»   » ಸಲಿಂಗಕಾಮಿಗಳ ಜೊತೆ ಮಲ್ಲಿಕಾ ಶೆರಾವತ್ ಪಾರ್ಟಿ

ಸಲಿಂಗಕಾಮಿಗಳ ಜೊತೆ ಮಲ್ಲಿಕಾ ಶೆರಾವತ್ ಪಾರ್ಟಿ

Posted By:
Subscribe to Filmibeat Kannada

ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಸಲಿಂಗಕಾಮಿಗಳ ಪರವಾಗಿ ಕಾಯಾ, ವಾಚಾ, ಮನಸಾ ಶ್ರಮಿಸುತ್ತಿರುವುದು ಗೊತ್ತೇ ಇದೆ. ಅವರ ಹಕ್ಕುಗಳನ್ನು ಕಾಪಾಡಬೇಕು ಎಂದು ಪದೇ ಪದೇ ಗಿಳಿಪಾಠ ಒಪ್ಪಿಸುತ್ತಿದ್ದಾಳೆ ಈ ಅರಗಿಣಿ.

ತನ್ನ ಸಲಿಂಗಕಾಮಿ ಗೆಳೆಯರಿಗಾಗಿಯೇ ವಿಶೇಷ ಪಾರ್ಟಿ ಮಾಡಿ ಸೆಲೆಬ್ರೇಟ್ ಮಾಡಿದ್ದಾರೆ ಮಲ್ಲಿಕಾ. ಶನಿವಾರ (ಜು.14) ನಡೆದ ಈ ಪಾರ್ಟಿಗೆ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ತನ್ನ ಸಲಿಂಗಕಾಮಿ ಗೆಳೆಯರಾದ ರಿಕ್ ಫೆರಾರಿ ಹಾಗೂ ಅಲೆಕ್ಸ್ ಅವರನ್ನು ಆಹ್ವಾನಿಸಿದ್ದಳು.


ಈ ಭರ್ಜರಿ ಪಾರ್ಟಿ ನಡೆದದ್ದು ಮಾತ್ರ ಲಾಸ್ ಏಂಜಲೀಸ್ ನಲ್ಲಿ. ಇನ್ನು ಈಕೆಯ ಸಲಿಂಗಕಾಮಿ ಗೆಳೆಯರ ಬಗ್ಗೆ ಹೇಳುವುದಾದರೆ...ಇವರಿಬ್ಬರೂ ಆರ್ಟ್ ಅಂಡ್ ಇಂಟೀರಿಯರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರಂತೆ.

ಒಬ್ಬ ಕಾಮನ್ ಗೆಳೆಯ ಮೂಲಕ ಮಲ್ಲಿಕಾಗೆ ಇವರಿಬ್ಬರ ಪರಿಚಯವಾಗಿದೆ. ಅವರಿಬ್ಬರೂ ಸಲಿಂಗಕಾಮಿಗಳು ಎಂದು ಗೊತ್ತಾದ ಮೇಲೆ ಅವರಿಗೆ ಇನ್ನೂ ಹತ್ತಿರವಾದಳು ಮಲ್ಲಿಕಾ. ಶೀಘ್ರದಲ್ಲೇ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಅಡಿಯುತ್ತಿದ್ದು ಇಬ್ಬರನ್ನೂ ಒಂದೇ ಗೂಡಿಗೆ ಸೇರಿಸಲು ಮುಂದಾಗಿದ್ದಾಳೆ 'ಮರ್ಡರ್' ಬೆಡಗಿ.

ಬಿಸಿಬಿಸಿ ಚುಂಬನ ಸನ್ನಿವೇಶಗಳ ಮೂಲಕ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ ತಾರೆ ಮಲ್ಲಿಕಾ ಶೆರಾವತ್ ಅಭಿನಯದ ಇಂಗ್ಲಿಷ್ ಚಿತ್ರ 'ಹಿಸ್ಸ್' ಠುಸ್ ಆಗಿತ್ತು. ಹಿಸ್ ಚಿತ್ರ ನೆಲಕಚ್ಚಿದ ಮೇಲೆ ಮಲ್ಲಿಕಾ ಹಾಲಿವುಡ್ ಕನಸು ಭಗ್ನವಾಗಿತ್ತು. ತಮ್ಮ ವರ್ಚಸನ್ನು ಮರಳಿ ಪಡೆಯಲು ಐಟಂ ಸಾಂಗ್ ಗಳಲ್ಲಿ ಸೊಂಟ ಬಳುಕಿಸಳು ಮುಂದಾದಳು ಮಾಯಾಂಗನೆ.

ಈಕೆಯ ಐಟಂ ಸಾಂಗ್ ಗಳಿಗೆ ಭರ್ಜರಿ ಬೇಡಿಕೆ ಬರುತ್ತಿದ್ದಂತೆ ದಕ್ಷಿಣ ಭಾರತದಲ್ಲೂ ಹವಾ ಎಬ್ಬಿಸಲು ಬಂದಳು. ಆದರೆ ಆಕೆಯ ಸಂಪೂರ್ಣ ದೃಷ್ಟಿ ಹಾಲಿವುಡ್ ಮೇಲೆ ಇದ್ದ ಕಾರಣ ಅಲ್ಲೇ ನೆಲೆಕಂಡುಕೊಳ್ಳುವ ಪ್ರಯತ್ನಗಳಲ್ಲಿದ್ದಾರೆ. ಸಲಿಂಗಕಾಮಿಗಳಿಗೆ ಪಾರ್ಟಿ ಕೊಡುತ್ತಾ ಅಲ್ಲಿನ ಚಿತ್ರೋದ್ಯಮದ ಗಮನ ಸೆಳೆಯುವ ಪ್ರಯತ್ನ ಮಲ್ಲಿಕಾರದ್ದು. ಆಕೆಯ ಪ್ರಯತ್ನಗಳು ಎಷ್ಟರ ಮಟ್ಟಿಗೆ ಫಲ ನೀಡಿತ್ತವೋ ಕಾದು ನೋಡಬೇಕು.

ಸದ್ಯಕ್ಕೆ ಬಾಲಿವುಡ್ ನ ಕೆಲ ಚಿತ್ರಗಳಲ್ಲೂ ಮಲ್ಲಿಕಾ ಬಿಜಿಯಾಗಿದ್ದಾರೆ. 'ತೇಜ್' ಎಂಬ ಚಿತ್ರದಲ್ಲಿ ಸ್ಪೆಷಲ್ ಐಟಂ ಸಾಂಗ್ ಮಾಡುತ್ತಿದ್ದಾರೆ. 'ಕಿಸ್ಮತ್ ಲವ್ ಪೈಸಾ ಡಿಲ್ಲಿ' ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಈ ಹಿಂದೆ ಪ್ರೇಮ್ ಜೊತೆ 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ "ಮಗಳು ದೊಡ್ಡವಳಾದಳು..." ಎಂಬ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹೃದಯಲ್ಲಿ ಚಿತ್ತಾರ ಬಿಡಿಸಿದ್ದಳು ಮಲ್ಲಿಕಾ ಶೆರಾವತ್. ಮಲ್ಲಿಕಾ ಮತ್ತೊಮ್ಮೆ ಗಾಂಧಿನಗರಕ್ಕೆ ಅಡಿಯಿಡಲಿದ್ದಾರೆ ಎಂಬ ಸುದ್ದಿ ಇದೆ. ಪ್ರೇಮ್ ಜೊತೆ ಕುಣಿಯಲು ಒಂದೇ ಒಂದು ಹಾಡಿಗೆ ರು.50 ಲಕ್ಷ ಎಣಿಸಿದ್ದಳು ಮಲ್ಲಿಕಾ. (ಏಜೆನ್ಸೀಸ್)

English summary
Bollywood actress Mallika Sherawat is a big supporter of gay rights. Now she's hosting an engagement party for her gay friends Rick Ferrari and Alex Bulger in Los Angeles.
Please Wait while comments are loading...