»   » 'ಕಿರುಗೂರಿನ ಗಯ್ಯಾಳಿ'ಯಾಗಿ ಮಾನಸ ಜೋಶಿ

'ಕಿರುಗೂರಿನ ಗಯ್ಯಾಳಿ'ಯಾಗಿ ಮಾನಸ ಜೋಶಿ

Posted By:
Subscribe to Filmibeat Kannada

ಸುಮನಾ ಕಿತ್ತೂರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಿರುಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಹೊಸ ಮುಖ ಸೇರ್ಪಡೆಯಾಗಿದೆ. ಅವರು ಬೇರಾರು ಅಲ್ಲ ಶ್ರೀನಗರ ಕಿಟ್ಟಿ ಜೊತೆಗೆ 'ಬಹುಪರಾಕ್' ಚಿತ್ರದಲ್ಲಿ ಅಭಿನಯಿಸಿದ್ದ ಮಾನಸ ಜೋಶಿ ಮುಖ್ಯ ಪಾತ್ರವನ್ನು ಪೋಷಿಸಲಿದ್ದಾರೆ.

ಈಗಾಗಲೆ ಚಿತ್ರದಲ್ಲಿ ಸಿಂಪಲ್ ಬೆಡಗಿ ಶ್ವೇತಾ ಶ್ರೀವಾತ್ಸವ್, ಅಚ್ಯುತ ಕುಮಾರ್, ಕಿಶೋರ್, ಶರತ್ ಲೋಹಿತಾಶ್ವ, ಸುಕೃತಾ ವಾಗ್ಲೆ ಸೇರಿದಂತೆ ಹಲವಾರು ಕಲಾವಿದರಿದ್ದಾರೆ. ಇದೀಗ ಹೊಸದಾಗಿ ಮಾಸನ ಜೋಶಿ ಅವರನ್ನೂ ಆಯ್ಕೆ ಮಾಡಿದ್ದಾರೆ ಸುಮನಾ. [ಡಾಕ್ಯುಮೆಂಟರಿ ಎನಿಸದ ಡೈನಮೈಟ್ 'ಎದೆಗಾರಿಕೆ' ಚಿತ್ರವಿಮರ್ಶೆ]

Manasa Joshi to act in Kirugurina Gayyaligalu

ಸದ್ಯಕ್ಕೆ ಚಿತ್ರದ ತಾರಾಗಣದ ಆಯ್ಕೆ ಬಹುತೇಕ ಮುಗಿದಿದ್ದು ಮೇ ತಿಂಗಳಲ್ಲಿ ಕಿರುಗೂರಿನ ಗಯ್ಯಾಳಿಗಳು ಚಿತ್ರೀಕರಣ ಶುರುವಾಗಲಿದೆ. ಮನೋಹರ್ ಜೋಶಿ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ 'ಲೂಸಿಯಾ' ಖ್ಯಾತಿಯ, ಮೈಸೂರು ಮೂಲದ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ ಇದೆ.

ಕನ್ನಡದ ಪ್ರಬುದ್ಧ ಲೇಖಕ, ಚಿಂತಕ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ನೀಳ್ಗತೆ 'ಕಿರಗೂರಿನ ಗಯ್ಯಾಳಿಗಳು' ನಾಟಕ ರೂಪ ಪಡೆದು ಜನಪ್ರಿಯಗೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಈ ಕಿರುಕೃತಿಯನ್ನು ನಿರ್ದೇಶಕಿ ಸುಮನಾ ಕಿತ್ತೂರ್ ಅವರು ಬೆಳ್ಳಿತೆರೆಗೆ ತರುತ್ತಿದ್ದಾರೆ.

ದುನಿಯಾ ಸೂರಿ ನಿರ್ಮಾಣದಲ್ಲಿ ಹೊರ ಬರುತ್ತಿರುವ ಈ ಚಿತ್ರಕ್ಕೆ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿಯ ಶ್ವೇತಾ ಶ್ರೀವಾಸ್ತವ್ ಹಾಗೂ ಅಚ್ಯುತ್ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎದೆಗಾರಿಕೆ ಚಿತ್ರದ ನಂತರ ಸುಮನಾ ಅವರು ಈ ಚಿತ್ರ ನಿರ್ದೇಶಿಸುತ್ತಿದ್ದು, ಸಹಜವಾಗಿ ಎಲ್ಲರಿಗೂ ಕುತೂಹಲ ಮೂಡಿಸಿದೆ. (ಏಜೆನ್ಸೀಸ್)

English summary
Actress Manasa Joshi from 'Bahuparak' and 'Last Bus' is now joined the team of Sumana Kittur's 'Kirugurina Gayyaligalu'. The actress will be playing a prominent role in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada