»   » ಡಾ.ರಾಜ್ ಮೊಮ್ಮಗನಿಗಾಗಿ ಬೆಂಗಳೂರಿಗೆ ಬಂದ ಮಲಯಾಳಿ ಚೆಲುವೆ ಈಕೆ!

ಡಾ.ರಾಜ್ ಮೊಮ್ಮಗನಿಗಾಗಿ ಬೆಂಗಳೂರಿಗೆ ಬಂದ ಮಲಯಾಳಿ ಚೆಲುವೆ ಈಕೆ!

Posted By:
Subscribe to Filmibeat Kannada
ಡಾ.ರಾಜ್ ಮೊಮ್ಮಗನಿಗಾಗಿ ಬೆಂಗಳೂರಿಗೆ ಬಂದ ಮಲಯಾಳಿ ಚೆಲುವೆ ಈಕೆ! | Oneindia Kannada

'ಸಿದ್ಧಾರ್ಥ' ಹಾಗೂ 'ರನ್ ಆಂಟನಿ' ಸಿನಿಮಾಗಳ ಬಳಿಕ ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಕುಮಾರ್ ಅಭಿನಯಿಸುತ್ತಿರುವುದು 'ಅನಂತು ವರ್ಸಸ್ ನುಸ್ರತ್' ಚಿತ್ರದಲ್ಲಿ. ವಿನಯ್ ರಾಜ್ ಕುಮಾರ್ ಲಾಯರ್ ಪಾತ್ರದಲ್ಲಿ ಆಕ್ಟ್ ಮಾಡುತ್ತಿರುವ 'ಅನಂತು ವರ್ಸಸ್ ನುಸ್ರತ್' ಸಿನಿಮಾದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಅಷ್ಟು ಬೇಗ ಮತ್ತೊಂದು ಚಿತ್ರಕ್ಕೆ ವಿನಯ್ ರಾಜ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ಅಪ್ಪ ಅಮ್ಮ ಪ್ರೀತಿ' ಎಂಬ ಚಿತ್ರದಲ್ಲಿ ನಟಿಸಲು ವಿನಯ್ ರಾಜ್ ಕುಮಾರ್ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಲವ್ವರ್ ಬಾಯ್ ಆಗಿ ವಿನಯ್ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

ಚೊಚ್ಚಲ ಬಾರಿಗೆ ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ನಾಯಕಿ ಆಗಿ ಮಲಯಾಳಂ ಬೆಡಗಿ ಆಯ್ಕೆ ಆಗಿದ್ದಾರೆ. ಡಾ.ರಾಜ್ ಕುಮಾರ್ ಮೊಮ್ಮಗನ ಚಿತ್ರಕ್ಕಾಗಿ ಬೆಂಗಳೂರಿಗೆ ಬರುತ್ತಿರುವ ಮಲಯಾಳಿ ಚೆಲುವೆ ಯಾರು ಅಂತ ತಿಳಿದುಕೊಳ್ಳುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ....

ಇವರೇ ವಿನಯ್ ರಾಜ್ ಕುಮಾರ್ ನಾಯಕಿ

ವಿನಯ್ ರಾಜ್ ಕುಮಾರ್ ಅಭಿನಯಿಸಲು ಒಪ್ಪಿಕೊಂಡಿರುವ 'ಅಪ್ಪ ಅಮ್ಮ ಪ್ರೀತಿ' ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿರುವವರು ಈಕೆಯೇ.. ಹೆಸರು ಮಾನಸಾ ರಾಧಾಕೃಷ್ಣನ್.

ಅಪ್ಪ-ಅಮ್ಮ-ಪ್ರೀತಿ ಹಿಂದೆ ಬಿದ್ದ ವಿನಯ್ ರಾಜ್ ಕುಮಾರ್

ಮಾನಸಾ ರಾಧಾಕೃಷ್ಣನ್ ಹಿನ್ನಲೆ

ಬಾಲನಟಿಯಾಗಿ 2008 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾನಸಾ ರಾಧಾಕೃಷ್ಣನ್ ನಾಯಕಿ ಆಗಿ ಕಾಲಿವುಡ್ ಹಾಗೂ ಮಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ 'ಅಪ್ಪ ಅಮ್ಮ ಪ್ರೀತಿ' ಮೂಲಕ ಸ್ಯಾಂಡಲ್ ವುಡ್ ಕಡೆ ಮುಖ ಮಾಡಲು ಮಾನಸಾ ರಾಧಾಕೃಷ್ಣನ್ ಮನಸ್ಸು ಮಾಡಿದ್ದಾರೆ.

ಮಾನಸಾಗೆ ಕಥೆ ಇಷ್ಟ ಆಗಿದೆ

'ಅಪ್ಪ ಅಮ್ಮ ಪ್ರೀತಿ' ಚಿತ್ರದ ಕಥೆ ಮಾನಸಾಗೆ ಇಷ್ಟ ಆಗಿದೆ. ಹೀಗಾಗಿ, ಚಿತ್ರದಲ್ಲಿ ನಟಿಸಲು ಮಾನಸಾ ಒಪ್ಪಿಕೊಂಡಿದ್ದಾರೆ. ಆದ್ರೆ, ಅಗ್ರೀಮೆಂಟ್ ಗೆ ಇನ್ನೂ ಸಹಿ ಹಾಕಿಲ್ಲ. ಎಲ್ಲವೂ ನಿರ್ದೇಶಕರ ಪ್ಲಾನ್ ಪ್ರಕಾರ ನಡೆದರೆ, ಮಾನಸಾ ಕನ್ನಡ ಚಿತ್ರಕ್ಕೆ ನಾಯಕಿ ಆಗುವುದು ಪಕ್ಕಾ.

ಅಪ್ಪ-ಅಮ್ಮನಾಗಿ ರಿಯಲ್ ಜೋಡಿ

ನಿಜ ಜೀವನದಲ್ಲಿ ಪತಿ-ಪತ್ನಿ ಆಗಿರುವ ಶರತ್ ಕುಮಾರ್ ಹಾಗೂ ರಾಧಿಕಾ ಶರತ್ ಕುಮಾರ್ 'ಅಪ್ಪ ಅಮ್ಮ ಪ್ರೀತಿ' ಚಿತ್ರದಲ್ಲಿ ಗಂಡ-ಹೆಂಡತಿ ಆಗಿ ಅಪ್ಪ-ಅಮ್ಮನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಅಪ್ಪ ಅಮ್ಮ ಪ್ರೀತಿ' ತಾಂತ್ರಿಕ ವರ್ಗ

'ಅಪ್ಪ ಅಮ್ಮ ಪ್ರೀತಿ' ಚಿತ್ರಕ್ಕೆ ಎನ್.ಎಲ್.ಎನ್ ಮೂರ್ತಿ ಬಂಡವಾಳ ಹಾಕಲಿದ್ದು, 'ರಾಮ ರಾಮ ರೇ' ಖ್ಯಾತಿಯ ಲವಿತ್ ಛಾಯಾಗ್ರಹಣ ಇರಲಿದೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಲಿದ್ದು, ಶ್ರೀಧರ್ ಆಕ್ಷನ್ ಕಟ್ ಹೇಳಲಿದ್ದಾರೆ.

English summary
Manasa Radhakrishnan to make Sandalwood Debut with Vinay Rajkumar's 'Appa Amma Preethi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X