್ ಗಳು ಮಾತನಾಡಲು ಮುಂದಾಗುವುದಿಲ್ಲ. ಕನ್ನಡ ಚಿತ್ರರಂಗ ಒಗ್ಗಟ್ಟಾಗಿ, ತಮ್ಮ ಚಿತ್ರಗಳ ಪ್ರಚಾರ ಹಕ್ಕುಗಳಿಗಾಗಿ ಹೋರಾಟ ಮಾಡದೇ ಇದ್ದರೆ, ಮೀಡಿಯಾ ಯಾಕೆ ಕೇರ್ ಮಾಡ್ಬೇಕು?'' ಅಂತ ಹೇಳಿದ್ದಾರೆ.

ಮಾಳವಿಕಾ ಅವಿನಾಶ್ ಪ್ರತಿಕ್ರಿಯೆ

ಸುನಯನ ಸುರೇಶ್ ಪ್ರಶ್ನೆಗೆ ನಟಿ ಮಾಳವಿಕಾ ಅವಿನಾಶ್ ನೀಡಿರುವ ಪ್ರತಿಕ್ರಿಯೆ ಇದು - ''ಎಲ್ಲಾ ಸುದ್ದಿ ವಾಹಿನಿಗಳು ತೆಲುಗು ಚಿತ್ರರಂಗದ ಕುರಿತಾಗಿ ಸುದ್ದಿ ಪ್ರಸಾರ ಮಾಡುತ್ತೆ. ನಾವು ಗಾಸಿಪ್ ಗಳಿಗೂ ಅರ್ಹರಿಲ್ಲವೇ.?''

ಕನ್ನಡಿಗರಿಗೆ ಏನು ಬೇಕು?

''ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ಗೆ ಏನಾಗಿದೆ ಅಂತ ತಿಳಿದುಕೊಳ್ಳುವ ಕುತೂಹಲ ಕನ್ನಡಿಗರಿಗೆ ಇಲ್ಲ. ಬೇಕಾದರೆ, ಅವರು ತೆಲುಗು ಚಾನೆಲ್ ನೋಡುತ್ತಾರೆ. ದುರಂತ ಅಂದ್ರೆ, ಅದು ಟಿ.ಆರ್.ಪಿ ಕೂಡ ಅಲ್ಲ'' - ಮಾಳವಿಕಾ ಅವಿನಾಶ್

ಕಾಮೆಂಟ್ ಮಾಡುವವರ ಸಂಖ್ಯೆ ಕಮ್ಮಿ ಇಲ್ಲ.!

ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಇತರೆ ಭಾಷೆಗಳ ಸುದ್ದಿ ಬಿತ್ತರವಾಗುವ ಬಗ್ಗೆ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡುವವರ ಸಂಖ್ಯೆ ಕಮ್ಮಿ ಇಲ್ಲ.

ಕನ್ನಡ ಸುದ್ದಿ ವಾಹಿನಿಗಳ ನಡೆ ಸರೀನಾ?

ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಇತರೆ ಭಾಷೆಗಳ ಸುದ್ದಿ ಬಿತ್ತರವಾಗುವುದು ಸರೀನಾ? ಕಾಲಿವುಡ್, ಟಾಲಿವುಡ್, ಬಾಲಿವುಡ್, ಮಾಲಿವುಡ್ ಚಿತ್ರರಂಗದ ಮೇಲೆ ನಿಮಗೆ ಆಸಕ್ತಿ ಇದೆಯಾ?

ನಿಮ್ಮ ಅಭಿಪ್ರಾಯ ಏನು?

ನಟಿ ಮಾಳವಿಕಾ ಅವಿನಾಶ್ ಹೇಳಿರುವ ಮಾತಲ್ಲಿ ಸತ್ಯ ಇದೆ ಅಂತ ಅನಿಸಿದ್ಯಾ? ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ....

English summary
Kannada Actress Malavika Avinash has taken her facebook account to express her displeasure over Kannada News Channels doing stories on Telugu movies and Actors and not Sandalwood and Kannada Actors.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada