For Quick Alerts
  ALLOW NOTIFICATIONS  
  For Daily Alerts

  ಇದೇ ತಿಂಗಳಲ್ಲಿ ನೋಡಬಹುದು 'ಮನಸು ಮಲ್ಲಿಗೆ'

  By Bharath Kumar
  |

  ಎಸ್.ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮನಸು ಮಲ್ಲಿಗೆ' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇಷ್ಟು ದಿನ ಟ್ರೈಲರ್, ಹಾಡುಗಳ ಮೂಲಕ ಕುತೂಹಲ ಮೂಡಿಸಿರುವ 'ಮನಸು ಮಲ್ಲಿಗೆ' ಇದೇ ತಿಂಗಳಲ್ಲಿ ನೋಡಬಹುದು.

  ಹೌದು, ಮಾರ್ಚ್ 31 ರಂದು 'ಮನಸು ಮಲ್ಲಿಗೆ' ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ. ಅಂದ್ಹಾಗೆ, ಮನಸು ಮಲ್ಲಿಗೆ ಮರಾಠಿ ಭಾಷೆಯ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿರುವ 'ಸೈರಾಟ್' ಚಿತ್ರದ ರೀಮೇಕ್.[ಟ್ರೈಲರ್: ಕನ್ನಡದ 'ಪ್ರೇಮಕಾವ್ಯ' ಆಗುವ ಸೂಚನೆ ಕೊಟ್ಟ 'ಮನಸು ಮಲ್ಲಿಗೆ' ]

  ಈ ಚಿತ್ರದಲ್ಲಿ ನಟ ಸತ್ಯಪ್ರಕಾಶ್ ಅವರು ಮಗ ನಿಶಾಂತ್ ನಾಯಕನಾಗಿ ಅಭಿನಯಿಸಿದ್ದರೆ, ನಾಯಕಿ ಪಾತ್ರದಲ್ಲಿ ರಿಂಕು ರಾಜಗುರು ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ರಂಗಭೂಮಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.['ವಾಲೆಂಟೈನ್ಸ್ ಡೇ' ಪ್ರಯುಕ್ತ 'ಮನಸು ಮಲ್ಲಿಗೆ' ಆಡಿಯೋ ಬಿಡುಗಡೆ]

  ಬೆಂಗಳೂರು, ಹೊಸಪೇಟೆ, ಗದಗ, ಕೊಳ್ಳೇಗಾಲ, ಚಾಮರಾಜನಗರ ಮುಂತಾದ ಪ್ರದೇಶಗಳಲ್ಲಿ ಸುಮಾರು ಮೂವತ್ತು ದಿನಗಳ ಕಾಲ 'ಮನಸ್ಸು ಮಲ್ಲಿಗೆ' ಚಿತ್ರದ ಚಿತ್ರೀಕರಣ ನಡೆದಿದೆ. ಮನೋಹರ ಜೋಷಿ ಛಾಯಾಗ್ರಹಣ, ಇಸ್ಮಾಯಿಲ್ ಕಲಾ ನಿರ್ದೇಶನ, ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್, ಯೋಗರಾಜ್ ಭಟ್, ಕವಿರಾಜ್ ಗೀತ ಸಾಹಿತ್ಯ ಈ ಚಿತ್ರಕ್ಕಿದೆ. ಕಲಾಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ಮತ್ತು ಆಕಾಶ್ ಚಾವ್ಲಾ ನಿರ್ಮಿಸಿದ್ದಾರೆ.[ಕನ್ನಡದ 'ಸೈರಾಟ್'ಗೆ ಟೈಟಲ್ ಫಿಕ್ಸ್!]

  English summary
  S.Narayan directorial Kannada Movie 'Manasu Mallige' has Releasin on March 31st. 'Manasu Mallige' is the remake of Marathi Hit Film 'Sairat'.
  Tuesday, March 21, 2017, 9:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X